alex Certify
ಕನ್ನಡ ದುನಿಯಾ       Mobile App
       

Kannada Duniya

ಇದಕ್ಕಾಗಿ ಸೆಕ್ಸ್ ಬಿಡಲೂ ಸಿದ್ಧರಿದ್ದಾರೆ ಭಾರತೀಯರು…!

ಸೆಕ್ಸ್ ಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಜನರಿದ್ದಾರೆ. ಆದ್ರೆ ಭಾರತೀಯರ ಸ್ವಭಾವ ಮಾತ್ರ ಭಿನ್ನವಾಗಿದೆ. ಭಾರತೀಯರು ಈ ಸಂಗತಿಗಾಗಿ ಸೆಕ್ಸ್ ತ್ಯಾಗ ಮಾಡ್ತಾರೆ. ಒಂದು ವಾರದವರೆಗೆ ಸೆಕ್ಸ್ ಜೀವನದಿಂದ ದೂರವಿರಲು ಸಿದ್ಧರಾಗ್ತಾರೆ.

ಸೆಕ್ಸ್ ಹಾಗೂ ನಿದ್ರೆ. ಈ ಎರಡನ್ನೂ ಯಾರೂ ಬಿಟ್ಟಿರಲು ಸಾಧ್ಯವಿಲ್ಲ. ಸಮೀಕ್ಷೆ ಪ್ರಕಾರ, ಭಾರತೀಯರು ಈ ಎರಡೂ ವಿಷಯಕ್ಕಿಂತ ಇನ್ನೊಂದು ಸಂಗತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಟ್ರಾವೆಲ್ ಬುಕ್ಕಿಂಗ್ ಪ್ಲಾಟ್ಫಾರ್ಮ್ ಎಕ್ಸ್ಪೀಡಿಯಾ ಸಮೀಕ್ಷೆ ಪ್ರಕಾರ, ಭಾರತೀಯರು ರಜೆಯ ಹಿಂದೆ ಬಿದ್ದಿದ್ದಾರಂತೆ. ರಜೆಗಾಗಿ ಆಲ್ಕೋಹಾಲ್, ಒಂದೊಳ್ಳೆ ಆಹಾರ, ಸೆಕ್ಸ್ ಕೂಡ ಬಿಡಲು ಸಿದ್ಧವಂತೆ.

ಸರ್ವೆ ಪ್ರಕಾರ ಜನರು ಕೆಲಸ ಆಯ್ಕೆ ಮಾಡಿಕೊಳ್ಳುವ ಮೊದಲು ರಜೆ ಎಷ್ಟು ಸಿಗುತ್ತೆ ಎಂಬುದನ್ನು ನೋಡ್ತಾರಂತೆ. ಹೆಚ್ಚು ರಜೆ ಸಿಗುವ ಕೆಲಸವನ್ನು ಆಯ್ಕೆ ಮಾಡಿಕೊಳ್ತಾರಂತೆ. ರಜೆಗಾಗಿ ಜನರು ಹೆಚ್ಚು ಹಾತೊರೆಯುತ್ತಿದ್ದಾರೆಂದ್ರೆ ಸರ್ವೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ರಜೆಗಾಗಿ ಎಲ್ಲವನ್ನೂ ಬಿಡಲು ಸಿದ್ಧ ಎಂದಿದ್ದಾರೆ.

2016ಕ್ಕೆ ಹೋಲಿಸಿದ್ರೆ ಈ ಬಾರಿ ಶೇಕಡಾ 54ರಷ್ಟು ಮಂದಿ ಟಿವಿ ಹಾಗೂ ಶೇಕಡಾ 23ರಷ್ಟು ಮಂದಿ ಒಂದು ವಾರದ ಸೆಕ್ಸ್ ಕೇವಲ ಒಂದು ದಿನದ ರಜೆಗಾಗಿ ಬಿಡಲು ಸಿದ್ಧರಂತೆ. ಹಿಂದಿನ ವರ್ಷ ಕಡಿಮೆ ರಜೆ ಸಿಕ್ಕಿದೆ ಎನ್ನುವ ಕಾರಣಕ್ಕೆ ಈ ವರ್ಷ ಹೆಚ್ಚು ರಜೆ ಪಡೆಯಲು ಇಚ್ಛಿಸುವವರೂ ಇದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...