alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖಕರ ಲೈಂಗಿಕ ಜೀವನಕ್ಕೆ ಸರಳ ಸೂತ್ರ

08_11_2016-married_life

ದಾಂಪತ್ಯ ಜೀವನದ ಒಂದು ಭಾಗ ಶಾರೀರಿಕ ಸಂಬಂಧ. ಲೈಂಗಿಕ ಕ್ರಿಯೆ ಆರೋಗ್ಯಕ್ಕೆ ಒಳ್ಳೆಯದೆಂದು ಸಂಶೋಧನೆಗಳು ಹೇಳಿವೆ. ಶಾರೀರಿಕ ಸಂಬಂಧದ ಆನಂದ ಅನುಭವಿಸುವ ಮೊದಲು ಅದರ ಬಗ್ಗೆ ತಿಳಿದಿರಬೇಕು. ಪೂರ್ವತಯಾರಿ ಇಲ್ಲದೆ ಏಕಾಏಕಿ ಶಾರೀರಿಕ ಸಂಬಂಧ ಬೆಳೆಸಲು ಮುಂದಾದ್ರೆ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಂಬಂಧ ಬೆಳೆಸುವ ಮೊದಲು ಕೆಲವೊಂದು ಟಿಪ್ಸ್ ಅನುಸರಿಸಿದ್ರೆ ಸುಖಮಯ ದಾಂಪತ್ಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

ಶಾರೀರಿಕ ಸಂಬಂಧ ಬೆಳೆಸಲು ಆರೋಗ್ಯ ಬಹಳ ಮುಖ್ಯ. ಉತ್ತಮ ಆರೋಗ್ಯ ಹೊಂದಲು ಆಹಾರ, ನಿದ್ರೆ ಹಾಗೂ ವ್ಯಾಯಾಮ ಬೇಕು.

ಮಹಿಳೆ ಮತ್ತು ಪುರುಷ ಇಬ್ಬರು ತಮ್ಮ ಸಂಗಾತಿ ಬಗ್ಗೆ ತಿಳಿಯುವುದು ಅವಶ್ಯಕ. ಸಂಗಾತಿಗೆ ಯಾವುದರಿಂದ ಖುಷಿ ಸಿಗುತ್ತೆ ಎಂಬ ವಿಚಾರವನ್ನು ತಿಳಿದಿರಬೇಕು.

ಮೊದಲ ದಿನ ಶಾರೀರಿಕ ಸಂಬಂಧ ಬೆಳೆಸಲು ಸಂಗಾತಿ ಹಿಂಜರಿಯಬಹುದು. ಆಗ ಒತ್ತಾಯ ಬೇಡ. ಅವರಿಗೆ ನಿಮ್ಮ ಮೇಲೆ ನಂಬಿಕೆ, ವಿಶ್ವಾಸ ಬರುವವರೆಗೆ ಸುಮ್ಮನಿದ್ದು ಬಿಡುವುದು ಒಳ್ಳೆಯದು.

ಶಾರೀರಿಕ ಸಂಬಂಧ ಹಾಗೂ ಗಟ್ಟಿ ದಾಂಪತ್ಯಕ್ಕೆ ಪ್ರೀತಿಯ ಮಾತು ಬಹಳ ಮುಖ್ಯ. ಇದರಿಂದ ನಿಮಗೆ ಖುಷಿ ಸಿಗುವ ಜೊತೆಗೆ ನಿಮ್ಮ ಸಂಗಾತಿಯನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯಬಹುದು.

ಏಕಾಏಕಿ ಶಾರೀರಿಕ ಸಂಬಂಧ ಬೆಳೆಸುವ ಬದಲು ಮುಂಕೇಳಿ (ಸರಸ) ನಡೆಸುವುದು ಬಹಳ ಮುಖ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...