alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ರಂಗೇರಿದ ಕಡಲೆಕಾಯಿ ಪರಿಷೆ

ಬೆಂಗಳೂರು ಎಂದಾಕ್ಷಣ ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಹೇಳಲಾಗುತ್ತದೆ. ವಿಧಾನಸೌಧ ಸೇರಿದಂತೆ ಹಲವು ಚಿತ್ರಗಳು ಮನದಲ್ಲಿ ಸುಳಿದಾಡುತ್ತವೆ. ಹೀಗೆ ಸುಳಿದಾಡುವ ಚಿತ್ರಗಳಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಕೂಡ ಒಂದಾಗಿದೆ.

ಬೆಂಗಳೂರು ಬಸವನಗುಡಿಯ ಕಡಲೆಕಾಯಿ ಪರಿಷೆ ಇತಿಹಾಸವನ್ನು ಹೊಂದಿರುವ ಗ್ರಾಮೀಣ ಹಿನ್ನಲೆಯ ಜಾತ್ರೆಯಾಗಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ ರಂಗೇರುತ್ತದೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ದೇವರಿಗೆ ಕಡಲೆಕಾಯಿ ಅರ್ಪಿಸಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ಕಡಲೆಕಾಯಿ ನೀಡಲಾಗುತ್ತದೆ.

ಪರಿಷೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಕಡಲೆಕಾಯಿ ಮಾರಾಟಗಾರರು, ರೈತರು ಆಗಮಿಸುತ್ತಾರೆ. ಹಸಿ ಶೇಂಗಾ, ಬೇಯಿಸಿದ ಕಡಲೆಕಾಯಿ, ಹುರಿದ ಶೇಂಗಾ, ಬೇಯಿಸಿ ಮಸಾಲೆ ಹಾಕಲಾದ ಶೇಂಗಾ, ಹೀಗೆ ಹಲವು ನಮೂನೆಯ ಶೇಂಗಾವನ್ನು ಸವಿಯಬಹುದು.

ಪರಿಷೆಯಲ್ಲಿ ರಾಶಿ, ರಾಶಿಯಾಗಿ ಕಾಣಸಿಗುವ ಶೇಂಗಾವನ್ನು ಖರೀದಿಸಲು ಬೆಂಗಳೂರಿಗರು ಮಾತ್ರವಲ್ಲದೇ ಹೊರಗಿನವರೂ ಬರುತ್ತಾರೆ. ಕಡಲೆಕಾಯಿಯೊಂದಿಗೆ ವಿವಿಧ ವಸ್ತುಗಳು, ಮಕ್ಕಳ ಆಟಿಕೆಗಳು, ಬೆಂಡು –ಬತಾಸು, ಮಂಡಕ್ಕಿ, ತಿಂಡಿ ತಿನಿಸುಗಳ ಅಂಗಡಿಗಳು ಇರುತ್ತವೆ. ಜಾತ್ರೆಯಲ್ಲಿ ಸುತ್ತಾಡಿಕೊಂಡು ಬರುವುದೇ ಸೊಗಸು.

ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಹೆಸರುವಾಸಿಯಾಗಿದೆ. ಕಳೆದ ಬಾರಿ ನೋಟ್ ಬ್ಯಾನ್ ಎಫೆಕ್ಟ್ ನಿಂದ ಮಾರಾಟಗಾರರಿಗೆ ನಗದು, ಚಿಲ್ಲರೆ ಸಮಸ್ಯೆ ಎದುರಾಗಿತ್ತು. ಈ ಬಾರಿ ಭರ್ಜರಿ ವಹಿವಾಟು ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಸ್ಥರು. ಶನಿವಾರ ಮತ್ತು ಭಾನುವಾರ ಪರಿಷೆಯಲ್ಲಿ ಹೆಚ್ಚಿನ ಜನ ಸಂದಣಿ ಕಂಡು ಬಂದಿದ್ದು, ಸೋಮವಾರ ಇನ್ನಷ್ಟು ರಂಗೇರಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...