alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟ್ರೀಟ್ ಆರ್ಟ್ ಗಾಗಿ ಒಂದಾಗುತ್ತಿದ್ದಾರೆ ಈ ಕಲಾವಿದರು

ಸ್ಟ್ರೀಟ್ ಆರ್ಟ್ ಜನರ ಗಮನ ಸೆಳೆಯುವ ಸೃಜನಾತ್ಮಕ ಕ್ರಾಂತಿಯಾಗಿ ಬದಲಾಗಿದೆ. ಸಿನೆಮಾ ನೋಡಲು ಥಿಯೇಟರ್ ಗೆ ಹೋಗಬೇಕು, ಆದ್ರೆ ಸ್ಟ್ರೀಟ್ ಆರ್ಟ್ ನಮ್ಮ ಮನೆಬಾಗಿಲಲ್ಲೇ ಇರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಹೊಸ ಪ್ರಯತ್ನ ಇದು.

ಜನರ ನಿತ್ಯದ ಬದುಕು, ವಸ್ತುಸ್ಥಿತಿ, ಸಂಕಷ್ಟಗಳು, ಸಮಾಜದಲ್ಲಿರುವ ಹುಳುಕು, ಸಮಸ್ಯೆಗಳು ಎಲ್ಲವೂ ಅವರಿಗೆ ಅರಿವಿದೆ. ಹಾಗಾಗಿ ಅದರ ನೈಜ ಚಿತ್ರಣವನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಾರೆ. ಅದರಲ್ಲೂ ಮಹಿಳೆಯರ ಸುರಕ್ಷತೆ ಕುರಿತಾದ ವಿಷಯವನ್ನು ಯಥಾವತ್ತಾಗಿ ತೆರೆದಿಡುತ್ತಾರೆ.

ಈ ಪ್ರಯತ್ನ ಮನರಂಜನೆಯನ್ನೂ ನೀಡುವುದು ವಿಶೇಷ. ಸಾಮಾಜಿಕ ಸಂದೇಶ ಮತ್ತು ಜಾಹೀರಾತುಗಳ ಮೂಲಕ ಈ ಕೆಲಸ ಮಾಡ್ತಿದ್ದಾರೆ ಕಲಾವಿದರು. ಇದಕ್ಕಾಗಿ 36 ಡಾನ್ಸರ್ ಗಳು, 8 ರ್ಯಾಪರ್ಸ್ ಹಾಗೂ 7 ಕಲಾವಿದರು ಒಟ್ಟಾಗಿದ್ದಾರೆ. ಬೃಹತ್ ಪ್ರಾಜೆಕ್ಟ್ ಒಂದನ್ನು ಹಮ್ಮಿಕೊಂಡಿದ್ದಾರೆ.

ಮುಂಬೈ, ದೆಹಲಿ, ಮದುರೈ ಮತ್ತು ಶಿಲ್ಲಾಂಗ್ ನ ಈ ಕಲಾವಿದರ ಹೊಸ ಪ್ರಯತ್ನ ಇದು. ಭಾರತೀಯ ಸಂಸ್ಕೃತಿಯನ್ನು ಕೂಡ ಬಿಂಬಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ಹಮ್ಮಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...