alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಕರ ಚಂಡಮಾರುತಕ್ಕೂ ಬಗ್ಗಲಿಲ್ಲ ಇವರ ಪ್ರೀತಿ

ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ನಡೆಯೋ ಮಧುರವಾದ ಘಟನೆ. ಆ ದಿನ ಏನಾದ್ರೂ ಯಡವಟ್ಟಾದ್ರೆ ವಧು-ವರರು ನಿರಾಶರಾಗ್ತಾರೆ. ಬದುಕಿನುದ್ದಕ್ಕೂ ಆ ಬೇಸರ ಅವರನ್ನು ಕಾಡುತ್ತಿರುತ್ತದೆ. ಟೆಕ್ಸಾಸ್ ನ ಶೆಲ್ಲಿ ಹಾಗೂ ಕ್ರಿಸ್ ಹೋಲಾಂಡ್ ಕೂಡ ಮದುವೆಯ ಮುನ್ನಾ ದಿನ ಎಲ್ಲವನ್ನೂ ಕಳೆದುಕೊಂಡಿದ್ರು.

ಭೀಕರ ಹಾರ್ವೆ ಚಂಡಮಾರುತದ ಅಬ್ಬರಕ್ಕೆ ಎಲ್ಲವೂ ನೀರುಪಾಲಾಗಿತ್ತು. ಮನೆಯೂ ಸಂಪೂರ್ಣ ಜಲಾವೃತವಾಗಿತ್ತು. ಆದ್ರೆ ಚಂಡಮಾರುತಕ್ಕೇ ಸೆಡ್ಡು ಹೊಡೆದು ಈ ಜೋಡಿ ತಮ್ಮ ಮದುವೆಯ ಕ್ಷಣವನ್ನು ಸ್ಪೆಷಲ್ ಆಗಿ ಸಂಭ್ರಮಿಸಿದೆ. ನಿಜವಾದ ಪ್ರೀತಿ ಎಂತಹ ಚಂಡಮಾರುತವನ್ನೂ ಎದುರಿಸಬಲ್ಲದು ಅನ್ನೋದನ್ನು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

6 ತಿಂಗಳುಗಳಿಂದ ಮಾಡಿಕೊಂಡಿದ್ದ ಮದುವೆಯ ಸಿದ್ಧತೆ ಒಂದೇ ಕ್ಷಣದಲ್ಲಿ ಹೇಗೆ ಮಣ್ಣುಪಾಲಾಯ್ತು ಅನ್ನೋದನ್ನು ಶೆಲ್ಲಿ ಫೇಸ್ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾಳೆ. ಅಷ್ಟೇ ಅಲ್ಲ ಇಂತಹ ಎಷ್ಟು ಚಂಡಮಾರುತ ಬಂದ್ರೂ ಅದನ್ನೆಲ್ಲ ಎದುರಿಸುವ ತಾಕತ್ತು ತಮ್ಮ ಪ್ರೀತಿಗಿದೆ ಅನ್ನೋದನ್ನು ಒಂದು ಫೋಟೋ ಮೂಲಕ ಸಾಬೀತುಪಡಿಸಿದ್ದಾಳೆ. ಶೆಲ್ಲಿ ಪೋಸ್ಟ್ ಅನ್ನು 20,000 ಮಂದಿ ಶೇರ್ ಮಾಡಿದ್ದು, 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...