alex Certify
ಕನ್ನಡ ದುನಿಯಾ       Mobile App
       

Kannada Duniya

ಲಿವ್ ಇನ್ ಸಂಗಾತಿಗೆ ಇದು ತಿಳಿದಿರಲಿ

ಆಧುನಿಕ ಜೀವನ ಶೈಲಿಯಲ್ಲಿ ಲಿವ್ ಇನ್ ರಿಲೇಷನ್ ಈಗ ಸಾಮಾನ್ಯ ವಿಷ್ಯವಾಗ್ತಿದೆ. ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳಿಗೂ ಈ ಪದ್ಧತಿ ಬರ್ತಿದೆ. ಹುಡುಗ-ಹುಡುಗಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗದೆ ಪತಿ-ಪತ್ನಿಯಂತೆ ವಾಸವಾಗ್ತಾರೆ. ಇದು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಕಾರಿ ಎಂಬುದು ಸಾಬೀತಾಗಿದೆ. ಲಿವ್ ಇನ್ ನಲ್ಲಿರುವ ಮುನ್ನ ಅದ್ರ ಬಗ್ಗೆ ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ.

ಲಿವ್ ಇನ್ ನಲ್ಲಿ ನಿಮ್ಮ ಜೊತೆ ಯಾರು ಇರ್ತಾರೆ ಅವ್ರ ಬಗ್ಗೆ ಮೊದಲೇ ತಿಳಿದಿರಬೇಕು. ನಿಮ್ಮ ಸ್ನೇಹಿತರಾಗಿದ್ದರೆ ಅಥವಾ ಅವ್ರ ಬಗ್ಗೆ ಅನೇಕ ವರ್ಷಗಳಿಂದ ನಿಮಗೆ ಗೊತ್ತಿದ್ದರೆ ಒಳ್ಳೆಯದು. ಪೂರ್ವಾಪರ ಗೊತ್ತಿಲ್ಲದೆ, ನಿನ್ನೆ-ಮೊನ್ನೆ ಪರಿಚಯವಾದ ಅಪರಿಚಿತ ವ್ಯಕ್ತಿ ಜೊತೆ ಲಿವ್ ಇನ್ ರಿಲೇಷನ್ ಬೇಡ. ಅದ್ರಲ್ಲೂ ಸಂಗಾತಿ ಆಯ್ಕೆ ವೇಳೆ ಹುಡುಗಿಯರು ಎಚ್ಚರ ವಹಿಸಬೇಕಾಗುತ್ತದೆ. ಲಿವ್ ಇನ್ ನಲ್ಲಿ ಇರಬೇಕೆಂದುಕೊಂಡಿರುವ ವ್ಯಕ್ತಿ ನಿಗೂಢವಾಗಿ ಕಂಡರೆ ಆತನಿಂದ ದೂರವಿರುವುದೇ ಲೇಸು.

ಸಂಬಂಧದಲ್ಲಿ ಸಣ್ಣ-ಪುಟ್ಟ ಗಲಾಟೆ ಸಾಮಾನ್ಯ. ಇದು ಸಂಬಂಧವನ್ನು ಗಟ್ಟಿಮಾಡುತ್ತದೆ. ಆದ್ರೆ ಕೋಪಕ್ಕೆ ಬುದ್ದಿ ಕೊಡಬೇಡಿ. ಸಂಗಾತಿ ಮನಸ್ಸಿಗೆ ಘಾಸಿಯಾಗುವಂತಹ ಯಾವುದೇ ಮಾತುಗಳನ್ನು ಆಡಬೇಡಿ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಿದ್ರೆ ಸಂಬಂಧ ಬಹುದಿನ ಉಳಿಯುತ್ತದೆ.

ಜೀವನದ ಯಶಸ್ಸಿಗೆ ಹಣ ಕೂಡ ಬಹಳ ಮುಖ್ಯ. ದುಬಾರಿ ದುನಿಯಾದಲ್ಲಿ ಒಬ್ಬ ವ್ಯಕ್ತಿ ಇಬ್ಬರ ಹೊಣೆ ಹೊರೋದು ಕಷ್ಟ. ಹಣಕಾಸಿನ ವಿಚಾರವಾಗಿ ಸಂಗಾತಿ ಜೊತೆ ಮಾತುಕತೆ ನಡೆಸಿ. ಕೊಡು-ಕೊಳ್ಳುವಿಕೆ ಕೂಡ ಸಂಬಂಧ ಹಾಳು ಮಾಡುತ್ತದೆ.

ಲಿವ್ ಇನ್ ನಲ್ಲಿ ವಾಸವಾಗುವವರು ಭಾವನಾತ್ಮಕವಾಗಿ ಬಲ ಹೊಂದಿರಬೇಕು. ಅನೇಕ ಬಾರಿ ಸಂಗಾತಿ ಕೆಲಸ, ಹವ್ಯಾಸ ಇಷ್ಟವಾಗುವುದಿಲ್ಲ. ಇದನ್ನು ಅವ್ರ ಬಳಿ ಹೇಳಿದ್ರೂ ಸುಧಾರಣೆ ಕಾಣುವುದಿಲ್ಲ. ಇಂಥ ಸಂದರ್ಭದಲ್ಲಿ ಅದನ್ನು ನಿರ್ಲಕ್ಷ್ಯಿಸಿ ಮುಂದೆ ನಡೆಯುವುದು ಉತ್ತಮ. ಅದನ್ನು ಲಿವ್ ಇನ್ ನಲ್ಲಿರುವವರು ಕಲಿಯಬೇಕಾಗುತ್ತದೆ.

ಮುಂದೇನು ಎಂಬ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿರಬೇಕು. ಮದುವೆ ಹಾಗೂ ಲಿವ್ ಇನ್ ಗೆ ವ್ಯತ್ಯಾಸವಿದೆ. ಮದುವೆಯಾದ ವ್ಯಕ್ತಿಗಳು ದೂರ ಹೋಗಲು ವಿಚ್ಛೇದನ ಎಂಬ ಕಾನೂನಿದೆ. ಆದ್ರೆ ಲಿವ್ ಇನ್ ನಲ್ಲಿ ಕೆಲ ಗಂಟೆಗಳಲ್ಲಿಯೇ ಬೇರೆಯಾಗುವ ಸಂದರ್ಭ ಬರಬಹುದು. ಆ ಸಂದರ್ಭವನ್ನು ಹೇಗೆ ನಿಭಾಯಿಸಬೇಕು. ಮುಂದೆ ಏನು ಮಾಡಬೇಕು ಎಂಬುದನ್ನು ಮೊದಲೇ ಯೋಚನೆ ಮಾಡಿದ್ದರೆ ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...