alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ಮೃಗಾಲಯ ಸೇರಲಿವೆ ದೇವಾಲಯದಲ್ಲಿರುವ ಆನೆಗಳು

elaphants

ದಕ್ಷಿಣ ಭಾರತದ ಪ್ರಖ್ಯಾತ ದೇವಾಲಯಗಳಲ್ಲೆಲ್ಲ ಆನೆಗಳಿವೆ. ಕೇರಳದ ಕೆಲವು ದೇವಸ್ಥಾನಗಳಲ್ಲಂತೂ ವಿಶೇಷ ಹಬ್ಬಗಳ ಸಂದರ್ಭದಲ್ಲೆಲ್ಲ ಆನೆಗಳ ಅಲಂಕಾರ ಭಕ್ತರನ್ನು ಸೆಳೆಯುತ್ತದೆ.

ಆದ್ರೆ ಸದ್ಯದಲ್ಲೇ ಈ ಆನೆಗಳೆಲ್ಲ ಮೃಗಾಲಯ ಸೇರಿದ್ರೂ ಆಶ್ಚರ್ಯವಿಲ್ಲ. ಯಾಕಂದ್ರೆ ಕಾಡುಪ್ರಾಣಿಗಳನ್ನು ಸೆರೆಯಲ್ಲಿಟ್ಟುಕೊಂಡಿರುವ ಧಾರ್ಮಿಕ ಸಂಸ್ಥೆಗಳನ್ನು ಪಟ್ಟಿಮಾಡಿ, ಅವುಗಳನ್ನು ಮೃಗಾಲಯಗಳಿಗೆ ವರ್ಗೀಕರಿಸುವಂತೆ ಕೇಂದ್ರ ಸಚಿವೆ ಮನೇಕಾ ಗಾಂಧಿ, ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ಕೇಂದ್ರ ಮೃಗಾಲಯ ಪ್ರಾಧಿಕಾರ ಅತ್ಯಂತ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಅವುಗಳ ಪಾಲನೆ ದೇವಸ್ಥಾನಗಳಲ್ಲಿ ಅಸಾಧ್ಯ ಎಂಬಂತಹ ಸ್ಥಿತಿ ಇದೆ. ಆನೆಗಳಿಗೆ ದೇವಸ್ಥಾನಗಳಲ್ಲೂ ಮನರಂಜನಾ ಸ್ಥಳವಿರಬೇಕು, ನಿಯಮಿತವಾಗಿ ಊಟ, ಸ್ನಾನ ಮಾಡಿಸಬೇಕು. ಅನಗತ್ಯವಾಗಿ ಎಲ್ಲರೂ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಬಾರದು, ಮೇಲ್ವಿಚಾರಕ, ಪಶುವೈದ್ಯ, ಜೀವಶಾಸ್ತ್ರಜ್ಙ ಹಾಗೂ ಅಧಿಕಾರಿಯನ್ನು ನೇಮಿಸಿಕೊಳ್ಳಬೇಕೆಂಬ ನಿಯಮ ಜಾರಿ ಮಾಡಲಾಗಿದೆ.

ದೇವಾಲಯಗಳಲ್ಲಿ ಇವನ್ನೆಲ್ಲ ಪಾಲಿಸುವುದು ಅಸಾಧ್ಯವಾಗಿದ್ದರಿಂದ ಆನೆಗಳನ್ನು ಮೃಗಾಲಯದ ಸುಪರ್ದಿಗೆ ವಹಿಸಲು ಚಿಂತನೆ ನಡೆದಿದೆ. ಕೇರಳದ ದೇವಾಲಯಗಳಲ್ಲಿ ಅತಿ ಹೆಚ್ಚು ಅಂದ್ರೆ ಸುಮಾರು 3500 ಆನೆಗಳಿವೆ ಎನ್ನಲಾಗಿದೆ. ತ್ರಿಶೂರ್ ನ ಪೂರಂ ಹಬ್ಬದ ವೇಳೆ ಪರಿಶೀಲನೆ ನಡೆಸಿದ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ, ಈ ಆನೆಗಳನ್ನು ಒತ್ತಾಯಪೂರ್ವಕವಾಗಿ ದೇವಾಲಯದ ಪೂಜಾ ವಿಧಿವಿಧಾನಗಳಲ್ಲಿ ಕರೆದೊಯ್ಯಲಾಗುತ್ತದೆ, ಭಾರೀ ಜನಸಂದಣಿ, ಪಟಾಕಿಗಳ ಸದ್ದು, ಮೈಕ್ ಗಳ ಅರಚಾಟ ಆನೆಗಳಿಗೆ ಹಿಂಸೆ ಉಂಟು ಮಾಡುತ್ತದೆ. ಕೆಲವು ಕಡೆ ಸರಪಳಿಯಲ್ಲಿ ಬಂಧಿಸಿಟ್ಟಿದ್ರಿಂದ ಅವು ಗಾಯಗೊಂಡಿವೆ ಅಂತಾ ವರದಿ ನೀಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...