alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಂಗಾತಿಗೆ ನಿಮ್ಮ ನೆನಪಾಗಬೇಕಾ? ಹಾಗಿದ್ರೆ ಈ ಟ್ರಿಕ್ ಬಳಸಿ

ಪ್ರೇಮಿಗಳ ಮಧ್ಯೆ ಎಷ್ಟೇ ಪ್ರೀತಿಯಿರಲಿ, ಆಗಾಗ ಜಗಳ, ಗಲಾಟೆ ಮಾಮೂಲಿ. ಒಮ್ಮೊಮ್ಮೆ ಸಣ್ಣ ಗಲಾಟೆ ದೊಡ್ಡದಾಗುತ್ತದೆ. ಇಬ್ಬರು ಬೇರೆಯಾಗುವ ಸಂದರ್ಭ ಬರುತ್ತದೆ. ಬೇರೆಯಾಗಿ ಹೊಸ ಜೀವನ ನಡೆಸಲು ಮುಂದಾದ್ರೂ ಹಳೆ ಪ್ರೇಮಿ ನೆನಪು ಅನೇಕರನ್ನು ಕಾಡುತ್ತದೆ. ಸಂಗಾತಿಗೆ ಕೂಡ ಹಳೆ ನೆನಪು ಕಾಡಿ ಮತ್ತೆ ತನ್ನ ಬಳಿ ವಾಪಸ್ ಬರಲಿ ಎಂದು ಅನೇಕರು ಬಯಸ್ತಾರೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಟ್ರಿಕ್ಸ್ ಉಪಯೋಗಿಸಿ ಹಳೆ ಪ್ರೇಮಿಯನ್ನು ಮತ್ತೆ ಹತ್ತಿರಕ್ಕೆ ಕರೆಯಿರಿ.

ಮೊದಲನೆಯದಾಗಿ ನಿಮ್ಮ ಜೀವನ ಶೈಲಿಯನ್ನು ಬದಲಿಸಬೇಕಾಗುತ್ತದೆ. ಜೀವನದಲ್ಲಿ ನೀವು ತುಂಬಾ ಮುಂದೆ ಹೋಗಿದ್ದೀರೆಂದು ಅವರಿಗೆ ತೋರಿಸಬೇಕಾಗುತ್ತದೆ. ಹೊಸ ಕಾರ್, ಬೈಕ್, ಯಾವುದೇ ವಸ್ತು ಖರೀದಿ ಮಾಡಿದ್ದರೂ ಅದು ಅವ್ರ ಕಣ್ಣಿಗೆ ಬೀಳುವಂತೆ ಮಾಡಬೇಕು.

ಹಳೆ ಅಥವಾ ಹೊಸ ಸ್ನೇಹಿತರ ಜೊತೆ ಸುತ್ತಾಡಬೇಕು. ಬ್ರೇಕ್ ಅಪ್ ನಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂಬುದನ್ನು ತೋರ್ಪಡಿಸಬೇಕು. ಸ್ನೇಹಿತರ ಜೊತೆ ಸುತ್ತಾಡುವುದ್ರಿಂದ ನಿಮ್ಮ ಮನಸ್ಸು ಕೂಡ ಉಲ್ಲಾಸಿತಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ಹೊಸಬರ ಪ್ರವೇಶವಾಗ್ತಿದೆ ಎಂಬುದನ್ನು ಹಳೆ ಪ್ರೇಮಿಗಳು ಸಹಿಸೋದಿಲ್ಲ. ನಿಮ್ಮ ಬಳಿ ವಾಪಸ್ ಬರಲು ಪ್ರಯತ್ನ ನಡೆಸ್ತಾರೆ.

ಮೊದಲಿಗಿಂತ ಹೆಚ್ಚು ಸುಂದರವಾಗಿ ಜೀವನ ಕಳೆಯಿರಿ. ಖುಷಿ ಖುಷಿಯಾಗಿ ಎಲ್ಲ ಕ್ಷಣವನ್ನು ಎಂಜಾಯ್ ಮಾಡಿ. ಇದ್ರಿಂದ ನಿಮ್ಮ ಮಾಜಿಗೆ ನಿಮ್ಮ ಮೇಲೆ ಮತ್ತೆ ಪ್ರೀತಿ ಚಿಗುರುವ ಸಾಧ್ಯತೆ ಹೆಚ್ಚಿರುತ್ತದೆ. ತಪ್ಪು ಮಾಡಿದೆ ಎನ್ನುವ ಕಾರಣ ಹೇಳಿ ವಾಪಸ್ ಬರ್ತಾರೆ.

ನಿಮ್ಮ ಸ್ಟೈಲ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೊಸ ಬಟ್ಟೆ ಖರೀದಿಸಿ. ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡಿ. ನಿದ್ರೆಯಲ್ಲೂ ಪ್ರೇಮಿಗೆ ಕಾಡುವಂತಹ ಲುಕ್ ನಿಮ್ಮದಾಗಿಸಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...