alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಫ್‌ ಸೆಕ್ಸ್‌ಗಾಗಿ ಬಂದಿದೆ ಫೀಮೇಲ್‌ ಕಾಂಡೋಮ್‌

ಸುರಕ್ಷಿತ ಲೈಂಗಿಕ ಕ್ರಿಯೆ ಪುರುಷ ಹಾಗೂ ಮಹಿಳೆಯರಿಗೆ ಅತಿ ಮುಖ್ಯ. ಹೀಗಾಗಿ ನಮ್ಮ ದೇಶದಲ್ಲಿಯೂ ಈಗ ಫೀಮೇಲ್‌ ಕಾಂಡೋಮ್‌ ಲಾಂಚ್‌ ಆಗಿದೆ. ಏಡ್ಸ್‌ ರೋಗದಂಥ ಮಹಾಮಾರಿಯಿಂದ ದೂರವಿರುವುದಕ್ಕಾಗಿ ಈಗ ಮಹಿಳೆಯರಿಗಾಗಿ ಕಾಂಡೋಮ್‌ ಗಳನ್ನ ಪರಿಚಯಿಸಲಾಗಿದೆ.

ಫೀಮೇಲ್ ಕಾಂಡೋಮ್‌ ಅಂದರೆ ಏನು..?

ಮಹಿಳೆಯರಿಗಾಗಿಯೇ ವಿಶೇಷವಾಗಿ ತಯಾರಿಸಲಾಗಿರುವ ಕಾಂಡೋಮ್‌ ಇದು. ಬೇಡದ ಗರ್ಭವನ್ನು ತಡೆಯುವುದಕ್ಕಾಗಿ, ಲೈಂಗಿಕ ರೋಗಗಳಿಂದ ದೂರವಿರುವುದಕ್ಕಾಗಿ ಪರಿಚಯಿಸಲಾಗಿರುವ ಈ ಕಾಂಡೋಮ್‌ ಗೆ ಇನ್ನಷ್ಟು ಪ್ರಚಾರದ ಅಗತ್ಯವಿದೆ. ಕಾಂಡೋಮ್ ಧರಿಸುವುದೂ ಕೂಡ ಅತ್ಯಂತ ಸುಲಭ. ಮುಟ್ಟಿನ ದಿನಗಳಲ್ಲಿ ಟ್ಯಾಂಪೋನ್‌ಗಳನ್ನ ಬಳಸುವ ಮಹಿಳೆಯರಿಗಂತೂ ಈ ಕಾಂಡೋಮ್‌ ಬಳಕೆ ಅತ್ಯಂತ ಸುಲಭವಾಗುತ್ತದೆ. ಸಾಫ್ಟ್‌ ಲೇಟೆಕ್ಸ್‌ ಸ್ಕಿನ್‌ನಿಂದ ತಯಾರಿಸಲಾಗುವ ಈ ಕಾಂಡೋಮ್‌ ಮೃದು ಭಾಗಕ್ಕೆ ಸರಿಹೊಂದುವಂತೆಯೇ ಸಿದ್ಧಪಡಿಸಲಾಗಿದೆ.

ಫೀಮೇಲ್‌ ಕಾಂಡೋಮ್‌ ಗಳಿಗೆ ಇಂಟರ್ನಲ್‌ ಕಾಂಡೋಮ್ ಎಂಬ ಹೆಸರು ಕೂಡ ಇದೆ. ಇದು ಯೋನಿಯೊಳಗೆ ಹೊಂದಿಕೊಂಡ ನಂತರ ವೀರ್ಯವು ಮಹಿಳೆಯ ಗರ್ಭವನ್ನ ಪ್ರವೇಶಿಸದಂತೆ ತಡೆಯುತ್ತದೆ. ಹೀಗಾಗಿ ಮಹಿಳೆ ಮುಂಜಾಗ್ರತೆ ವಹಿಸಿ ತಾನೇ ಕಾಂಡೋಮ್‌ ಧರಿಸಿಕೊಳ್ಳಬಹುದು. ಮತ್ತು ಮಹಿಳೆ ಕಾಂಡೋಮ್‌ ಧರಿಸಿದ್ದರೆ ಪುರುಷ ಕಾಂಡೋಮ್ ಧರಿಸುವ ಅಗತ್ಯವಿರುವುದಿಲ್ಲ.

ಇದರ ಉಪಯೋಗ ಹೇಗೆ..?

ಮೊದಲು ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಮತ್ತು ಒತ್ತಡಕ್ಕೊಳಗಾಗದೇ ದೀರ್ಘ ಶ್ವಾಸವನ್ನೆಳೆದುಕೊಂಡು ಕಾಂಡೋಮ್‌ ಧರಿಸಿ. ಸಂಭೋಗಕ್ಕೂ ಮುನ್ನ ಯೋನಿಯೊಳಗೆ ಈ ಕಾಂಡೋಮ್‌ ತೂರಿಸಿಕೊಳ್ಳಬೇಕು. ಕಾಂಡೋಮ್‌ ನ ಎರಡೂ ತುದಿಯಲ್ಲಿಯೂ ಫ್ಲೆಕ್ಸಿಬಲ್‌ ರಿಂಗ್‌ ಇದೆ. ಯೋನಿಯ ಒಳಗೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ. ಹಾಗೇ ಯೋನಿಯ ಹೊರಗೂ ಕೂಡ ಕಾಂಡೋಮ್‌ ಗಿರುವ ಮೃದು ವರ್ತುಲ ಭದ್ರವಾಗಿ ಹಿಡಿದಿರುತ್ತದೆ. ಸಂಭೋಗದ ನಂತರ, ಕಾಂಡೋಮ್‌ ಸುಲಭವಾಗಿ ತೆಗೆಯಬಹುದು.

ನಮ್ಮ ದೇಶದಲ್ಲಿ ಇದು ಲಭ್ಯವಿದೆಯೇ..?

ಹೌದು. ನಮ್ಮ ದೇಶದಲ್ಲಿ ಈಗ ಈ ಫೀಮೇಲ್‌ ಕಾಂಡೋಮ್ ಲಭ್ಯವಿದೆ.  ಭಾರತದ ಎಲ್ಲಾ ಆನ್‌ ಲೈನ್‌ ಸ್ಟೋರ್ಸ್‌ ಗಳು ಈಗ ಈ ಫೀಮೇಲ್‌ ಕಾಂಡೋಮ್‌ನ್ನ ಮಾರಾಟ ಮಾಡುತ್ತಿವೆ.  ಹಾಗೆಯೇ ಕೆಲವು ಮೆಡಿಕಲ್‌ ಶಾಪ್‌ಗಳಲ್ಲಿಯೂ ಲಭ್ಯವಿದೆ. ಫೀಮೇಲ್‌ ಕಾಂಡೋಮ್‌ ತಯಾರಿಸುತ್ತಿರುವ ವೆಲ್‌ ವೆಟ್‌  (‘Velvet’ ) ಎಂಬ ಕಂಪನಿಯು ವರ್ಲ್ಡ್‌ ಹೆಲ್ತ್‌ ಆರ್ಗನೈಸೇಶನ್‌ನಿಂದ ( WHO) ಒಪ್ಪಿಗೆ ಪತ್ರ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...