alex Certify
ಕನ್ನಡ ದುನಿಯಾ       Mobile App
       

Kannada Duniya

ಇದುವರೆಗೂ ನೀವು ಕಂಡು ಕೇಳರಿಯದ ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮ್ ಅಂದ್ರೆ ಸಾಕು ಎಲ್ರಿಗೂ ತಲೆನೋವು ಶುರುವಾಗುತ್ತೆ. ಗಂಟೆಗಟ್ಟಲೆ ವಾಹನಗಳ ಗಿಜಿಗಿಜಿ ಮಧ್ಯೆ ಸಿಕ್ಕಿಹಾಕಿಕೊಂಡು, ಹೊಗೆ ಕುಡಿಯುತ್ತ ಕುಳಿತುಕೊಳ್ಳೋದು ನಿಜಕ್ಕೂ ನರಕಯಾತನೆ. ಜಗತ್ತಿನ ವಿವಿಧೆಡೆ ನೀವು ಕಂಡು ಕೇಳರಿಯದಂತಹ ಸಂಚಾರ ದಟ್ಟಣೆಗಳು ಉಂಟಾಗಿವೆ. ಅವು ಯಾವುದು ಅನ್ನೋದನ್ನು ನೋಡೋಣ.

ಇಂಡೋನೇಷ್ಯಾದ ಬ್ರೆಬ್ಸ್ : 2016ರ ಜುಲೈನಲ್ಲಿ ಸತತ ಮೂರು ದಿನಗಳ ಕಾಲ ಈ ಮಾರ್ಗದಲ್ಲಿ 3 ಮೈಲು ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ದಟ್ಟಣೆಯಲ್ಲಿ ಸಿಕ್ಕು ಒದ್ದಾಡಿ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈದ್ ರಜೆ ಮುಗಿಸಿ ಸಾವಿರಾರು ಮಂದಿ ಏಕಕಾಲಕ್ಕೆ ಬಂದಿದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬ್ರೆಜಿಲ್ ನ ಸಾವ್ ಪಾಲೋ: ಈ ಸ್ಥಳ ಕೂಡ ಮೆಗಾ ಟ್ರಾಫಿಕ್ ಜಾಮ್ ಗಳಿಂದ್ಲೇ ಹೆಸರುವಾಸಿ. 2013ರಲ್ಲಿ ಹಾಲಿಡೇ ವೀಕೆಂಡ್ ಗೂ ಮುನ್ನ ಸುಮಾರು 309 ಕಿಮೀ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅಮೆರಿಕದ ನ್ಯೂಯಾರ್ಕ್ : 1969ರಲ್ಲಿ ನ್ಯೂಯಾರ್ಕ್ ನ ವುಡ್ ಸ್ಟಾಕ್ ಹಬ್ಬಕ್ಕೆ 50,000 ಜನರ ಬದಲು 5 ಲಕ್ಷ ಮಂದಿ ಬಂದಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. 3 ದಿನಗಳ ಕಾಲ 32 ಕಿಮೀವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಚೀನಾದ ಬೀಜಿಂಗ್ : ಬೀಜಿಂಗ್-ಟಿಬೆಟ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 2010ರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು, ಸುಮಾರು 100 ಕಿಮೀ ದೂರಕ್ಕೆ 12 ದಿನಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಜರ್ಮನಿ : 1990ರಲ್ಲಿ ಜರ್ಮನಿಯ ಬರ್ಲಿನ್ ವಾಲ್ ಕುಸಿತದಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಎಲ್ಲರೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಗಾಗಿ ಹೊರಟಿದ್ದರಿಂದ 18 ಮಿಲಿಯನ್ ಕಾರುಗಳು ಒಂದೇ ಬಾರಿ ರಸ್ತೆಗಿಳಿದಿದ್ದವು. ಸುಮಾರು 48 ಕಿಮೀ ದೂರದವರೆಗೂ ಟ್ರಾಫಿಕ್ ಜಾಮ್ ಆಗಿತ್ತು.

ಅಮೆರಿಕದ ಹೋಸ್ಟನ್ : 2005ರ ಸೆಪ್ಟೆಂಬರ್ ನಲ್ಲಿ ಚಂಡಮಾರುತದ ಭೀತಿಯಿಂದ 2.5 ಮಿಲಿಯನ್ ಜನರನ್ನು ಸ್ಥಳಾಂತರ ಮಾಡಲಾಯ್ತು. ಇದರಿಂದ 168 ಕಿಮೀ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. 48 ಗಂಟೆಗಳ ಕಾಲ ಜನರು ಪರದಾಡಬೇಕಾಯ್ತು.

ಫ್ರಾನ್ಸ್ ನ ಪ್ಯಾರಿಸ್ : 1980ರ ಫೆಬ್ರವರಿಯಲ್ಲಿ ಪ್ಯಾರಿಸ್ ನಗರ 175 ಕಿಮೀ ಉದ್ದದ ಟ್ರಾಫಿಕ್ ಜಾಮ್ ಗೆ ಸಾಕ್ಷಿಯಾಗಿದೆ. ಚಳಿಗಾಲದ ರಜೆ ಮುಗಿಸಿ ಎಲ್ಲರೂ ಒಂದೇ ಸಮಯದಲ್ಲಿ ಪ್ಯಾರಿಸ್ ಗೆ ಮರಳಿದ್ರಿಂದ ಈ ಸಮಸ್ಯೆಯಾಗಿತ್ತು.

ರಷ್ಯಾದ ಮಾಸ್ಕೋ : ಸೇಂಟ್ ಪೀಟರ್ಸ್ ಬರ್ಗ್ ಹಾಗೂ ಮಾಸ್ಕೋ ಹೈವೇಯಲ್ಲಿ 201 ಕಿಮೀ ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. 2012ರ ನವೆಂಬರ್ ನಲ್ಲಿ ಹಿಮ ಬಿರುಗಾಳಿ ಬೀಸಿದ್ರಿಂದ ನಡೆದ ಘಟನೆ ಇದು.

ಅಮೆರಿಕದ ನ್ಯೂಯಾರ್ಕ್ : 2001ರ ಸಪ್ಟೆಂಬರ್ 11ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರ ದಾಳಿ ನಡೆದಾಗ ನ್ಯೂಯಾರ್ಕ್ ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸುರಂಗ ಹಾಗೂ ಸೇತುವೆಗಳನ್ನು ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಬೇಕಾಯ್ತು.

ಜಪಾನ್ ನ ಟೋಕಿಯೋ : 1990ರ ಆಗಸ್ಟ್ ನಲ್ಲಿ 135 ಕಿಮೀ ದೂರದವರೆಗೂ 15,000 ಕಾರುಗಳು ಸಾಲುಗಟ್ಟಿ ನಿಂತಿದ್ದವು. ಚಂಡಮಾರುತದ ಭೀತಿಯಿಂದ ಒಂದಷ್ಟು ಜನ ಸುರಕ್ಷಿತ ಸ್ಥಳಕ್ಕೆ ಹೊರಟಿದ್ರೆ, ಇನ್ನೊಂದಷ್ಟು ಮಂದಿ ಹಾಲಿಡೇಗಾಗಿ ತೆರಳುತ್ತಿದ್ದರು.

ಚೀನಾ ಹೆದ್ದಾರಿ : ಇದು ಕೂಡ ಹಾಲಿಡೇ ಸೀಸನ್ ಎಫೆಕ್ಟ್. ಬೀಜಿಂಗ್-ಹಾಂಗ್ ಕಾಂಗ್-ಮಕಾವು ಎಕ್ಸ್ ಪ್ರೆಸ್ ವೇನಲ್ಲಿ 2015ರ ಅಕ್ಟೋಬರ್ ನಲ್ಲಿ 10 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

ಅಮೆರಿಕದ ಚಿಕಾಗೋ: ಫೆಬ್ರವರಿ 2011ರಲ್ಲಿ ಹಿಮಪಾತದಿಂದ ಚಿಕಾಗೋದಲ್ಲಿ ಸಂಚಾರ ದಟ್ಟಣೆಯಾಗಿತ್ತು. ರಸ್ತೆಯ ಮೇಲೆ 51 ಸೆಂಮೀ ಎತ್ತರದವರೆಗೂ ಹಿಮ ಆವರಿಸಿತ್ತು. ಸುಮಾರು 12 ಗಂಟೆಗಳ ಕಾಲ ವಾಹನಗಳು ಹಿಮದಲ್ಲಿ ಹೂತು ಹೋಗಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...