alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ಟ್ರಾಗ್ರಾಮ್ ಫೋಟೋ ನೋಡಿ ಈ ಹುಡುಗಿಗೆ ಬಂತು ಫೋನ್ ಕರೆ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗ್ತಿದ್ದಂತೆ ಯುವತಿಯೊಬ್ಬಳ ಮಾಡೆಲಿಂಗ್ ಕನಸು ನನಸಾಗಿದೆ. ಯಸ್, ಅಮೆರಿಕಾದ Anokyai ಹೆಸರಿನ 19 ವರ್ಷ ವಯಸ್ಸಿನ ಯುವತಿಯೊಬ್ಬಳ ಫೋಟೋ ಇನ್ಸ್ಟ್ರಾಗ್ರಾಮ್ ನಲ್ಲಿ ವೈರಲ್ ಆಗಿದೆ. ಫೋಟೋ ವೈರಲ್ ಆಗ್ತಿದ್ದಂತೆ Anokyaiಗೆ ಮಾಡೆಲಿಂಗ್ ಆಫರ್ ಬಂದಿದೆ.

ವಾಸ್ತವವಾಗಿ Anokyai ವಾಷಿಂಗ್ಟನ್ ನ ಹೋರ್ವಾಡ್ ಯೂನಿವರ್ಸಿಟಿ ಉತ್ಸವದಲ್ಲಿ ಪಾಲ್ಗೊಳ್ಳಲು ಹೋಗಿದ್ದಳು. ಫೋಟೋಗ್ರಾಫರ್ ಒಬ್ಬರು Anokyai ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಡ್ತಾ ನೋಡ್ತಾ ಇದ್ದಂತೆ ಅನೇಕ ಮಾಡೆಲಿಂಗ್ ಕಂಪನಿಗಳು Anokyaiಗೆ ಕರೆ ಮಾಡಲು ಶುರು ಮಾಡಿವೆ.

ಫೋನ್ ಬರ್ತಿದ್ದಂತೆ ತನ್ನ ಫೋಟೋ ವೈರಲ್ ಆಗಿದೆ ಎಂಬ ವಿಷ್ಯ Anokyaiಗೆ ಗೊತ್ತಾಗಿದೆ. ಆರಂಭದಲ್ಲಿ ಇದನ್ನು ಜೋಕ್ ಎಂದುಕೊಂಡಿದ್ದ Anokyai ನಂತ್ರ ಖುಷಿಪಟ್ಟಿದ್ದಾಳೆ. ಈಗ ತನ್ನದೆ ಇನ್ಸ್ಟ್ರಾಗ್ರಾಮ್ ಅಕೌಂಟ್ ತೆರೆದಿರುವ Anokyai ಗೆ 37 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

2000ನೇ ಇಸವಿಯಲ್ಲಿ ಈಜಿಪ್ಟ್ ನಿಂದ ಅಮೆರಿಕಾಕ್ಕೆ ಬಂದಿದ್ದ Anokyai ಫ್ಯಾಷನ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುವ ಕನಸು ಕಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...