alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಯಾಕೆ ಮಾಡ್ತಾಳೆ ಪರಪುರುಷನ ಸಂಬಂಧ..?

cheatಮದುವೆ ನಂತರವೂ ಪರಪುರುಷನೊಂದಿಗೆ ಅನೇಕ ಮಹಿಳೆಯರು ಸಂಬಂಧ ಹೊಂದಿರುತ್ತಾರೆ. ಇದು ತಪ್ಪು ಹೆಜ್ಜೆ ಹೌದು. ಆದರೆ ಆಕೆ ಯಾಕೆ ಪರ ಪುರುಷನಿಗೆ ಆಕರ್ಷಿತಳಾದಳು ಎನ್ನುವ ಬಗ್ಗೆ ಯಾರೂ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.

ಮಹಿಳೆ ಆಗಿರಲಿ ಇಲ್ಲ ಪುರುಷನಾಗಿರಲಿ ತಮ್ಮ ಸಂಗಾತಿಗೆ ಮೋಸ ಮಾಡಲು ಬಯಸುವುದಿಲ್ಲ. ವಿವಾಹಿತ ಮಹಿಳೆ ತಕ್ಷಣ ಪರಪುರುಷನೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಎಲ್ಲ ಮಹಿಳೆಯರು ಹಾಗಿರುವುದಿಲ್ಲ. ಮಹಿಳೆಯರು ಬೇರೆ ಪುರುಷನೊಂದಿಗೆ ಸಂಬಂಧ ಬೆಳೆಸಿದಳೆಂದರೆ ಅದರ ಹಿಂದೆ ಬೇರೆ ಉದ್ದೇಶ ಇದ್ದೇ ಇರುತ್ತದೆ.

ಏಕಾಂಗಿತನ : ಸಂಗಾತಿ ಮನೆಯಿಂದ ದೂರವಿದ್ದಾಗ ಏಕಾಂಗಿತನ ಕಾಡುತ್ತದೆ. ಪತಿ ಕೆಲಸದ ನಿಮಿತ್ತ ಬೇರೆ ದೇಶದಲ್ಲಿ ವಾಸಿಸುತ್ತಿದ್ದರೆ ಪತ್ನಿಗೆ ಒಂಟಿತನ ಕಾಡುತ್ತದೆ. ಏಕಾಂಗಿತನ ಹೋಗಲಾಡಿಸಿಕೊಳ್ಳಲು ಕೆಲ ಮಹಿಳೆಯರು ಬೇರೆ ಮಾರ್ಗ ಅರಸುತ್ತಾರೆ.

ಸಹಬಾಳ್ವೆ : ಪತಿ-ಪತ್ನಿ ನಡುವೆ ಜಗಳವಾಗೋದು ಕಾಮನ್. ಅಗತ್ಯಕ್ಕಿಂತ ಜಾಸ್ತಿ ಕಿತ್ತಾಟ ನಡೆಯುತ್ತಿದ್ದರೆ ಇಬ್ಬರು ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಈ ವೇಳೆ ಕೆಲ ಮಹಿಳೆಯರು ದಾರಿ ತಪ್ಪುವುದುಂಟು.

ಸೆಕ್ಸ್ : ಕೆಲ ಮಹಿಳೆಯರು ತಮ್ಮ ಸಂಗಾತಿಯಿಂದ ತೃಪ್ತಿ ಹೊಂದುವುದಿಲ್ಲ. ಈ ಬಗ್ಗೆ ಬಹಿರಂಗವಾಗಿ ಹೇಳುವುದೂ ಇಲ್ಲ. ತಮ್ಮ ತೃಪ್ತಿಗಾಗಿ ಬೇರೆ ಸಂಬಂಧ ಬೆಳೆಸುತ್ತಾರೆ.

ಮದುವೆ ವಯಸ್ಸಿನ ಅಂತರ : ಈಗಲೂ ಹಲವರು ಚಿಕ್ಕ ಹುಡುಗಿಗೆ ದೊಡ್ಡ ವಯಸ್ಸಿನವರ ಜೊತೆ ಮದುವೆ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಇಬ್ಬರೂ ಖುಷಿಯಾಗಿರುತ್ತಾರೆಂದು ಹಿರಿಯರು ನಂಬುತ್ತಾರೆ. ಆದರೆ ಹಾಗೆ ಮಾಡುವುದರಿಂದ ಇಬ್ಬರ ನಡುವೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹುಡುಗಿ ವಯಸ್ಸು ಜಾಸ್ತಿ ಇದ್ದು, ಹುಡುಗನ ವಯಸ್ಸು ಚಿಕ್ಕದಿದ್ದರೂ ಸಮಸ್ಯೆ ನಿಶ್ಚಿತ. ಲೈಂಗಿಕ ಕ್ರಿಯೆ ವೇಳೆ ಹುಡುಗನಿಗೆ ತೃಪ್ತಿ ಸಿಗುತ್ತದೆ. ಆದರೆ ಹುಡುಗಿಗೆ ಸಿಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...