alex Certify
ಕನ್ನಡ ದುನಿಯಾ       Mobile App
       

Kannada Duniya

10 ದಿನದಲ್ಲಿ ಮೊಳಕೆಯೊಡೆದು ಹೊರ ಬಂತು ಟೋಮೋಟೋ ಸಸಿ..!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ತರಕಾರಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಳಗೆ ಜಾಗ ಇಲ್ಲದವರು ಟೆರೆಸ್ ಮೇಲೆ ತರಕಾರಿ ಬೆಳೆಯುತ್ತಿದ್ದಾರೆ. ಆಲೂಗಡ್ಡೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿದಂತೆ ಸುಲಭವಾಗಿ ಬೆಳೆಯುವ ತರಕಾರಿಗಳನ್ನು ಜನರು ಬೆಳೆಯುತ್ತಿದ್ದಾರೆ. ತರಕಾರಿ ಪಟ್ಟಿಯಲ್ಲಿ ಟೋಮೋಟೋ ಕೂಡ ಒಂದು.

ಟೋಮೋಟೋ ಬೆಳೆಯುವವರಿಗೆ ಗೊತ್ತು ಸಾಮಾನ್ಯವಾಗಿ ಟೋಮೋಟೋ ಸಸಿಯಾಗಿ ಹೊರ ಬರಲು ಒಂದರಿಂದ ಒಂದುವರೆ ತಿಂಗಳು ಬೇಕು. ಆದ್ರೆ ವ್ಯಕ್ತಿಯೊಬ್ಬ ಕೇವಲ ಹತ್ತೇ ಹತ್ತು ದಿನದಲ್ಲಿ ಟೋಮೋಟೋ ಸಸಿ ಬೀಜದಿಂದ ಮೊಳಕೆಯೊಡೆದು ಹೊರ ಬಂದ ಕಥೆಯನ್ನು ಹೇಳಿದ್ದಾನೆ.

ಸಾಮಾನ್ಯವಾಗಿ ಟೋಮೋಟೋ ಕತ್ತರಿಸಿ ಬೀಜ ತೆಗೆದು ಅದನ್ನು ಮಣ್ಣಿನಲ್ಲಿ ಹಾಕ್ತೇವೆ. ಆದ್ರೆ ಈತ ಹೆಚ್ಚಿನ ಬೀಜವಿರುವ ಟೋಮೋಟೋವನ್ನು ಸಣ್ಣ ಸಣ್ಣದಾಗಿ ಗುಂಡಗೆ ಕತ್ತರಿಸಿದ್ದಾನೆ. ನಂತ್ರ ಒಂದು ಬಕೆಟ್ ಗೆ ಅರ್ಧದಷ್ಟು ಮಣ್ಣು ಹಾಕಿ ಅದ್ರ ಮೇಲೆ ಟೋಮೋಟೋ ಸ್ಲೈಸ್ ಇಟ್ಟು ಅದ್ರ ಮೇಲೆ ಸಮ ಪ್ರಮಾಣದಲ್ಲಿ ಮಣ್ಣು ಮುಚ್ಚಿದ್ದಾನೆ. ನಂತ್ರ ಗಾರ್ಡನ್ ನಲ್ಲಿ ಇದನ್ನು ಇಟ್ಟಿದ್ದಾನೆ. ಹತ್ತೇ ಹತ್ತು ದಿನದಲ್ಲಿ ಟೋಮೋಟೋ ಮೊಳಕೆಯೊಡೆದು ಸಸಿ ಹೊರ ಬಂದಿದೆ.

ಈ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.ಈತನ ಹೊಸ ಪ್ಲಾನ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...