alex Certify
ಕನ್ನಡ ದುನಿಯಾ       Mobile App
       

Kannada Duniya

1.5 ಲಕ್ಷ ಬಾಟಲಿಗಳನ್ನು ಬಳಸಿ ದ್ವೀಪ

1_Island-Made-of-Plastic-750x400ಬ್ರಿಟನ್ನಿನ ಕಲಾಕಾರ ರಿಷಿ ಸೋವಾ ಸಮುದ್ರದಲ್ಲಿ ತೇಲುವ ದ್ವೀಪವನ್ನು ನಿರ್ಮಿಸಿದ್ದಾರೆ. ಈ ದ್ವೀಪ ನಿರ್ಮಿಸಲು 1.5 ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಯೇ ಬುನಾದಿಯಾಗಿರುವ ಇದರ ಹೆಸರು ‘ಜ್ಯಾಕ್ಸಿ ಐಲ್ಯಾಂಡ್’.

ಈ ದ್ವೀಪದಲ್ಲಿ 2 ಮಲಗುವ ಕೋಣೆ, ಅಡಿಗೆಮನೆ, ಬಾತ್ ರೂಮ್ ಇದೆ. ಈ ಮನೆಯಲ್ಲಿರುವ ಶೌಚಾಲಯ ಪರಿಸರಸ್ನೇಹಿಯಾಗಿದ್ದು, ಇದರಲ್ಲಿ ನೀರಿನ ಬಳಕೆ ಇಲ್ಲ. ಇದರೊಳಗೆ ಎರಡು ಕೆರೆಗಳೂ ಹಾಗು ಒಂದು ಚಿಕ್ಕ ನದಿ ಕೂಡ ಇದೆ. ನದಿ, ಕರೆಂಟ್ ಮತ್ತು ಇಂಟರ್ನೆಟ್ ಗಳು ಸೌರವಿದ್ಯುತ್ ನಿಂದ ಕಾರ್ಯ ನಿರ್ವಹಿಸುತ್ತವೆ.

ಜ್ಯಾಕ್ಸಿ ಗಿಂತಲೂ ಮೊದಲು ‘ಸ್ಪೈಡರ್ ಐಲ್ಯಾಂಡ್’ ಎನ್ನುವ ದ್ವೀಪ ನಿರ್ಮಾಣವಾಗಿತ್ತು. ಅದು 2005 ರಲ್ಲಿ ಬಿರುಗಾಳಿಗೆ ಸಿಕ್ಕು ಹಾಳಾಯಿತು. ಸ್ಪೈಡರ್ ಐಲ್ಯಾಂಡಿನ ನಿರ್ಮಾಣಕ್ಕೆ 2,50,000 ಬಾಟಲಿಗಳನ್ನು ಬಳಕೆ ಮಾಡಿದ್ದರು.

ಸೋವಾ ಅವರ ದ್ವೀಪಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲ್ ಗಳು ಸದುಪಯೋಗವಾಗುತ್ತವೆ ಎಂದರೆ ಇನ್ನು ಕೆಲವರು ಯಾವುದಾದರೂ ದುರ್ಘಟನೆಗೆ ದ್ವೀಪ ಸಿಕ್ಕಿದರೆ ಬಾಟಲ್ ಗಳು ನದಿ ಸೇರಿ ನೀರು ಕಲುಷಿತವಾಗುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...