alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಸೆಲೆಕ್ಷನ್ ಗಾಗಿ ಟ್ವಿಟ್ಟರ್ ಮೊರೆ ಹೋಗಿದ್ರು ಈ ಅಧಿಕಾರಿ

us-envoy-saree-650_650x400_51502766106

ನವದೆಹಲಿಯಲ್ಲಿರೋ ಅಮೆರಿಕ ರಾಯಭಾರ ಕಚೇರಿ ಅಧಿಕಾರಿ ಮೇರಿ ಕೆ ಕಾರ್ಲ್ಸನ್ ಭಾರತದ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಸೀರೆ ಉಟ್ಟು ಸ್ವಾತಂತ್ರ್ಯೋತ್ಸವ ಸೆಲೆಬ್ರೇಟ್ ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತು. ಇದಕ್ಕಾಗಿ ಅವರು ಟ್ವಿಟ್ಟರ್ ಸಹಾಯ ಪಡೆದಿದ್ದಾರೆ. ತಮ್ಮ ಫಾಲೋವರ್ ಗಳು ಆಯ್ಕೆ ಮಾಡಿದ ಸುಂದರ ಸೀರೆ ಉಟ್ಟು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಮೇರಿ ಸೀರೆ ಆಯ್ಕೆ ಕಸರತ್ತು ಶುರು ಮಾಡಿದ್ರು. ಜಮ್ದನಿ, ಕಾಂಜೀವರಂ, ಡುಪಿಯನ್ ಹಾಗೂ ತುಸ್ಸಾರ್ ನ ನಾಲ್ಕು ಸೀರೆಗಳ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ರು. ಅದರಲ್ಲಿ ಒಂದು ಸೀರೆಯನ್ನು ಆಯ್ಕೆ ಮಾಡಿಕೊಡುವಂತೆ ಮನವಿ ಮಾಡಿದ್ರು. ಎಲ್ರೂ ಮೇರಿ ಅವರಿಗಾಗಿ ಕಾಂಜೀವರಂ ಸೀರೆಯನ್ನು ಆಯ್ಕೆ ಮಾಡಿದ್ದಾರೆ.

ಇವತ್ತು ಅದೇ ಸೀರೆ ಉಟ್ಟು ಅಮೆರಿಕದ ಅಧಿಕಾರಿ ಭಾರತದ ಸ್ವಾತಂತ್ರ್ಯವನ್ನು ಸಂಭ್ರಮಿಸಿದ್ದಾರೆ. ಭಾರತದ ಸಂಸ್ಕೃತಿ ಬಗ್ಗೆ ಗೌರವ ತೋರಿದ ಅಮೆರಿಕ ಅಧಿಕಾರಿ ಈ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...