alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಲೈಫ್ ನ ಒಂದಿಷ್ಟು ಸೆಕ್ಸಿ ಟಿಪ್ಸ್

ನಿಮ್ಮ ಸೆಕ್ಸ್ ಲೈಫ್ ಸುಖಮಯವಾಗಿರಬಹುದು. ಲೈಂಗಿಕ ಜೀವನದ ಎಲ್ಲ ಖುಷಿ ನಿಮಗೆ ಸಿಗ್ತಿರಬಹುದು. ಹಾಗಂತ ಸೆಕ್ಸ್ ನಲ್ಲಿ ಪ್ರಯೋಗ ಮಾಡದೆ ಹಾಗೆ ಇರಬೇಕೆಂದೇನೂ ನಿಯಮವಿಲ್ಲ. ಸುಖಕರ ಸೆಕ್ಸ್ ಲೈಫನ್ನು ಇನ್ನಷ್ಟು ಆಸಕ್ತಿದಾಯಕ ಮಾಡುವ ಟಿಪ್ಸ್ ಇಲ್ಲಿದೆ ನೋಡಿ.

ಸಂಭೋಗದಿಂದ ಕೆಲ ದಿನ ದೂರವಿರಿ. ಯಸ್. ನಾವು ಹೇಳ್ತಿರೋದು ನಿಜ. ಸಂಗಾತಿ ಮಧ್ಯೆ ಕೀಟಲೆ, ಹಾಸ್ಯ, ಸ್ಪರ್ಶವಿರಲಿ. ಆದ್ರೆ ಸಂಭೋಗ ಬೇಡ. ಪರಸ್ಪರ ದೂರವಿದ್ದಾಗ ಕಾಮಾಸಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ನಡೆಯುವ ಸಂಭೋಗಕ್ಕಿಂತ ವಾರ ಬಿಟ್ಟು ಒಂದಾದ ಆ ಕ್ಷಣ ಮತ್ತಷ್ಟು ಸುಖ, ಸಂತೋಷಕರವಾಗಿರುತ್ತದೆ.

ಸುಖ ಸಂಭೋಗಕ್ಕೆ ವಾತಾವರಣ ಹಾಗೂ ಒತ್ತಡ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಶಾಂತವಾಗಿರುವ, ಸಂಗಾತಿ ಜೊತೆ ಆರಾಮವಾಗಿ ಸಮಯ ಕಳೆಯುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಒತ್ತಡಕ್ಕೆ ಅಲ್ಲಿ ಜಾಗವಿರದಂತೆ ನೋಡಿಕೊಳ್ಳಿ.

ಸಂಗಾತಿ ಮಧ್ಯೆ ಪ್ರಶಂಸೆ, ಪ್ರೀತಿ ಆಗಾಗ ವ್ಯಕ್ತವಾಗ್ತಿರಬೇಕು. ಪದೇ ಪದೇ ಸಂಗಾತಿಯನ್ನು ಹೊಗಳಿದ್ರೆ ಅವ್ರು ತಪ್ಪು ಭಾವಿಸಬಹುದು ಎಂದುಕೊಂಡ್ರೆ ನಿಮ್ಮ ಕಲ್ಪನೆ ತಪ್ಪು. ಐ ಲವ್ ಯು, ನೀನು ಸುಂದರವಾಗಿ ಕಾಣ್ತೀಯಾ ಎನ್ನುವ ಮಾತುಗಳೆಲ್ಲ ಎಂದೂ ಸಂಬಂಧ ಹಾಳು ಮಾಡಲಾರದು. ಪ್ರೀತಿ ಹೆಚ್ಚಿಸುವ ಜೊತೆಗೆ ಇಬ್ಬರ ಮಧ್ಯೆಯಿರುವ ಅಂತರವನ್ನು ಇದು ಕಡಿಮೆ ಮಾಡುತ್ತದೆ.

ಸಂಗಾತಿ ನಿರೀಕ್ಷೆ ಮಾಡದ ಸರ್ಪ್ರೈಸಸ್ ಗಳನ್ನು ಆಗಾಗ ನೀಡುತ್ತಿರಿ. ಸರ್ಪ್ರೈಸ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಪರಸ್ಪರರನ್ನು ಹತ್ತಿರಕ್ಕೆ ಸೆಳೆಯಲು ಸಹಾಯವಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...