alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಬಯಲಾಯ್ತು ಪತಿಯ ದೊಡ್ಡ ರಹಸ್ಯ

40ರ ಹರೆಯದ ಮಹಿಳೆಯೊಬ್ಬಳು ತನ್ನ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾಳೆ. 34 ನೇ ವರ್ಷದಲ್ಲಿ ಆಕೆ ಮದುವೆ ಅದ್ಧೂರಿಯಾಗಿ ನಡೆದಿತ್ತಂತೆ. ಆದ್ರೆ ಮೊದಲ ರಾತ್ರಿ ನಡೆದ ಆ ಘಟನೆ ಆಕೆ ಜೀವನವನ್ನೇ ಹಾಳು ಮಾಡ್ತಾಂತೆ.

ಎಲ್ಲರಂತೆ ಮೊದಲ ರಾತ್ರಿಯ ಕನಸು ಕಂಡಿದ್ದ ಮಹಿಳೆ ಹಾಲಿನ ಲೋಟ ಹಿಡಿದು ಪತಿಯ ರೂಮಿಗೆ ಹೋದ್ಲಂತೆ. ಆದ್ರೆ ಹಾಸಿಗೆಯಲ್ಲಿ ಸುಖ ನಿದ್ರೆಗೆ ಜಾರಿದ್ದ ಪತಿ ಆಕೆಯ ಮೊದಲ ಕನಸನ್ನು ನುಚ್ಚು ನೂರು ಮಾಡಿದ್ನಂತೆ. ಇದು ಆರಂಭವಷ್ಟೇ ಎನ್ನುವ ಮಹಿಳೆ ಪ್ರತಿ ರಾತ್ರಿ, ಹಗಲು ಗಂಡನ ಪ್ರೀತಿಗಾಗಿ ಹಾತೊರೆದಳಂತೆ. ಆದ್ರೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಆಘಾತದ ಸುದ್ದಿ.

ನಪುಂಸಕನಾಗಿದ್ದರೂ ಮದುವೆಯಾದ ಪತಿ ಇನ್ನೊಬ್ಬನ ಜೊತೆ ಮಲಗಿ ಮಗು ನೀಡುವಂತೆ ಪತ್ನಿಗೆ ಮನವಿ ಮಾಡಿದ್ದನಂತೆ. ವಿಚ್ಛೇದನ ನೀಡಿದ್ರೆ ಮಾನ ಹೋಗುತ್ತೆ ಎಂದು ಗೋಳಾಡಿದ್ದನಂತೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಆತನ ಗೂಡಿನಿಂದ ಹೊರಬಂದು ಸ್ವತಂತ್ರಳಾದ ಮಹಿಳೆ ನಾಲ್ಕು ವರ್ಷ ಹೋರಾಡಿ ವಿಚ್ಛೇದನ ಪಡೆದಳಂತೆ. ನನಗೀಗ 40 ವರ್ಷ. ಈಗ್ಲೂ ನಾನು ಕನ್ಯೆ. ಕೇವಲ ಶಾರೀರಿಕ ಸಂಬಂಧ ಬಯಸುವ ಸಂಗಾತಿ ನನಗೆ ಬೇಡ. ಮಾಜಿ ಪತಿ ನಪುಂಸಕ ಎನ್ನುವ ಕಾರಣಕ್ಕೆ ನಾನು ವಿಚ್ಛೇದನ ಪಡೆದಿಲ್ಲ. ನಾನು ಬಯಸಿದ ಪ್ರೀತಿಯೂ ಆತನಿಂದ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಾನು ವಿಚ್ಛೇದನ ಪಡೆದೆ. ನನಗೆ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ನಡೆಯುವ ಸಂಗಾತಿ ಬೇಕೆಂದು ಮಹಿಳೆ ತನ್ನ ನೋವನ್ನು ಎಲ್ಲರ ಮುಂದೆ ತೋಡಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...