alex Certify
ಕನ್ನಡ ದುನಿಯಾ       Mobile App
       

Kannada Duniya

ನಿಬ್ಬೆರಗಾಗಿಸುತ್ತೆ ಭಾರತೀಯ ಜೋಡಿಯ ಈ ದಾಖಲೆ…!

ಭಾರತದ ಇಬ್ಬರು ಯುವಕರು ವಿಶಿಷ್ಟ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಹೊಟ್ಟೆಯ ಮೇಲೆ ಅತಿ ಹೆಚ್ಚು ಕಲ್ಲಂಗಡಿ ಹಣ್ಣನ್ನು ಒಡೆಯುವ ಮೂಲಕ ಗಿನ್ನಿಸ್ ದಾಖಲೆಯ ಪುಟದಲ್ಲಿ ಇವರ ಹೆಸರು ಸೇರ್ಪಡೆಯಾಗಿದೆ.

ವಿಸ್ಪಿ ಜಿಮ್ಮಿ ಕರಡಿ ಹಾಗೂ ಅವರ ಆತ್ಮೀಯ ಸ್ನೇಹಿತ ವಿಸ್ಪಿ ಬಜಿ ಕಸದ್ ಜೊತೆಯಾಗಿ ಈ ದಾಖಲೆ ಮಾಡಿದ್ದಾರೆ. ಒಂದು ನಿಮಿಷದಲ್ಲಿ 49 ಕಲ್ಲಂಗಡಿ ಹಣ್ಣುಗಳನ್ನು ಹೊಟ್ಟೆಯ ಮೇಲಿಟ್ಟುಕೊಂಡು ಒಡೆದಿದ್ದಾರೆ.

ಸೂರತ್ ನಲ್ಲಿ ಇವರಿಬ್ಬರೂ ಮಾರ್ಷಲ್ ಆರ್ಟ್ಸ್ ಪಟುಗಳು. ಅತ್ಯಂತ ಚಾಕಚಕ್ಯತೆಯಿಂದ ಸ್ವಲ್ಪವೂ ಗಾಯವಾಗದಂತೆ ಹೊಟ್ಟೆಯ ಮೇಲೆ ಕಲ್ಲಂಗಡಿ ಹಣ್ಣುಗಳನ್ನು ಒಡೆದಿದ್ದಾರೆ.

ಈ ವಿಡಿಯೋವನ್ನು ಯುಟ್ಯೂಬ್ ನಲ್ಲೂ ಅಪ್ಲೋಡ್ ಮಾಡಲಾಗಿದೆ. 30,000ಕ್ಕೂ ಹೆಚ್ಚು ಜನರು ವಿಡಿಯೋ ವೀಕ್ಷಿಸಿದ್ದಾರೆ. ಭಾರತೀಯರ ವಿಶಿಷ್ಟ ಸಾಹಸವನ್ನು ಮೆಚ್ಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...