alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಒಂದು ಅಪರೂಪದ ‘ಲವ್ ಸ್ಟೋರಿ’…!

dc-Cover-33m5ibp3rg18c5ggodrqbc3250-20160217125728.Medi

ಪ್ರೀತಿಸಿ ವಿವಾಹವಾಗಿ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಬೇರಾಗುವ ಜೋಡಿಗಳನ್ನು ಕಂಡು ಪ್ರೀತಿ ಎಂಬ ಪದದ ಅರ್ಥವೇ ಇಂತವರಿಗೆ ಗೊತ್ತಿಲ್ಲವೇನೋ ಎಂಬ ಭಾವನೆ ಮೂಡುವುದು ಸಹಜ.

ಪ್ರೀತಿಸುತ್ತಿದ್ದಾಗ ಇರುವ ಮಧುರ ಬಾಂಧವ್ಯ ಮದುವೆಯಾದ ನಂತರ ಮರೆಯಾಗುತ್ತದೆ. ಬಳಿಕ ದಂಪತಿಗಳು ವಿಚ್ಚೇದನಕ್ಕೆ ಮುಂದಾಗುತ್ತಾರೆ. ಇಂತವರ ನಡುವೆ ಬಲಿಪಶುಗಳಾಗುವುದು ಅವರ ಮಕ್ಕಳು. ಅಪ್ಪ- ಅಮ್ಮನ ಪ್ರೀತಿಯಿಂದ ವಂಚಿತವಾಗುವ ಮಕ್ಕಳು ಆನಾಥ ಭಾವವನ್ನನುಭವಿಸುತ್ತಾರೆ.

ಇಂತಹ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಿರುವ ಮಧ್ಯೆ ‘ಟ್ರೂ ಲವ್’ ಗೆ ಉದಾಹರಣೆಯಾಗುವಂತಹ ಪ್ರಕರಣ ಇಲ್ಲಿದೆ. 12ನೇ ತರಗತಿಲ್ಲಿದ್ದಾಗ ಜಯ್ ಎಂಬಾತ ತನ್ನ ಸಹಪಾಠಿ ಸುನೀತಾ ಮೇಲೆ ಆಕರ್ಷಣೆ ಹೊಂದಿರುತ್ತಾನೆ. ಆದರೆ ಇದನ್ನು ಹೇಳಿಕೊಳ್ಳಲು ಆತನಿಗೆ ಸಾಧ್ಯವಾಗುವುದಿಲ್ಲ.

12 ನೇ ತರಗತಿ ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದು, ಆದಾದ ಎರಡೂವರೆ ವರ್ಷಗಳ ಬಳಿಕ ಜಯ್ ಹುಟ್ಟು ಹಬ್ಬದಂದು ಕಾಲ್ ಮಾಡಿದ ಸುನೀತಾ ಶುಭಾಶಯ ಕೋರುತ್ತಾರೆ. ಇದರಿಂದ ಜಯ್ ಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗುತ್ತದೆ. ಈ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಸುನೀತಾಳ ಮುಖ ವಿರೂಪಗೊಳ್ಳುತ್ತದೆ.

ಆಕೆಯನ್ನು ನೋಡಲು ಹೋದ ಜಯ್, ಧ್ವನಿಯಿಂದ ಆಕೆ ಸುನೀತಾ ಎಂದು ಗುರುತಿಸಬೇಕಾಗಿ ಬರುತ್ತದೆ. ಹಿಂದಿನ ಸುನೀತಾಗೂ ಅಪಘಾತದ ನಂತರದ ಸುನೀತಾಳ ಮುಖಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಆದರೂ ಜಯ್ ನ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ. ತನ್ನ ಮನದಿಂಗಿತವನ್ನು ತಿಳಿಸಿ ಸುನೀತಾ ಕೈ ಹಿಡಿದ ಜಯ್, ಸುಖಿ ಸಂಸಾರ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...