alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಮಕ್ಕಳ ಹೆರಿಗೆ ನಿಷಿದ್ಧ

ಮದುವೆಯಾದ ದಂಪತಿಗೆ ಕುಟುಂಬಸ್ಥರಿಂದ ಹಿಡಿದು ಊರಿನ ಹಿರಿಯರೆಲ್ಲ ಕೇಳುವ ಒಂದೇ ಪ್ರಶ್ನೆ ಮಗು ಯಾವಾಗ? ಮದುವೆಯಾದ ಒಂದು ವರ್ಷದೊಳಗೆ ಮನೆಯಲ್ಲಿ ಮಗುವಿನ ಧ್ವನಿ ಕೇಳಲು ಹಿರಿಯರು ಹಾತೊರೆಯುತ್ತಾರೆ. ಆದ್ರೆ ಭಾರತದಲ್ಲೊಂದು ವಿಚಿತ್ರ ಗ್ರಾಮವಿದೆ. ಇಲ್ಲಿ ಮಕ್ಕಳ ಜನನಕ್ಕೆ ನಿಷೇಧ ಹೇರಲಾಗಿದೆ.

ವಿಚಿತ್ರವೆನಿಸಿದ್ರೂ ಇದು ನಿಜ. ಕಳೆದ 50 ವರ್ಷಗಳಿಂದ ಈ ಗ್ರಾಮದಲ್ಲಿ ಒಂದೇ ಒಂದು ಮಗು ಜನಿಸಿಲ್ಲ. ಈ ಗ್ರಾಮ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ. ರಾಜ್ಗಢದ ಶಂಕಾ ಜಾಗೀರ್ ಹೆಸರಿನ ಈ ಗ್ರಾಮದಲ್ಲಿ 50 ವರ್ಷದಿಂದ ಮಗು ಜನಿಸಿಲ್ಲ.

ಹಿಂದೆ ಈ ಗ್ರಾಮದಲ್ಲಿ ಶ್ಯಾಮ್ ಜೀ ದೇವಸ್ಥಾನವಿತ್ತಂತೆ. ಅದ್ರ ಪವಿತ್ರತೆಗಾಗಿ ಇಲ್ಲಿ ಹೆರಿಗೆ ಮಾಡಿಸುತ್ತಿರಲಿಲ್ಲವಂತೆ. ಇದೇ ಗ್ರಾಮದಲ್ಲಿ ಹುಟ್ಟಿದ ಶಿಶುಗಳು ಹುಟ್ಟಿದ ತಕ್ಷಣ ಸಾವನ್ನಪ್ಪುತ್ತವೆಯಂತೆ. ಹಾಗಾಗಿ ಗ್ರಾಮಸ್ಥರು ವಂಶವೃದ್ಧಿಗಾಗಿ ಗ್ರಾಮದ ಹೊರಗೆ ಒಂದು ಮನೆ ಮಾಡಿಕೊಂಡಿದ್ದಾರೆ. ಗರ್ಭಿಣಿಯರು ಅಲ್ಲಿ ಹೋಗಿ ಮಗುವನ್ನು ಹೆರುತ್ತಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...