alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಚಲದಲ್ಲಿ ಹಕ್ಕು ಚಲಾಯಿಸಲಿದ್ದಾರೆ ಸ್ವತಂತ್ರ ಭಾರತದ ಮೊದಲ ಮತದಾರ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದೆ. ಸ್ವತಂತ್ರ ಭಾರತದಲ್ಲಿ ಮೊದಲು ಮತದಾನ ಮಾಡಿದ ಶ್ಯಾಮ್ ಸರಣ್ ನೇಗಿ ಕೂಡ ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನೇಗಿ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡುತ್ತಿದೆ.

ಶ್ಯಾಮ್ ಸರಣ್ ನೇಗಿಗೆ ಈಗ 100 ವರ್ಷ. ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮತದಾನಕ್ಕೆ ತೆರಳಲು ಕಿನ್ನೌರ್ ಜಿಲ್ಲಾಡಳಿತ ವಿಶೇಷ ವಾಹನದ ವ್ಯವಸ್ಥೆ ಮಾಡುತ್ತಿದೆ. ಮತಗಟ್ಟೆಯಲ್ಲಿ ನೇಗಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತದೆ.

ಮತ ಚಲಾಯಿಸಿದ ನಂತರ ಅವರನ್ನು ಮರಳಿ ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆಯೂ ಇದೆ. ಇದುವರೆಗೆ ಒಮ್ಮೆಯೂ ನೇಗಿ ಮತದಾನ ಮಾಡುವ ಅವಕಾಶ ಕಳೆದುಕೊಂಡಿಲ್ಲ ಅಂತಾ ಅವರ ಮೊಮ್ಮಗಳಾದ ಸುರ್ಮಾ ದೇವಿ ತಿಳಿಸಿದ್ದಾಳೆ. ನೇಗಿ ಒಬ್ಬ ನಿವೃತ್ತ ಶಿಕ್ಷಕರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ 1951ರ ಅಕ್ಟೋಬರ್ 21ರಂದು ಪ್ರಥಮ ಬಾರಿಗೆ ಕಿನ್ನೌರ್ ನಲ್ಲಿ ಚುನಾವಣೆ ನಡೆದಿತ್ತು. ಅಲ್ಲಿ ನೇಗಿ ಮೊದಲು ಮತದಾನ ಮಾಡಿದ್ದರು. ಈ ಬಾರಿ ನವೆಂಬರ್ 9 ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...