alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ಕೆಲಸ ಮಾಡಿ ಕಡಿಮೆ ರಜೆ

working

ಹೆಚ್ಚು ಕೆಲಸ ಕಡಿಮೆ ರಜಾ. ಈ ಪಟ್ಟಿಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಭಾರತೀಯರು ಪ್ರಾಮಾಣಿಕರು. ಹಾರ್ಡ್ ವರ್ಕ್ ಮಾಡುವವರು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಕಷ್ಟಪಟ್ಟು ಕೆಲಸ ಮಾಡುವ ಭಾರತೀಯರು ಕಡಿಮೆ ರಜೆ ಹಾಕುತ್ತಾರೆ ಎನ್ನುವ ವಿಷಯ ಮತ್ತೊಮ್ಮೆ ಸಾಬೀತಾಗಿದೆ.

ಆನ್ಲೈನ್ ಪೋರ್ಟಲ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಶೇಕಡಾ 63ರಷ್ಟು ಭಾರತೀಯರು ಕಡಿಮೆ ರಜೆ ಹಾಕುತ್ತಾರೆಂದು ಸಮೀಕ್ಷೆ ತಿಳಿಸಿದೆ. ಭಾರತೀಯರು ಸರಾಸರಿ ವರ್ಷಕ್ಕೆ 21 ರಜೆ ಪಡೆಯಬಹುದು. ಆದ್ರೆ ಭಾರತೀಯರು ವರ್ಷಕ್ಕೆ 15 ರಜೆ ಮಾತ್ರ ಪಡೆಯುತ್ತಾರಂತೆ.

ಕಡಿಮೆ ರಜೆ ಪಡೆಯುವ ದೇಶದ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಶೇಕಡಾ 68 ಅಂಕ ಪಡೆದಿರುವ ಸ್ಪೇನ್ ಹಾಗೂ ದುಬೈ ಮೊದಲ ಸ್ಥಾನದಲ್ಲಿದೆ. 67 ಅಂಕಗಳೊಂದಿಗೆ ಮಲೇಷ್ಯಾ ಎರಡನೇ ಸ್ಥಾನದಲ್ಲಿದೆ. 64 ಅಂಕ ಪಡೆದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...