alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಯುವಕರನ್ನು ಅಪಹರಿಸಿ ಮದುವೆಯಾಗ್ತಾರೆ ಹುಡುಗಿಯರು

ಬಿಹಾರದಲ್ಲಿ ವಿಚಿತ್ರ ಮದುವೆಗಳು ನಡೆಯುತ್ತಿವೆ. ಹಿಂದಿನ ವರ್ಷ ಅಂದ್ರೆ 2017 ರಲ್ಲಿ 3400ಕ್ಕೂ ಹೆಚ್ಚು ಯುವಕರನ್ನು ಮೊದಲು ಅಪಹರಿಸಿ ನಂತ್ರ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಇದನ್ನು ಪಕಡ್ವಾ ವಿವಾಹ ಎಂದು ಕರೆಯುತ್ತಾರೆ.

ಬಿಹಾರ ಪೊಲೀಸರೇ ಇದನ್ನು ಒಪ್ಪಿಕೊಂಡಿದ್ದಾರೆ. ಹುಡುಗಿ ಮನೆಯವರು ಮೊದಲು ಶ್ರೀಮಂತ ಮನೆತನದ ಹುಡುಗನನ್ನು ಅಪಹರಿಸುತ್ತಾರೆ. ನಂತ್ರ ಬೆದರಿಸಿ ಮದುವೆ ಮಾಡಿಸುತ್ತಾರೆ. ಯುವಕರ ಅಪಹರಣ ಹಾಗೂ ಮದುವೆ ಪ್ರಕರಣ ಬಿಹಾರದಲ್ಲಿಯೇ ಅತಿ ಹೆಚ್ಚು ದಾಖಲಾಗಿದೆ.

ವರದಿ ಪ್ರಕಾರ ಪ್ರತಿ ದಿನ ಸುಮಾರು 9 ಯುವಕರ ಮದುವೆ ಒತ್ತಾಯಪೂರ್ವಕವಾಗಿ ನಡೆಯುತ್ತದೆ. ಬಿಹಾರದಲ್ಲಿ 2014 ರಲ್ಲಿ 2526, 2015 ರಲ್ಲಿ 3000 ಹಾಗೂ 2016 ರಲ್ಲಿ 3070 ಮದುವೆಗಳು ಬಲವಂತವಾಗಿ ನಡೆದಿವೆ. ಪ್ರತಿ ವರ್ಷ ಈ ಬಲವಂತ ಮದುವೆ ಪ್ರಕರಣ ಹೆಚ್ಚಾಗುತ್ತಿದೆ. ಇದು ಬಿಹಾರಿಗಳಿಗೆ ಹೊಸದಲ್ಲ. ಅನೇಕ ವರ್ಷಗಳಿಂದಲೂ ಇದು ನಡೆಯುತ್ತಲೇ ಬಂದಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...