alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೂವರೆ ವರ್ಷದಲ್ಲಿ 250 ಕೆಜಿ ತೂಕ ಕಳೆದುಕೊಂಡ ಫ್ಯಾಟ್ ಮ್ಯಾನ್

ಮೆಕ್ಸಿಕೋದ ಜುವಾನ್ ಪೆಡ್ರೋ ಫ್ರಾಂಕೋ ವಿಶ್ವದ ಅತ್ಯಂತ ತೂಕದ ವ್ಯಕ್ತಿ ಎನಿಸಿಕೊಂಡಿದ್ದ. 2016ರ ಅಕ್ಟೋಬರ್ ನಲ್ಲಿ 595 ಕೆಜಿ ತೂಕವಿದ್ದ ಜುವಾನ್, ವಿಶ್ವದಾಖಲೆ ಮಾಡಿದ್ದ. ಆದ್ರೀಗ 33 ವರ್ಷದ ಜುವಾನ್ ತೂಕ 345 ಕೆಜಿ. ಕೇವಲ ಒಂದೂವರೆ ವರ್ಷಗಳಲ್ಲಿ ಆತ ಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿದ್ದಾನೆ.

595 ಕೆಜಿ ತೂಕವಿದ್ದಾಗ ಜುವಾನ್ ಗೆ ಎದ್ದು ಕೂರಲು ಸಹ ಸಾಧ್ಯವಾಗುತ್ತಿರಲಿಲ್ಲ, ಆತ ಮಲಗಿಯೇ ಇರುತ್ತಿದ್ದ. ಡಯಾಬಿಟಿಸ್, ಬಿಪಿ ಎಲ್ಲಾ ಸಮಸ್ಯೆಗಳೂ ಇದ್ವು. ತೂಕ ಕಡಿಮೆ ಮಾಡಿಕೊಳ್ಳದಿದ್ದರೆ ಜೀವಕ್ಕೇ ಅಪಾಯವಿದೆ ಅಂತಾ ವೈದ್ಯರು ಹೇಳಿಬಿಟ್ಟಿದ್ದರು. ನಂತರ ಜುವಾನ್ ಡಬಲ್ ಗ್ಯಾಸ್ಟ್ರಿಕ್ ಸರ್ಜರಿ ಮಾಡಿಸಿಕೊಂಡ.

6 ತಿಂಗಳುಗಳ ಕಾಲ ಕಠಿಣ ಡಯಟ್ ಮಾಡಿದ. ಕೈಗಳಲ್ಲೇ ಸೈಕಲ್ ತಿರುಗಿಸುವ ಮೂಲಕ ತನ್ನಿಂದ ಆದಷ್ಟು ವ್ಯಾಯಾಮ ಮಾಡ್ತಾನೆ. ವಾಕರ್ ಸಹಾಯದಿಂದ ನಡೆದಾಡ್ತಾನೆ. ಮೊದಲಿನಂತೆ ಮಲಗಿರುವುದಿಲ್ಲ. ಇನ್ನು ಒಂದೂವರೆ ವರ್ಷದಲ್ಲಿ ಮತ್ತೆ 100 ಕೆಜಿ ತೂಕ ಇಳಿಸಿಕೊಳ್ಳೋ ವಿಶ್ವಾಸ ಜುವಾನ್ ಗಿದೆ. ತಾನೂ ಎಲ್ಲರಂತೆ ನಡೆದಾಡಬೇಕು ಅನ್ನೋದು ಅವನ ಆಸೆ.

ಈಗ ಒಂದು ನಿಮಿಷವನ್ನೂ ವ್ಯರ್ಥ ಮಾಡದೇ ಸ್ವೆಟರ್ ಹೆಣೆಯುತ್ತಾನೆ, ಮನೆಯವರಿಗೆ ವ್ಯಾಪಾರ ಮಾಡಲು ಸಿಹಿ ತಿನಿಸು ತಯಾರಿಸಿ ಕೊಡ್ತಾನೆ. ಹಾಡು ಹೇಳ್ತಾನೆ, ಗಿಟಾರ್ ಬಾರಿಸ್ತಾನೆ. ಸ್ವಪ್ರಯತ್ನದಿಂದ್ಲೇ ತನ್ನ ಬದುಕನ್ನು ಸಹಜ ಸ್ಥಿತಿಗೆ ತಂದುಕೊಳ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...