alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ

ಪ್ರಜೆಗಳಿಂದ ಪ್ರಜೆಗಳೇ ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವೇ ಪ್ರಜಾಪ್ರಭುತ್ವ. ಭಾರತದಲ್ಲಿ ಕ್ರಿ.ಪೂ. 8 ನೇ ಮತ್ತು 9 ನೇ ಶತಮಾನದಲ್ಲಿ 16 ಜನಪದಗಳು ಆಡಳಿತವನ್ನು ಪ್ರಾರಂಭಿಸಿದವು. ಇದನ್ನು ಕ್ರಿ.ಶ. 8 ನೇ ಶತಮಾನದ ಉತ್ತರ ಮೇರು ಶಾಸನವು ಉಲ್ಲೇಖಿಸುತ್ತದೆ.

ಭಾರತ ಸ್ವಾತಂತ್ರವಾದ ಮೇಲೆ 1951 ರಿಂದ ಗಣರಾಜ್ಯ ಅಸ್ತಿತ್ವಕ್ಕೆ ಮರಳಿ ಬಂದಿತು. ಕೇಂದ್ರ ಹಾಗೂ ರಾಜ್ಯಗಳಲ್ಲಿ ದ್ವಿಮುಖ ಸಭೆಗಳ ಅಸ್ತಿತ್ವಕ್ಕೆ ಬಂತು.

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳು ಆಡಳಿತದಲ್ಲಿ Torch ಇದ್ದಂತೆ. ಆಡಳಿತ ಪಕ್ಷ ಎಡವಿದಾಗ ವಿರೋಧ ಪಕ್ಷಗಳು ಸರಿಯಾದ ಮಾರ್ಗದರ್ಶನ ನೀಡಿ ಸುಗಮ ಆಡಳಿತಕ್ಕೆ ಸಹಕರಿಸಿ Watch Dog ಗಳಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.

ಆಡಳಿತ ಪಕ್ಷ, ವಿರೋಧ ಪಕ್ಷಗಳು ನೀಡುವ ಮಾರ್ಗದರ್ಶನವನ್ನು ಪಕ್ಷಾತೀತವಾಗಿ ಸ್ವೀಕರಿಸಿ ಸುಗಮ ಆಡಳಿತ ನೀಡಬೇಕು. ವಿರೋಧ ಪಕ್ಷಗಳು ಇರುವುದೇ ಟೀಕಿಸಲು ಎಂಬುದನ್ನು ಮರೆತು ಪ್ರಜೆಗಳ ಹಿತ ಕಾಪಾಡುವಲ್ಲಿ ಆಡಳಿತ ಪಕ್ಷಕ್ಕೆ ಸಾಥ್ ನೀಡಬೇಕು.

Politician Always Think of Future election ಎಂಬ ಹೇಳಿಕೆ ಇದೆ. ಇದು ಸುಳ್ಳು ಎಂಬುದನ್ನು ಸಾಧಿಸಿ, ಅಧಿಕಾರಕ್ಕೆ ಅಂಟಿಕೊಳ್ಳದೆ ಜನಸೇವೆಯೇ ಮುಖ್ಯ ಎಂಬುದನ್ನು ಸಾಬೀತು ಮಾಡಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಪ್ರಜಾಪ್ರಭುತ್ವದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಡಳಿತದಲ್ಲಿ ಈ ಎರಡರ ಪಾತ್ರ ಅವಶ್ಯಕವಾಗಿದೆ.

ಸದನಗಳಲ್ಲಿ ಶಾಂತ ವಾತಾವರಣ ನಿರ್ಮಿಸುವುದು ಆಡಳಿತ ಪಕ್ಷದ ಪ್ರಮುಖ ಕಾರ್ಯವಾಗಬೇಕು.

ಆಡಳಿತ ಪಕ್ಷದ ಅಧಿಕಾರ ಪ್ರಜೆಗಳ ಹಿತಕ್ಕೆ ಮಾತ್ರ ಮೀಸಲಾಗಿರಬೇಕು.

ಸದಸ್ಯರು ಜನರ ಪ್ರತಿನಿಧಿಗಳೆಂಬುದನ್ನು ಮರೆಯಬಾರದು.

ಸದನಗಳಲ್ಲಿ ಆಡಳಿತ ಮತ್ತು ವಿಪಕ್ಷಗಳಲ್ಲಿ ಸಾಮರಸ್ಯವಿರಬೇಕು.

ಸದನಗಳು ಆಡಳಿತ ಕೇಂದ್ರಗಳಾಗಿರಬೇಕೇ ವಿನಾ ಹೋರಾಟದ ಅಖಾಡವಾಗಬಾರದು.

ಜನತೆಯ ಸೇವೆಯೇ ನಮ್ಮ ಕರ್ತವ್ಯ ಎಂಬುದನ್ನು ಅರಿತು Power Spoils the Men And corrupt the Men ಎಂಬ ಹೇಳಿಕೆ ಹುಸಿ ಮಾಡಬೇಕು.

ಮುಂದಿನ ಚುನಾವಣೆಯ ಗುರಿ ಇಟ್ಟು ಸದನದಲ್ಲಿ ಆಡಳಿತವನ್ನು ನಡೆಸಬಾರದು.

ಸದನಗಳಲ್ಲಿ ಪ್ರತಿನಿಧಿಗಳು ಸ್ವಾರ್ಥ, ಸ್ವಪಕ್ಷ , ದ್ವೇಷ, ಧರ್ಮಗಳಿಂದ ದೂರವಿರಬೇಕು.

ಸದನದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿರಬೇಕು.

ತಾವು ಸಲ್ಲಿಸುವ ಸೇವೆ ಜನಹಿತವಾಗಿರಬೇಕೇ ವಿನಾ ಪಕ್ಷ ಅಥವಾ ಸ್ವಾರ್ಥಕ್ಕೆ ಆಗಿರಬಾರದು

ಸದನ ಶಾಂತಿ, ಸಮಾಧಾನದಿಂದ ಕೂಡಿರಬೇಕು.

ಅಧಿಕಾರ ಮನುಷ್ಯನನ್ನು ಹಾಳು ಮಾಡುವುದರ ಜೊತೆಗೆ ಲಂಚಗುಳಿತನಕ್ಕೆ ದೂಡುತ್ತದೆ ಎಂಬ ಹೇಳಿಕೆಯನ್ನು ಸುಳ್ಳು ಮಾಡಬೇಕು.

ಸದನದಲ್ಲಿ ಮೊಬೈಲ್ ಬಳಕೆ, ಅಸಭ್ಯ ಚಿತ್ರಗಳನ್ನು ನೋಡುವುದನ್ನು ನಿಷೇಧಿಸಬೇಕು.

ವಿರೋಧ ಪಕ್ಷದವರ ಕರ್ತವ್ಯ :

ಸದನದಲ್ಲಿ ಶಾಂತಚಿತ್ತರಾಗಿ ಸದನದ ಗೌರವವನ್ನು ಕಾಪಾಡುವುದು ಆದ್ಯ ಕರ್ತವ್ಯವಾಗಬೇಕು.

ಆಡಳಿತ ಪಕ್ಷ ತೆಗೆದುಕೊಂಡ ನಿರ್ಧಾರಗಳು ಜನಹಿತವಾಗಿರುವಂತೆ ಹಾಗೂ ಪ್ರಜಾಪ್ರಭುತ್ವದ ಆಧಾರದಲ್ಲಿ ಇರುವುದರ ಬಗ್ಗೆ ಎಚ್ಚರವಿರಬೇಕು.

ನಿರ್ಧಾರಗಳು ಕಾನೂನಿನ ಚೌಕಟ್ಟಿನಲ್ಲಿ ಇಲ್ಲದಿದ್ದರೆ ಸೂಕ್ತ ಮಾರ್ಗದರ್ಶನ ನೀಡಿ ಆಡಳಿತ ಪಕ್ಷವನ್ನು ತಿದ್ದಬೇಕು.

ಸದನದ ಗೌರವವನ್ನು ಕಾಪಾಡಬೇಕು. ಅವಾಚ್ಯ ಪದಗಳ ಬಳಕೆ ಹಾಗೂ ವ್ಯಕ್ತಿ ಟೀಕೆ ಸಲ್ಲದು.

ಟೀಕೆಗೋಸ್ಕರ ಟೀಕೆ ಸಲ್ಲ, ಟೀಕೆ ನಮ್ಮ ಹಕ್ಕು ಎಂದು ಟೀಕಿಸುವುದು ಸೂಕ್ತವಲ್ಲ.

ಸದನದಲ್ಲಿ ತಮ್ಮ ವಾಕ್ಚಾತುರ್ಯ ಪ್ರದರ್ಶನದ ಸ್ಥಳವಲ್ಲ ಎಂಬುದನ್ನು ಅರಿಯಬೇಕು ಹಾಗೂ ಸಮಯ ಸಂದರ್ಭಗಳ ಅರಿವು ಅವಶ್ಯಕ.

ಪಕ್ಷ ಪಕ್ಷಗಳ ನಡುವೆ ಟೀಕೆ, ಕೆಸರೆರೆಚುವ ಕಾರ್ಯ ಆಗದೆ ಸದನದ ಗೌರವ ಕಾಪಾಡುವುದೇ ಎಲ್ಲರ ಕರ್ತವ್ಯವಾಗಬೇಕು.

ತಾವುಗಳು ಪ್ರಜಾಪ್ರತಿನಿಧಿಗಳೆಂಬುದನ್ನು ಮರೆಯದೆ ಜನರ ಒಳಿತಿಗೆ ಶ್ರಮಿಸಬೇಕು ಹಾಗೂ ಸದನದಲ್ಲಿ ಚರ್ಚೆ ಪಕ್ಷಾತೀತವಾಗಿರಬೇಕು.

ಮುಂದಿನ ಚುನಾವಣೆಯ ದೃಷ್ಟಿಯಿಂದ ಜನಹಿತ ಕಾರ್ಯ ಕೈಗೊಳ್ಳುವಲ್ಲಿ ಸಹಕರಿಸಬಾರದು.

ವಿರೋಧ ಪಕ್ಷಗಳು Watch dog ಗಳಾಗಿರಬೇಕು.

ಸದನದ ಕಲಾಪಗಳು ರಾಷ್ಟ್ರ ಮತ್ತು ವಿಶ್ವ ನೋಡುತ್ತಿರುತ್ತದೆ ಎಂಬುದನ್ನು ಮರೆಯಬಾರದು.

ಆಡಳಿತ ಪಕ್ಷದವರ ತಪ್ಪುಗಳನ್ನು ಮರೆಮಾಚದೇ ತಪ್ಪು ತಪ್ಪೇ ಎಂಬುದನ್ನು ನಿರೂಪಿಸಬೇಕು.

ಚುನಾವಣಾ ಸಂದರ್ಭದಲ್ಲಿ ಬೇರೆ ಪಕ್ಷಗಳ ಬಗ್ಗೆ ಹೀನಾಯವಾಗಿ ಟೀಕಿಸದೇ ವ್ಯಕ್ತಿ ಹಾಗೂ ಪಕ್ಷದ ಘನತೆಯನ್ನು ಕಾಪಾಡುವುದು, ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಪ್ರಮುಖ ಕರ್ತವ್ಯವಾಗಬೇಕು.

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಹಾಗೂ ಸದಸ್ಯರ ಸ್ಥಾನ ಶಾಶ್ವತವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ರಾಜಕೀಯ ಪ್ರಚಾರಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಾರದು. ಇದು ಅಪರಾಧ.

ರಾಜಕೀಯ ರಂಗ ಶಾಶ್ವತವಲ್ಲ ಎಂಬುದನ್ನು ರಾಜಕೀಯ ಮುಖಂಡರು ಮರೆಯಬಾರದು.

ತಮ್ಮ ಪ್ರಚಾರಕ್ಕೆ ಸರ್ಕಾರದ ಸವಲತ್ತನ್ನು ಯಾವುದೇ ಪಕ್ಷಗಳು ಬಳಸಿಕೊಳ್ಳಬಾರದು ಹಾಗೂ ದ್ವೇಷಪೂರಕ ಪ್ರಚಾರದಲ್ಲಿ ತೊಡಗಿ ಸಮಾಜದ ಶಾಂತಿ ಕದಡಬಾರದು.

ಮುಂಬರುವ ಚುನಾವಣೆ, ಮಾದರಿಯ ಚುನಾವಣೆಯಾಗಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಲಿ. ಹಣ ಮತ್ತು ಮದ್ಯ ಹರಿಯದಿರಲಿ.

ಯೋಗ್ಯ ಪ್ರತಿನಿಧಿಯನ್ನು ಚುನಾಯಿಸುವುದು ಮತದಾರರ ಮುಖ್ಯ ಕರ್ತವ್ಯವಾಗಲಿ. ಶಾಂತಿಯುತ ಚುನಾವಣೆ ನಡೆಯಲಿ. ಎಲ್ಲಾ ಮತದಾರರು ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಉತ್ತಮ ಪ್ರತಿನಿಧಿಯನ್ನು ಆರಿಸೋಣ. ಹಾಗೂ ಲಂಚಮುಕ್ತ ಸರ್ಕಾರವನ್ನು ರಚಿಸೋಣ. ಶಾಂತಿ ಮತ್ತು ಸೌಹಾರ್ದತೆಯಿಂದ ಮಾದರಿ ಚುನಾವಣೆ ನಡೆಯಲೆಂದು ಆಶಿಸೋಣ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...