alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಸೆಕ್ಸ್ ಬಗ್ಗೆ ಅಧ್ಯಯನ ಬಿಚ್ಚಿಟ್ಟ ಸತ್ಯ

ಭಾರತದಲ್ಲಿ ಸೆಕ್ಸ್ ಇನ್ನೂ ನಿಷೇಧಿಸಲ್ಪಟ್ಟ ವಿಷ್ಯ. ಸೆಕ್ಸ್ ಬಗ್ಗೆ ಸಾರ್ವಜನಿಕವಾಗಿ ಯಾರೂ ಮಾತನಾಡುವುದಿಲ್ಲ. ಮುಚ್ಚಿದ ಕೋಣೆಯಲ್ಲಿ ಏನಾಗ್ತಿದೆ ಎಂಬುದನ್ನು ಹೇಳುವುದಿಲ್ಲ. ಲೈಂಗಿಕ ಆರೋಗ್ಯದ ಸ್ಟಾರ್ಟ್ ಅಪ್ that’s personal ಕಳೆದ 4 ವರ್ಷಗಳಿಂದ 60 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಅವ್ರ ಸೆಕ್ಸ್ ಜೀವನದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅದ್ರಲ್ಲಿ ಬಂದ ಫಲಿತಾಂಶ ದಂಗಾಗಿಸುವಂತಿದೆ.

ಲೈಂಗಿಕತೆಗೆ ಸಂಬಂಧಿಸಿದಂತೆ ಯಾವ ವಸ್ತು ಹೆಚ್ಚು ಮಾರಾಟವಾಗುತ್ತದೆ ಎಂಬ ಪ್ರಶ್ನೆಗೆ ಭಾರತೀಯ ಪುರುಷರು ಲುಬ್ರಿಕೆಂಟ್ಸ್ ಎಂದು ಉತ್ತರ ನೀಡಿದ್ದರೆ ಮಹಿಳೆಯರು ಇಂಟಿಮೆಟ್ ಮಸಾಜರ್ ಎಂದಿದ್ದಾರೆ.

ಲೈಂಗಿಕ ವಸ್ತುಗಳನ್ನು ಹೆಚ್ಚು ಖರೀದಿ ಮಾಡುವ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದರೆ ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದೆ. ನಗರಗಳ ವಿಚಾರಕ್ಕೆ ಬಂದ್ರೆ ಮುಂಬೈ ಮೊದಲ ಸ್ಥಾನದಲ್ಲಿದೆ. ದೆಹಲಿ ಹಾಗೂ ಬೆಂಗಳೂರು ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಅಧ್ಯಯನದ ಪ್ರಕಾರ ವಡೋದರಾ, ಪುಣೆ ಮತ್ತು ತಿರುವನಂತಪುರಂಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಂಡೋಮ್ ಖರೀದಿ ಮಾಡ್ತಾರಂತೆ. ಕಾಂಡೋಮ್ ನ ಒಟ್ಟು ಖರೀದಿ ಬಗ್ಗೆ ಮಾತನಾಡುವುದಾದ್ರೆ ಪುರುಷರು ಶೇಕಡಾ 62ರಷ್ಟು ಕಾಂಡೋಮ್ ಖರೀದಿ ಮಾಡ್ತಾರಂತೆ.

ಉಳಿದ ದೇಶಗಳಂತೆ ಫೆಬ್ರವರಿಯನ್ನು ಅತ್ಯಂತ ಹೆಚ್ಚು ರೋಮ್ಯಾಂಟಿಕ್ ತಿಂಗಳೆಂದು ಭಾರತೀಯರು ಪರಿಗಣಿಸಿದ್ರೆ ಮಾರ್ಚ್ ತಿಂಗಳನ್ನು ಕಡಿಮೆ ರೋಮ್ಯಾಂಟಿಕ್ ತಿಂಗಳೆಂದು ಪರಿಗಣಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...