alex Certify
ಕನ್ನಡ ದುನಿಯಾ       Mobile App
       

Kannada Duniya

ಐಪೋನ್ ಗಾಗಿ ಮಗಳ ಜೊತೆ ಅಪ್ಪ-ಅಮ್ಮ ಮಾಡಿದ್ರು ಈ ಕೆಟ್ಟ ಕೆಲಸ..!

newnorn

ಚೀನಾ ಸೇರಿದಂತೆ ವಿಶ್ವದಾದ್ಯಂತ ಮೊಬೈಲ್ ಹುಚ್ಚರ ಸಂಖ್ಯೆ ಹೆಚ್ಚಾಗ್ತಾ ಇದೆ. ಚೀನಾದಲ್ಲಿ ಐಫೋನ್ ಖರೀದಿಸಲು ಜನ ಏನೆಲ್ಲ ಕಸರತ್ತು ಮಾಡ್ತಿದ್ದಾರೆ. ಆದ್ರೆ ಐಫೋನ್ ಗಾಗಿ ತಂದೆ-ತಾಯಿ ಮಾಡಿರುವ ಈ ಕೆಲಸ ಸಂಬಂಧಕ್ಕೆ ಕಳಂಕ ತರುವಂತಿದೆ.

ವರದಿಗಳ ಪ್ರಕಾರ, ಐಪೋನ್ ಖರೀದಿಗಾಗಿ ದಂಪತಿ 18 ದಿನಗಳ ಮಗುವನ್ನು 3530 ಅಮೆರಿಕನ್ ಡಾಲರ್ ಗೆ ಮಾರಿದ್ದಾರೆ. ಫುಜಿಯನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣ ಕ್ಯುಕ್ಯುನಲ್ಲಿ 18 ದಿನದ ಮಗುವನ್ನು ಖರೀದಿಸುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಹಾಗಾಗಿ ಶಿಶುವನ್ನು ದಂಪತಿ 3530 ಅಮೆರಿಕನ್ ಡಾಲರ್ ಗೆ ಮಾರಿದ್ದಾರೆ.

ಈ ಹಣದಲ್ಲಿ ಅವರು ಒಂದು ಐಫೋನ್ ಹಾಗೂ ಮೋಟರ್ ಬೈಕ್ ಖರೀದಿಸಲು ನಿರ್ಧರಿಸಿದ್ದರು. ಶಿಶುವಿನ ತಾಯಿ ಕೂಡ ಸಣ್ಣ ಪುಟ್ಟ ಕೆಲಸ ಮಾಡ್ತಾಳಂತೆ. ಶಿಶುವಿನ ತಂದೆ ತನ್ನ ಸಮಯವನ್ನು ನೆಟ್ ಮುಂದೆ ಕಳೆಯುತ್ತಾನಂತೆ. ಇಬ್ಬರು 2013ರಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರಂತೆ. ನಂತ್ರ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಬೇಡದ ಗರ್ಭ ಇದಾಗಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...