alex Certify
ಕನ್ನಡ ದುನಿಯಾ       Mobile App
       

Kannada Duniya

ಬುದ್ಧಿವಂತ ಪಾಲಕರು ಮಕ್ಕಳನ್ನು ಹೀಗೆ ಬೆಳೆಸ್ತಾರೆ

ಸಮಾಜದಲ್ಲಿ ಮಗುವಿಗೆ ಉನ್ನತ ಹುದ್ದೆ, ಗೌರವ ಸಿಗಲಿ ಎಂದು ಪಾಲಕರು ಬಯಸ್ತಾರೆ. ಪ್ರತಿ ದಿನ ಪ್ರತಿ ಕ್ಷಣ ಮಗು ಬೆಳೆಯುತ್ತದೆ. ಒಂದೊಂದು ಹೊಸ ವಿಷ್ಯಗಳನ್ನು ಕಲಿಯುತ್ತದೆ. ಮಗುವಿನ ಮಾನಸಿಕ ಬೆಳವಣಿಗೆಗೆ ಪಾಲಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಗುವಿನ ಮನಸ್ಸಿಗೆ ಘಾಸಿಯಾಗದಂತೆ ಮಗುವನ್ನು ಬೆಳೆಸುವುದು ಬಹಳ ಮುಖ್ಯ.

ಮಾನಸಿಕವಾಗಿ ಬಲ ಹೊಂದಿರುವ ಕುಟುಂಬ ಮಗುವಿಗೆ ಎಲ್ಲ ಕೆಲಸ ಮಾಡಲು ಬಿಡುತ್ತದೆ. ಮಗುವನ್ನು ಕೆಲಸಕ್ಕೆ ಪ್ರೋತ್ಸಾಹಿಸುವ ಜೊತೆಗೆ ಬೆಂಬಲಿಸುತ್ತದೆ. ಮಕ್ಕಳಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾದ್ರೆ, ನೋವಾದ್ರೆ ಮತ್ತೆ ಎದ್ದು ನಿಲ್ಲುವುದನ್ನು ಕಲಿಸುತ್ತದೆ.

ಮಕ್ಕಳ ಮಿತಿಗಿಂತ ಹೆಚ್ಚನ್ನು ಕುಟುಂಬಸ್ಥರು ನಿರೀಕ್ಷಿಸುವುದಿಲ್ಲ. ಎಲ್ಲ ಕೆಲಸವನ್ನೂ ಮಗು ಅತ್ಯುತ್ತಮವಾಗಿ ಮಾಡಲಾರದು ಎಂಬ ಸಂಗತಿ ಅವರಿಗೆ ತಿಳಿದಿರುತ್ತದೆ. ಮಗುವನ್ನು ಇತರರಿಗೆ ಹೋಲಿಸುವುದಿಲ್ಲ. ಗುರಿ ತಲುಪಲು ಮಕ್ಕಳಿಗೆ ಪಾಲಕರು ನೆರವಾಗ್ತಾರೆ.

ಶಿಸ್ತು ಪಾಲನೆ ಮುಖ್ಯ. ಶಿಸ್ತನ್ನು ಮಕ್ಕಳು ಉಲ್ಲಂಘಿಸಿದ್ರೆ ಶಿಕ್ಷೆ ನೀಡುವುದಿಲ್ಲ. ಸ್ವಯಂ ಶಿಸ್ತನ್ನು ಪಾಲಕರು ಬೋಧಿಸುತ್ತಾರೆ.

ಮಕ್ಕಳು ತಪ್ಪು ಮಾಡುವಾಗ ತಡೆಯುವುದಿಲ್ಲ. ತಪ್ಪಿನಿಂದ ಮಕ್ಕಳು ಸಾಕಷ್ಟು ಕಲಿಯುತ್ತಾರೆ ಎಂಬ ವಿಷ್ಯ ಪಾಲಕರಿಗೆ ತಿಳಿದಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...