alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂ ಟ್ರೆಂಡ್…! ಟೀ ಶರ್ಟ್ ತಯಾರಿಸಲು ಬಳಸಲಾಗ್ತಿದೆ ಪ್ಲಾಸ್ಟಿಕ್

ಪ್ಲಾಸ್ಟಿಕ್ ಕವರ್ ಬಳಕೆ ಮೇಲೆ ಅನೇಕ ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ. ಪ್ಲಾಸ್ಟಿಕ್ ಪರಿಸರ ಮಾಲಿನ್ಯಕ್ಕೆ ಕಾರಣವಾಗ್ತಿದೆ. ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ತಪ್ಪಿಸಲು ವಿದೇಶದಲ್ಲಿ ಪ್ಲಾಸ್ಟಿಕ್ ಮರು ಬಳಕೆ ಕೆಲಸ ನಡೆಯುತ್ತಿದೆ. ವಿದೇಶಿ ಕಂಪನಿ Howies ಪ್ಲಾಸ್ಟಿಕನ್ನು ವಿಭಿನ್ನ ಕೆಲಸಕ್ಕೆ ಬಳಸಿ, ಡೆನಿಮ್ ಉಡುಪು ತಯಾರಿಸುತ್ತಿದೆ.

ಇದನ್ನೇ ಅನುಸರಿಸುತ್ತಿರುವ ಭಾರತೀಯ ಮೂಲದ ಕಂಪನಿ Alcis Sport ಪ್ಲಾಸ್ಟಿಕ್ ಬಾಟಲ್ ಬಳಸಿ ಟೀ-ಶರ್ಟ್ ಸಿದ್ಧಪಡಿಸಿದೆ. Wonder Tee ಮತ್ತು Wonder Polo ಟೀ ಶರ್ಟ್ ತಯಾರಿಕೆಗೆ ಪಾಲಿಥೈಲಿನ್ ಥೆಯೆಫೆಟೈನ್ ಬಳಸಲಾಗಿದೆ. ಪಾಲಿಥೈಲಿನ್ ಥೆಯೆಫೆಟೈನ್ ನನ್ನು ಪ್ಲಾಸ್ಟಿಕ್ ಬಾಟಲಿ ಹಾಗೂ ಸೋಡಾ ಬಾಟಲಿ ತಯಾರಿಕೆಗೆ ಬಳಸಲಾಗುತ್ತದೆ.

ಪರಿಸರ ರಕ್ಷಣೆ ಹಿನ್ನೆಲೆಯಲ್ಲಿ ಕಂಪನಿ ಪ್ಲಾಸ್ಟಿಕ್ ಬಾಟಲ್ ಮರುಬಳಕೆ ಮಾಡಿ ಟೀ-ಶರ್ಟ್ ತಯಾರಿಸುವ ನಿರ್ಧಾರಕ್ಕೆ ಬಂತಂತೆ. ಸೋಡಾ, ನೀರಿನ ಬಾಟಲಿಗಳು ಹಾಗೂ ಆಹಾರ ಡಬ್ಬಗಳನ್ನು ಟೀ-ಶರ್ಟ್ ತಯಾರಿಕೆಗೆ ಬಳಸಲಾಗುತ್ತದೆಯಂತೆ. ಇದು ಪರಿಸರದ ಮೇಲೆ ಯಾವುದೇ ಹಾನಿ ಮಾಡುವುದಿಲ್ಲವೆಂದು ಕಂಪನಿ ಮಾಲೀಕರು ಹೇಳಿದ್ದಾರೆ. ಇದ್ರ ತೂಕ ಕೇವಲ 86 ಗ್ರಾಂ ಇದ್ದು, ಈ ಟೀ ಶರ್ಟ್ ಧರಿಸಿದ್ರೆ ಬೆವರು ಬರೋದಿಲ್ಲ ಎನ್ನುತ್ತದೆ ಕಂಪನಿ. ಮಹಿಳೆ, ಪುರುಷರ ನಂತ್ರ ಮಕ್ಕಳ ಟೀ-ಶರ್ಟ್ ತಯಾರಿಕೆಗೆ ಕಂಪನಿ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...