alex Certify
ಕನ್ನಡ ದುನಿಯಾ       Mobile App
       

Kannada Duniya

ಶುಲ್ಕ ಪಡೆಯದೇ ಸಾವಿರಾರು ಹೆರಿಗೆ ಮಾಡಿಸಿರುವ 91 ವರ್ಷದ ವೈದ್ಯೆ

bakti dr

ಆಧುನಿಕ ಜೀವನಶೈಲಿಯಿಂದಾಗಿ ಇತ್ತೀಚೆಗೆ ಜನರಿಗೆ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಏನಾದರೂ ಆದ ಕೂಡಲೇ ಆಸ್ಪತ್ರೆಗಳಿಗೆ ಎಡತಾಕುತ್ತಾರೆ. ಕೆಲವು ಆಸ್ಪತ್ರೆಗಳು ಹಾಗೂ ವೈದ್ಯರು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತವೆ.

ಗರ್ಭಿಣಿಯರೇನಾದರೂ ಆಸ್ಪತ್ರೆಗೆ ದಾಖಲಾದರೆ ಹೆಚ್ಚಿನ ಹಣವನ್ನು ಕೊಡುವ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಇದಕ್ಕಿಂತ ಭಿನ್ನ ಪ್ರಕರಣ ಕುರಿತ ಮಾಹಿತಿ ಇಲ್ಲಿದೆ ನೋಡಿ. ಇಂದೋರ್ ನಲ್ಲಿರುವ ವೈದ್ಯೆಯೊಬ್ಬರು ಸಾವಿರಾರು ಗರ್ಭಿಣಿಯರಿಗೆ ಉಚಿತವಾಗಿಯೇ ಹೆರಿಗೆ ಮಾಡಿಸಿದ್ದಾರೆ. ಇಂದೋರ್ ನ ಮೊದಲ ಎಂಬಿಬಿಎಸ್ ಪದವೀಧರೆಯಾಗಿರುವ ಡಾ. ಭಕ್ತಿ ಯಾದವ್ ಅವರಿಗೀಗ 91 ವರ್ಷ. 1948 ರಿಂದಲೂ ಅವರು ವೈದ್ಯ ವೃತ್ತಿಯಲ್ಲಿದ್ದು, ಇಷ್ಟು ವರ್ಷಗಳ ಅವಧಿಯಲ್ಲಿ ಸಾವಿರಾರು ಬಡವರಿಗೆ, ಗರ್ಭಿಣಿಯರಿಗೆ ಶುಲ್ಕ ಪಡೆಯದೇ ಚಿಕಿತ್ಸೆ ನೀಡಿದ್ದಾರೆ.

ಭಕ್ತಿ ಯಾದವ್ ಅವರು ಇಂದೋರ್ ಮಾತ್ರವಲ್ಲ, ಸುತ್ತಮುತ್ತಲೂ ಭಾರೀ ಫೇಮಸ್. ಉತ್ತರ ಪ್ರದೇಶದಿಂದಲೂ ಅವರ ಬಳಿ ಚಿಕಿತ್ಸೆಗೆ ಹೆಣ್ಣುಮಕ್ಕಳು ಬರುತ್ತಾರೆ. ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಅಕ್ಕರೆಯಿಂದ ಕಾಣುವ ಭಕ್ತಿ ಯಾದವ್, ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ. ಇಂತಹ ಸಾವಿರಾರು ಬಡ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಇವರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...