alex Certify
ಕನ್ನಡ ದುನಿಯಾ       Mobile App
       

Kannada Duniya

ಡೈವೋರ್ಸಿ ಜೊತೆ ಡೇಟ್ ಮಾಡುವ ಮುನ್ನ…..

2017_3image_11_36_557351122date-ll

ಗಂಡು-ಹೆಣ್ಣಿನ ಸಂಬಂಧ ಬಹಳ ನಾಜೂಕಿನದ್ದಾಗಿರುತ್ತದೆ. ಸಂಬಂಧವನ್ನು ಉಳಿಸಿಕೊಂಡು ಹೋಗಲು ಬಹಳ ತಾಳ್ಮೆ ಹಾಗೂ ಸಂಯಮ ಬೇಕು. ವಿಚ್ಛೇದನ ಮಾಡಿಕೊಂಡವರ ಜೊತೆ ಸಂಬಂಧ ಬೆಳೆಸುವುದು ಸುಲಭವಲ್ಲ. ಹಾಗೆ ಬಹಳ ಸೂಕ್ಷ್ಮ ಸಂಗತಿಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.

ವಿಚ್ಛೇದನದ ನಂತ್ರ ಜನರನ್ನು ಬೇಗ ನಂಬುವುದಿಲ್ಲ. ಹೊಸ ಸಂಬಂಧ ಚಿಗುರಲು ಬಹಳ ಸಮಯ ಹಿಡಿಯುತ್ತದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರಿಂದ ಅವರು ಬೇಗ ಅಪರಿಚಿತರನ್ನು ನಂಬುವುದಿಲ್ಲ. ನಿಮ್ಮಂತೆ ಅವರು ಹೊಂದಾಣಿಕೆ ಮಾಡಿಕೊಳ್ಳಬೇಕೆಂದುಕೊಳ್ಳುವುದು ತಪ್ಪಾಗುತ್ತದೆ.

ವಿಚ್ಛೇದನದ ನಂತ್ರ ಪ್ರತಿಯೊಬ್ಬ ವ್ಯಕ್ತಿಯೂ ರೋಮ್ಯಾನ್ಸ್ ಮಿಸ್ ಮಾಡಿಕೊಳ್ತಾರೆ. ಇದನ್ನು ನೀವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನೀವು ರೋಮ್ಯಾನ್ಸ್ ಮಾಡುವ ವ್ಯಕ್ತಿಯಾಗಿದ್ದರೆ ನಿಮಗಿದು ಪ್ಲಸ್ ಪಾಯಿಂಟ್. ಅವರ ಜೊತೆ ಡೇಟಿಂಗ್ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳಬೇಡಿ.

ಡೇಟಿಂಗ್ ಸಮಯದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ವಿಚ್ಛೇದನ ಪಡೆದವರು ಈಗಾಗ್ಲೇ ಒಮ್ಮೆ ಮೋಸ ಹೋಗಿರ್ತಾರೆ. ಅವರು ಬೇರೆಯವರ ಸುಳ್ಳು, ಮೋಸವನ್ನು ತಕ್ಷಣ ಪತ್ತೆ ಹಚ್ಚುತ್ತಾರೆ. ನಿಮ್ಮ ಮೋಸವನ್ನು ಕ್ಷಣದಲ್ಲಿ ಪತ್ತೆ ಹಚ್ಚುವ ಅವರು ತಕ್ಷಣ ನಿಮ್ಮಿಂದ ದೂರವಾಗುವ ಸಾಧ್ಯತೆಯೂ ಇದೆ. ಹಾಗಾಗಿ ಪ್ರಾಮಾಣಿಕರಾಗಿರಿ. ಜೊತೆಗೆ ಮುಗ್ಧತೆಯನ್ನು ಕಾಪಾಡಿಕೊಳ್ಳಿ.

ಸಂಬಂಧಕ್ಕೆ ಸಮಯ ನೀಡುವುದು ಬಹಳ ಮುಖ್ಯ. ನೀವು ಅವರನ್ನು ಮೆಚ್ಚಿ ಡೇಟಿಂಗ್ ಗೆ ಕರೆದುಕೊಂಡು ಹೋಗಿರ್ತೀರಾ. ಆದ್ರೆ ಅಲ್ಲಿ ಆತುರ ಬೇಡ. ಈ ಸಂಬಂಧವನ್ನು ನೀವು ಸಂಭಾಳಿಸಬಲ್ಲೀರಾ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಂತ್ರ ಮುಂದುವರೆಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...