alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಈ ದೇಶದಲ್ಲಿ ವಿಸ್ಕಿಗೆ ಚಿನ್ನ ಹಾಕಿ ಕುಡಿತಾರೆ ಜನ

ಭಾರತೀಯರು ಬಂಗಾರ ಪ್ರಿಯರು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಬಂಗಾರದ ಆಭರಣ, ನಾಣ್ಯ, ಬಿಸ್ಕಿಟ್ ಗಳನ್ನು ಖರೀದಿ ಮಾಡ್ತಿರುತ್ತಾರೆ. ಆದ್ರೆ ನೆರೆ ದೇಶದಲ್ಲಿ ಮದ್ಯಕ್ಕೂ ಬಂಗಾರವನ್ನು ಹಾಕಿಕೊಂಡು ಕುಡಿಯುತ್ತಾರೆ ಅಂದ್ರೆ ನೀವು ನಂಬಲೇಬೇಕು.

ಮಯನ್ಮಾರ್ ನಲ್ಲಿ ಏಳು ಬಂಗಾರದ ದೇವಸ್ಥಾನಗಳಿವೆ. ಭಗವಾನ್ ಬುದ್ಧನ ನಗರಿ ಮಯನ್ಮಾರ್ ಜನರು ಬಂಗಾರ ಪ್ರಿಯರು. ಬಿಬಿಸಿ ವರದಿ ಪ್ರಕಾರ, ಬಗಾನ್ ನಗರದಲ್ಲಿ 2200 ಕ್ಕೂ ಹೆಚ್ಚು ದೇವಾಲಯಗಳು, ಅದ್ರ ಅವಶೇಷಗಳಿವೆ. 11 ಮತ್ತು 13ನೇ ಶತಮಾನದಲ್ಲಿ ಈ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಮಯನ್ಮಾರ್ ಸಂಸ್ಕೃತಿಯಲ್ಲಿ ಬಂಗಾರಕ್ಕೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಶುದ್ಧ ಚಿನ್ನಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಬಿದಿರಿನ ಎಲೆಗಳ ಮಧ್ಯೆ ಚಿನ್ನವನ್ನಿಟ್ಟು ನೂರದಿಂದ ಇನ್ನೂರು ಪದರಗಳನ್ನು ಸಿದ್ಧಪಡಿಸಲಾಗುತ್ತದೆ. ನಂತ್ರ ಬಂಗಾರ ಸರಿ ಆಕಾರ ಬರುವಂತೆ ಅದನ್ನು ಹದಗೊಳಿಸುತ್ತಾರೆ. ತೆಳುವಾದ ಒಂದೊಂದಿಂಚು ತುಂಡುಗಳಾಗಿ ಕತ್ತರಿಸುತ್ತಾರೆ. ಈ ತುಂಡುಗಳನ್ನು ದೇವಸ್ಥಾನದ ಹುಂಡಿಗಳಿಗೆ ಹಾಕಲು ಬಳಸುತ್ತಾರೆ.

ಚಿನ್ನ ಸೂರ್ಯನ ಸಂಕೇತ. ಸೂರ್ಯ ಬುದ್ಧಿ ಹಾಗೂ ವಿವೇಕದ ಸಂಕೇತ ಎಂದು ಇಲ್ಲಿನವರು ಭಾವಿಸಿದ್ದಾರೆ. ಚಿನ್ನವನ್ನು ವಿಸ್ಕಿಗೆ ಹಾಕಿ ಕುಡಿಯುವವರಿದ್ದಾರೆ. ಅದಕ್ಕೆ ವೈಟ್ ವಿಸ್ಕಿ ಎಂದು ಕರೆಯುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಅಕ್ಕಿ, ತರಕಾರಿಯಲ್ಲೂ ಚಿನ್ನದ ತುಂಡುಗಳನ್ನಿಡುತ್ತಾರೆ. ಚಿನ್ನ ದೇಹ ಸೇರಿದ್ರೆ ಚರ್ಮ ಹೊಳಪು ಪಡೆಯುತ್ತದೆ ಎಂದು ನಂಬಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...