alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಬುದ್ಧಿವಂತಿಕೆಗೂ ಆಯುಷ್ಯಕ್ಕೂ ಇದೆ ಸಂಬಂಧ!

pic_class_chess_3

ಚಿಕ್ಕಂದಿನಲ್ಲಿ ನೀವು ಹೆಚ್ಚು ಬುದ್ಧಿವಂತರಾಗಿದ್ರೆ ನಿಮ್ಮ ಆಯುಷ್ಯವೂ ಗಟ್ಟಿಯಾಗುತ್ತೆ. ಅಂದ್ರೆ ಹೃದಯದ ಸಮಸ್ಯೆಗಳು, ಸ್ಟ್ರೋಕ್, ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್, ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಖಾಲಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ.

ಎಡಿನ್ಬರ್ಗ್ ಯೂನಿವರ್ಸಿಟಿಯಲ್ಲಿ ನಡೆದ ಸಂಶೋಧನೆಯಲ್ಲಿ ಈ ವಿಷಯ ದೃಢಪಟ್ಟಿದೆ. ಬಾಲ್ಯದಲ್ಲಿ ಐಕ್ಯೂ ಚೆನ್ನಾಗಿದ್ರೆ ಅಂಥವರು ದೀರ್ಘಾಯುಷಿಗಳಾಗ್ತಾರೆ ಅನ್ನೋದು ಇದೇ ಕಾರಣಕ್ಕೆ. ಬಾಲ್ಯದಲ್ಲಿನ ಬುದ್ಧಿವಂತಿಕೆ ಹಾಗೂ ಸಾವಿನ ಕಾರಣ ಇವೆರಡರ ಮಧ್ಯೆ ಅವಿನಾಭಾವ ಸಂಭಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು.

ಚಿಕ್ಕ ವಯಸ್ಸಿನಲ್ಲಿ ಬುದ್ಧಿವಂತರಾಗಿದ್ದವರಿಗೆ 79 ವರ್ಷಗಳವರೆಗೂ ಪ್ರಾಣಕ್ಕೆ ಮಾರಕವಾಗುವಂಥಹ ಖಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಸುಮಾರು 70,000 ಜನರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.

ಆದ್ರೆ ಬಾಲ್ಯದಲ್ಲಿ ಅತಿ ಬುದ್ಧಿವಂತರಾಗಿದ್ದು, ನಂತರ ಚಟಕ್ಕೆ ಬಿದ್ದವರಿಗೆ ಈ ಸಂಶೋಧನೆ ಅನ್ವಯವಾಗುವುದಿಲ್ಲ. ತಂಬಾಕು ಸೇವನೆ, ಧೂಮಪಾನದಂತಹ ಚಟವನ್ನು ಅತಿಯಾಗಿ ಮಾಡುವವರಿಗೆ ಬಹುಬೇಗ ಕ್ಯಾನ್ಸರ್ ನಂತಹ ಖಾಯಿಲೆಗಳು ಆವರಿಸುತ್ತವೆ. ಸಾವು ಕೂಡ ಸನಿಹದಲ್ಲೇ ಇರುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...