alex Certify ಇಲ್ಲಿದೆ ಹಲ್ಲು ನೋವಿನ ತಕ್ಷಣ ಪರಿಹಾರಕ್ಕೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಹಲ್ಲು ನೋವಿನ ತಕ್ಷಣ ಪರಿಹಾರಕ್ಕೆ ಮನೆ ಮದ್ದು

ಹಲ್ಲು ನೋವು ಬರಲು ಬಹು ಮುಖ್ಯ ಕಾರಣ ಹಲ್ಲುಗಳ ಮಧ್ಯೆ ಉಳಿಯುವ ಕೊಳೆ. ಪಿಷ್ಟ ಮತ್ತು ಸಿಹಿ ಪದಾರ್ಥಗಳನ್ನು ತಿಂದ ಬಳಿಕ ಸರಿಯಾಗಿ ಹಲ್ಲುಜ್ಜಿ ಅದರ ಅವಶೇಷಗಳನ್ನು ಹೊರಹಾಕದಿದ್ದರೆ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿ ದಂತ ಕುಳಿಗಳನ್ನು ಸೃಷ್ಟಿಸುತ್ತವೆ.

ದವಡೆಯ ಹಲ್ಲುಗಳಲ್ಲಿ ಕುಳಿಗಳಿದ್ದರೆ ಇಲ್ಲಿರುವ ಸೂಕ್ಷ್ಮಸಂವೇದಿ ನರಗಳಿಗೆ ಸಿಹಿ, ಬಿಸಿ ಮತ್ತು ತಣ್ಣಗಿನ ಪದಾರ್ಥಗಳು ಮುಟ್ಟಿದ ಕೂಡಲೇ ನೆತ್ತಿಯ ತನಕ ನೋವು ಏರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರ ಬಳಿಗೆ ಹೋಗಲು ಅವಕಾಶವಿಲ್ಲದಿದ್ದರೆ ಮನೆಯಲ್ಲಿ ಮಾಡಿಕೊಳ್ಳಬಲ್ಲ ಹಲವು ಉಪಾಯಗಳಿವೆ.

* ಪ್ರತಿದಿನ ರಾತ್ರಿ ಊಟವಾದ ಮೇಲೆ ಮತ್ತು ಬೆಳಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಚಮಚ ಹರಳು ಉಪ್ಪು ಕದಡಿ, ಆ ನೀರನ್ನು ಬಾಯೊಳಗೆ ಹಾಕಿ ಸ್ವಲ್ಪ ಹೊತ್ತು ಮುಕ್ಕಳಿಸಿ ಉಗುಳುವುದರಿಂದ ಸೂಕ್ಷ್ಮ ಸಂವೇದನೆ ಶಮನವಾಗುತ್ತದೆ. ಹಲ್ಲುಗಳು ದೃಢವಾಗುತ್ತವೆ.

* ಆಡುಸೋಗೆ ಗಿಡದ ಎಲೆ ಅಥವಾ ಬೇರಿನ ಕಷಾಯದಲ್ಲಿ ಬಾಯಿ ಮುಕ್ಕಳಿಸಿದರೆ ನೋವು ಕೂಡಲೇ ನಿಲ್ಲುತ್ತದೆ. ಶುಂಠಿ ಮತ್ತು ಇಂದುಪ್ಪುಗಳನ್ನು ಜಜ್ಜಿ ದಂತಕುಳಿಯಲ್ಲಿರಿಸಿ ಅಥವಾ ಇದರ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ನೋವು ಮಾತ್ರವಲ್ಲ ಕೀವು, ಬಾವು ಗುಣವಾಗುತ್ತದೆ.

* ಲವಂಗದಲ್ಲಿರುವ ಯುಜಿನಾಲ್ ತೈಲ ದೀರ್ಘಕಾಲದ ನೋವು ನಿವಾರಕ. ಹತ್ತಿಯನ್ನು ಲವಂಗದ ತೈಲದಲ್ಲಿ ಅದ್ದಿ ಚಂಡಿನಂತೆ ಮಾಡಿ ದಂತಕುಳಿಯಲ್ಲಿರಿಸಿದರೆ ಕೂಡಲೇ ನೋವು ತಗ್ಗುತ್ತದೆ. ಲವಂಗ ತೈಲ ಇಲ್ಲವಾದರೆ ಆಲಿವ್ ಎಣ್ಣೆಯು ಆಗುತ್ತದೆ. ಒಂದು ಲವಂಗದ ಕಡ್ಡಿಯನ್ನು ದವಡೆಯಲ್ಲಿ ಇರಿಸಿಕೊಂಡು ಜೊಲ್ಲಿನಲ್ಲಿ ನೆನೆಸುವುದರಿಂದಲೂ ಯುಜಿನಾಲ್ ಬಿಡುಗಡೆಯಾಗುತ್ತದೆ.

* ಗೋಧಿ ಹುಲ್ಲಿನ ರಸದಲ್ಲಿ ಮೌತ್ ವಾಶ್ ಮಾಡಬಹುದು. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆ ತಗ್ಗಿಸಲು ಸಹಕಾರಿ. ಕತ್ತರಿಸಿದ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಎಸಳು, ಕತ್ತರಿಸಿದ ಆಲೂಗಡ್ಡೆಯ ತುಂಡು, ಬಾದಾಮಿ ಸಾರದಲ್ಲಿ ನೆನೆಸಿದ ಹತ್ತಿ ಯಾವುದಾದರೂ ಒಂದನ್ನು ದಂತಕುಳಿಯಲ್ಲಿರಿಸಿ ಹಲ್ಲು ನೋವಿನಿಂದ ಪಾರಾಗಬಹುದು. ವೆನಿಲ್ಲಾ ಸಾರ ಕೂಡ ಶೀಘ್ರ ನೋವನ್ನು ಪರಿಹರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...