alex Certify
ಕನ್ನಡ ದುನಿಯಾ       Mobile App
       

Kannada Duniya

ಬಳಸಿದ ಹೂವಿಗೆ ಹೊಸ ಅವತಾರ ನೀಡುವ ದೆಹಲಿ ದೇವಾಲಯ

ರಾಷ್ಟ್ರ ರಾಜಧಾನಿ ದೆಹಲಿ ಹೊರವಲಯದಲ್ಲಿರುವ ಜನ್ದೇವಾಲಾನ್ ದೇವಸ್ಥಾನವು ನೈರ್ಮಲ್ಯ ಹೂವಿಗೆ ಹೊಸ ರೂಪ ನೀಡಿ ಗಮನ ಸೆಳೆಯುತ್ತಿದೆ.

ಈ ದೇವಸ್ಥಾನಕ್ಕೆ ಪ್ರತಿ ದಿನ 5ರಿಂದ 10 ಸಾವಿರ ಭಕ್ತರು ಭೇಟಿ ಕೊಡುತ್ತಾರೆ. ಹೀಗೆ ಬರುವ ಬಹುತೇಕರು ದೇವರಿಗೆ ಹೂವನ್ನು ಸಮರ್ಪಿಸುತ್ತಾರೆ. ಭಕ್ತರು ದಿನವೊಂದಕ್ಕೆ ನೀಡುವ ಹೂವಿನಿಂದಲೇ ಬರೋಬ್ಬರಿ 200 ಕೆ.ಜಿ.ಯಷ್ಟು ತ್ಯಾಜ್ಯ ಸೃಷ್ಟಿಯಾಗುತ್ತದೆ. ಮಂಗಳವಾರ ಮತ್ತು ಭಾನುವಾರ ಈ ತ್ಯಾಜ್ಯದ ಪ್ರಮಾಣ 500 ಕೆ.ಜಿ. ದಾಟಬಹುದು. ಕೆಲವು ವಿಶೇಷ ಸಂದರ್ಭದಲ್ಲಿ ಒಂದು ಟನ್ ಮುಟ್ಟಬಹುದು.

ಕಳೆದ ವರ್ಷದವರೆಗೂ ಬಳಕೆಯಾದ ಈ ಹೂವನ್ನು ಲ್ಯಾಂಡ್ ಫಿಲ್ ರೀತಿ ನದಿ ಪಾತ್ರಕ್ಕೆ ಸುರಿಯಲಾಗುತ್ತಿತ್ತು. ಆದರೆ, ದೇವಸ್ಥಾನದಲ್ಲಿ 24 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸುರೇಂದ್ರ ಕುಮಾರ್ ಎಂಬಾತ ಕಳೆದ ವರ್ಷ ಒಂದು ಮಷೀನ್ ಬಳಕೆ ತರಬೇತಿ ಪಡೆದುಕೊಂಡು ಈಗ ಅದೇ ನೈರ್ಮಲ್ಯವನ್ನು ಬಳಸಿ ಕಾಂಪೋಸ್ಟ್ ತಯಾರಿಕೆ ಮಾಡುತ್ತಿದ್ದಾರೆ.

ಮರದ ಹೊಟ್ಟು, ಬಳಕೆಯಾದ ಹೂವನ್ನು ಸೇರಿಸಿ ಪ್ರತಿ ದಿನ 30 ಕೆ.ಜಿ. ಕಾಂಪೋಸ್ಟ್ ಗೊಬ್ಬರ ಉತ್ಪಾದಿಸುತ್ತಿದ್ದಾರೆ. ಈ ಗೊಬ್ಬರಕ್ಕೆ ಹರಿಯಾಣ ಭಾಗದ ರೈತರು ಸೇರಿ ವಿವಿಧ ಕಡೆಗಳಿಂದಲೂ ಬೇಡಿಕೆ ಬಂದಿದೆ.

ಈ ರೀತಿಯ ಬೆಳವಣಿಗೆಯಿಂದ ದೆಹಲಿ ಸುತ್ತಲಿನ ಎಂಟು ಧಾರ್ಮಿಕ ಕೇಂದ್ರಗಳು ಇದೇ ರೀತಿಯಲ್ಲಿ ಹೂವಿನ ತ್ಯಾಜ್ಯವನ್ನು ಕಾಂಪೋಸ್ಟ್ ಆಗಿ ಬಳಸಲು ಮುಂದಾಗಿವೆ. ದೆಹಲಿ ಮೂಲದ ಏಂಜಲಿಕ್ ಫೌಂಡೇಶನ್ ಈ ಪ್ರಯತ್ನದಲ್ಲಿ ಸಾಥ್ ನೀಡಿದೆ.

ಇನ್ನೊಂದು ಉದಾಹರಣೆ ಎಂದರೆ ಕಾನ್ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ 49 ದೇವಾಲಯಗಳೊಂದಿಗೆ ಕೆಲಸ ಮಾಡುತ್ತಿರುವ ಕರಣ್ ರಸ್ತೋಗಿ ಹಾಗೂ ಅಂಕಿತ್ ಅಗರವಾಲ್, ಹೂವುಗಳನ್ನು ಸಂಗ್ರಹಿಸಿ ಧೂಪದ ಉದ್ಯಮಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲೂ ಸಹ ಇಬ್ಬರು ಇಂಥದ್ದೇ ಉದ್ಯಮ ಆರಂಭಿಸಿದ್ದಾರೆ.

ತ್ಯಾಜ್ಯಗಳನ್ನು ಖಾಲಿ ಪ್ರದೇಶದಲ್ಲಿ ಸುರಿಯುವುದರಿಂದ ಅಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಗೊಬ್ಬರ ರೂಪ ನೀಡಿದರೆ ಸದ್ಭಳಕೆಯಾಗುತ್ತದೆ ಎಂಬುದು ಏಂಜಲಿಕ್ ಫೌಂಡೇಷನ್ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...