alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಗುಡಿಯಲ್ಲಿ ಅಲ್ಲಾ, ಈಶ್ವರ

temple-

ಈ ದೇವಸ್ಥಾನವನ್ನು ನೋಡಿದರೆ ಗಾಂಧೀಜಿ ಅವರ “ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್” ಸಾಲುಗಳು ನೆನಪಾಗುತ್ತವೆ. ಏಕೆಂದರೆ ಇಲ್ಲಿ ಅಲ್ಲಾ, ಈಶ್ವರ ಎರಡೂ ದೇವರುಗಳು ಒಂದೇ ಗುಡಿಯಲ್ಲಿ ನೆಲೆಸಿದ್ದಾರೆ.

ಇಂತಹ ಒಂದು ದೇವಸ್ಥಾನವಿರುವುದು ಬಿಹಾರದ ಸಮಸ್ತಿಪುರದ ಜಿಲ್ಲೆಯ ಖುದಿನೇಶ್ವರದಲ್ಲಿ. ಇಲ್ಲಿ ಪ್ರತಿದಿನ ಸಾವಿರಾರು ಹಿಂದೂ, ಮುಸ್ಲಿಮರು ಬಂದು ಅಲ್ಲಾ, ಈಶ್ವರರ ಪೂಜೆ ಸಲ್ಲಿಸುತ್ತಾರೆ.

ಈ ಖುದಿನೇಶ್ವರ ದೇವಸ್ಥಾನ 14, 15 ನೇ ಶತಮಾನದಿಂದಲೇ ಇದೆಯೆಂದು ಹೇಳಲಾಗುತ್ತದೆ. ಮೊದಲು ಇಲ್ಲಿ ಈಶ್ವರನ ಪ್ರತಿಮೆ ಮಾತ್ರ ಇತ್ತಂತೆ. ಆದರೆ ಆ ಲಿಂಗಕ್ಕೆ ಪೂಜೆ ನಡೆಸುವವರು ಮಾತ್ರ ಯಾರೂ ಇರಲಿಲ್ಲ. ಇದನ್ನು ನೋಡಿದ ಖುದಿನಿ ಎಂಬ ಮುಸ್ಲಿಂ ಮಹಿಳೆ ದಿನವೂ ಈಶ್ವರನಿಗೆ ಅಭಿಷೇಕ ಮಾಡಲು ಆರಂಭಿಸಿದಳು.

ಖುದಿನಿಯ ಮರಣಾನಂತರ ಈ ದೇವಸ್ಥಾನದ ಗರ್ಭಗುಡಿಯಲ್ಲೇ ಅವಳ ಅಂತ್ಯಸಂಸ್ಕಾರ ಮಾಡಲಾಯಿತು. ಅಂದಿನಿಂದ ಈ ದೇವಸ್ಥಾನಕ್ಕೆ ಖುದಿನೇಶ್ವರ ಎಂಬ ಹೆಸರು ಬಂತು. ಇಲ್ಲಿ ಬರುವ ಭಕ್ತರು ಜಾತಿಬೇಧವಿಲ್ಲದೇ ಎರಡೂ ದೇವರನ್ನು ಆರಾಧಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...