alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಪೂಜೆಯ ಮಹತ್ವವೇನು ಗೊತ್ತಾ….?

ದೀಪಾವಳಿ ಹಬ್ಬ ಬರ್ತಾ ಇದ್ದಂತೆ ಮನೆ, ಮನಗಳಲ್ಲಿ ಖುಷಿ ಆವರಿಸಿರುತ್ತದೆ. ನಮ್ಮ ಸಂಸ್ಕೃತಿಯ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ಲಕ್ಷ್ಮಿ, ಗಣೇಶ, ಸ್ವಸ್ತಿಕ್, ಓಂ, ದೀಪ, ಕಮಲಪುಷ್ಪ, ಹೂ ಹಣ್ಣುಗಳು, ಶುಭ-ಲಾಭಗಳ ಪೂಜೆ ಮಾಡಲಾಗುತ್ತದೆ. ಇವು ತಮ್ಮದೆ ಆದ ಮಹತ್ವ ಹಾಗೂ ಶಕ್ತಿಯನ್ನು ಹೊಂದಿವೆ.

ಸ್ವಸ್ತಿಕದ ಅರ್ಥ ಶುಭ-ಮಂಗಳ ಅಂದ್ರೆ ಕಲ್ಯಾಣ ಎಂದು. ಗ್ರಂಥಗಳಲ್ಲಿ ಧನಾತ್ಮಕ ಶಕ್ತಿಯನ್ನು ಸ್ವಸ್ತಿಕ ಆಕರ್ಷಿಸುತ್ತದೆಂದು ನಂಬಲಾಗಿದೆ. ಇದನ್ನು ರಚಿಸದೆ ಸಾಮಾನ್ಯವಾಗಿ ಮಂಗಳಕರ ಕೆಲಸಗಳನ್ನು ಆರಂಭಿಸುವುದಿಲ್ಲ. ಶುಭ ಸಮಾರಂಭಗಳಲ್ಲಿ ಕುಂಕುಮ ಅಥವಾ ರಂಗೋಲಿಯಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಲಾಗುತ್ತದೆ.

ಓಂ ಶಬ್ದದ ಉಚ್ಛಾರಣೆಯಿಂದಲೇ ಮನಸ್ಸಿಗೊಂದು ಶಾಂತಿ ಸಿಗುತ್ತದೆ. ಸ್ವಚ್ಛ ಮನಸ್ಸಿನಲ್ಲಿ 7 ಬಾರಿ ಓಂ ಉಚ್ಛಾರಣೆ ಮಾಡಿದ್ರೆ ದೇಹದಲ್ಲಿನ ರೋಗ, ಕೀಟಾಣು ದೂರವಾಗುತ್ತದೆ ಎಂದು ನಂಬಲಾಗಿದೆ. ಮನಸ್ಸು ಶಾಂತವಾಗಿ ನಿರಾಸೆ ದೂರವಾಗುತ್ತದೆ.

ದೀಪ ಭರವಸೆಯ ಸಂಕೇತ. ಅಂಧಕಾರವನ್ನು ತೊಲಗಿಸಿ ಬೆಳಕು ಮೂಡಿಸುತ್ತದೆ. ದೀಪಾವಳಿ ದೀಪಗಳ ಹಬ್ಬ. ಈ ದಿನ ಪೂರ್ತಿ ವಿಧಿ ವಿಧಾನದ ಮೂಲಕ ದೀಪ ಹಚ್ಚಿದ್ರೆ ಅದು ಶುಭವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರತಿಯೊಂದು ಶುಭ ಕಾರ್ಯದ ಆರಂಭದಲ್ಲಿ  ದೀಪ ಬೆಳಗಲಾಗುತ್ತದೆ.

ಮಣ್ಣಿನ ಅಥವಾ ತಾಮ್ರದ ಕಳಶದೊಳಗೆ ನೀರು ತುಂಬಿ ಅದರ ಮೇಲೆ ಮಾವಿನ ಎಲೆಗಳನ್ನು ಇಟ್ಟು, ನಂತ್ರ ತೆಂಗಿನಕಾಯಿಯನ್ನು ಇಟ್ಟು ಕಳಶವನ್ನು ಸ್ಥಾಪನೆ ಮಾಡಲಾಗುತ್ತದೆ. ಹಸಿರು ಶಾಂತಿ ಹಾಗೂ ಸಂತೋಷದ ಸಂಕೇತ. ಕಳಶದಲ್ಲಿ ತುಂಬಿದ ನೀರು ಸಂಪತ್ತು, ವೈಭವದ ಸಂಕೇತವಾಗಿದೆ.

ಕಮಲದ ಹೂವು ಸತ್ಯದ ಸಂಕೇತ. ಇದು ಲಕ್ಷ್ಮಿಗೆ ಅತಿ ಪ್ರಿಯವಾದ ಹೂ. ಗುಲಾಬಿ ಬಣ್ಣದ ಕಮಲದ ಹೂವಿನ ಮೇಲೆ ಕುಳಿತ ಲಕ್ಷ್ಮಿ ಸುಖ-ಸಮೃದ್ಧಿ ಸೌಭಾಗ್ಯವನ್ನು ಕರುಣಿಸ್ತಾಳೆ.

ಗಣೇಶನ ಹೆಸರಿನ ಜೊತೆ ಶುಭ-ಲಾಭವನ್ನು ಜೋಡಿಸಲಾಗಿದೆ. ಸಿದ್ಧಿ ಹಾಗೂ ಬುದ್ಧಿ ಗಣೇಶನ ಇಬ್ಬರು ಪತ್ನಿಯರು. ಅವರ ಮಕ್ಕಳು ಶುಭ-ಲಾಭ. ಇವರು ಸರ್ವ ಸುಖ ನೀಡ್ತಾರೆಂಬ ನಂಬಿಕೆ ಇದೆ. ಇವರು ಗಣೇಶನಿಗೆ ಅತಿಪ್ರಿಯ. ಹಾಗಾಗಿ ಮಂಗಳಕರ ಕೆಲಸಗಳಲ್ಲಿ ಕಚೇರಿ, ಕಪಾಟು, ಮನೆಯ ಮುಂದೆ ಶುಭ-ಲಾಭ ಎಂದು ಬರೆದಿರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...