alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಇದನ್ನು ಮಾಡಿ

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ ಅಭಾವ ದಂಪತಿಯನ್ನು ದೂರ ಮಾಡುತ್ತದೆ. ನಿಮ್ಮ ದಾಂಪತ್ಯದಲ್ಲೂ ಈ ದೂರ, ಪ್ರೀತಿ ಅಭಾವ ಕಾಣುತ್ತಿದ್ದರೆ ರಾತ್ರಿ ಅವಶ್ಯವಾಗಿ ಇದನ್ನು ಮಾಡಿ.

ರಾತ್ರಿ ಊಟ : ಇಡೀ ದಿನ ಇಬ್ಬರು ಬ್ಯುಸಿ ಇರ್ತೀರಾ ಎಂದಾದ್ರೆ ಆದಷ್ಟು ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಲು ಸಮಯ ಹೊಂದಿಸಿಕೊಳ್ಳಿ. ಎಲ್ಲ ಕೆಲಸ ಮುಗಿಸಿ ಒಂದಾಗಿ ಕುಳಿತು ಊಟ ಮಾಡಿ. ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.

ಪ್ರೀತಿಯ ಮಾತು : ಎಷ್ಟೇ ಒತ್ತಡದಲ್ಲಿದ್ದರೂ ರಾತ್ರಿ ಸಂಗಾತಿ ಜೊತೆ ಪ್ರೀತಿಯ ಮಾತುಗಳನ್ನಾಡಿ. ಪ್ರೀತಿಯ ಮಾತಿಗೆ ದೊಡ್ಡ ದೊಡ್ಡ ಸಮಸ್ಯೆಯನ್ನೂ ಕ್ಷಣದಲ್ಲಿ ಬಗೆಹರಿಸುವ ಶಕ್ತಿಯಿದೆ.

ಪ್ರೀತಿ ವ್ಯಕ್ತಪಡಿಸಿ : ಮನಸ್ಸಿನಲ್ಲಿ ಎಷ್ಟೇ ಪ್ರೀತಿಯಿರಲಿ ಅದನ್ನು ಹೇಳಿಕೊಂಡರೆ, ತೋರಿಸಿಕೊಂಡರೆ ಮಾತ್ರ ಸಂಗಾತಿಗೆ ತಿಳಿಯುತ್ತದೆ. ಹಾಗಾಗಿ ನಿಮಗೆ ನಿಮ್ಮ ಸಂಗಾತಿ ಎಷ್ಟು ಮುಖ್ಯ. ಅವರನ್ನು ನೀವು ಎಷ್ಟು ಪ್ರೀತಿ ಮಾಡ್ತೀರಾ ಎಂಬುದನ್ನು ಮಾತಿನ ಮೂಲಕವೊಂದೇ ಅಲ್ಲ ನಿಮ್ಮ ಕೈರುಚಿಯಿಂದಲೂ ತೋರಿಸಬಹುದು.

ಐ ಲವ್ ಯೂ : ಇದು ಕೇವಲ ಶಬ್ಧವಲ್ಲ. ಎರಡು ಮನಸ್ಸುಗಳನ್ನು ಬೆಸೆಯುವಂತಹದ್ದು. ಇದನ್ನು ಹೇಳಲು ರಾತ್ರಿ ಬೇಕಾಗಿಲ್ಲ. ಸಮಯ ಸಿಕ್ಕಾಗ ಒಂದು ಸಂದೇಶವನ್ನು ಕೂಡ ರವಾನೆ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...