alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಸೂಪರ್ ಕಂಪ್ಯೂಟರ್ ಸ್ಪೆಷಾಲಿಟಿ ಏನು ಗೊತ್ತಾ?

ಭಾರತದ ಅತಿ ವೇಗದ ಸೂಪರ್ ಕಂಪ್ಯೂಟರ್ ಅನ್ನು ಪುಣೆಯಲ್ಲಿ ಅನಾವರಣ ಮಾಡಲಾಗಿದೆ. ಇದು ಮಲ್ಟಿ ಪೆಟಾಫ್ಲಾಪ್ಸ್ ಅನ್ನು ಒಳಗೊಂಡಿದೆ. ಪೆಟಾಫ್ಲಾಪ್ಸ್ ಅಂದ್ರೆ ಕಂಪ್ಯೂಟರ್ ನ ಪ್ರೊಸೆಸಿಂಗ್ ಸ್ಪೀಡ್ ನ ಅಳತೆ.

ಪ್ರತ್ಯೂಷ್ ಹೆಸರಿನ ಸೂಪರ್ ಕಂಪ್ಯೂಟರ್ ಅನ್ನು ಕೇಂದ್ರ ಸಚಿವ ಹರ್ಷವರ್ಧನ್ ಉದ್ಘಾಟನೆ ಮಾಡಿದ್ದಾರೆ. ಪುಣೆಯ IITMನಲ್ಲಿರೋ ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ನಲ್ಲಿ ಪ್ರತ್ಯೂಷ್ ಸೂಪರ್ ಕಂಪ್ಯೂಟರ್ ಅನ್ನು ಅಳವಡಿಸಲಾಗಿದೆ.

IITM ಭಾರತದಲ್ಲಿ ಹವಾಮಾನ ವರದಿ ನೀಡುವ ರಾಷ್ಟ್ರೀಯ ಸಂಸ್ಥೆ. ಈ ಸೂಪರ್ ಕಂಪ್ಯೂಟರ್ ಅಳವಡಿಕೆಯಿಂದ ಇನ್ಮುಂದೆ ಮಳೆ, ಮಾನ್ಸೂನ್, ಚಂಡಮಾರುತ, ಮೀನುಗಾರಿಕೆ, ಸಮುದ್ರದ ಏರಿಳಿತ, ಬರಗಾಲ, ಪ್ರವಾಹ ಇವೆಲ್ಲದರ ಬಗ್ಗೆ ಇನ್ನಷ್ಟು ನಿಖರ ಮುನ್ಸೂಚನೆ ನೀಡಲು ಸಾಧ್ಯ ಅಂತಾ ಸಂಸ್ಥೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...