alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕೆಂದ್ರೆ ಈ ವಿಚಾರ ನಿಮ್ಮ ಗಮನದಲ್ಲಿರಲಿ

ಕಚೇರಿಯಲ್ಲಿ ಕೆಲಸದ ಒತ್ತಡ ಸಹಜ. ಬೇಗ ಎಲ್ಲವನ್ನೂ ಮಾಡಿ ಮುಗಿಸಬೇಕು ಅನ್ನೋ ಟೆನ್ಷನ್ ನಲ್ಲಿ ಒಂದಿಲ್ಲೊಂದು ಯಡವಟ್ಟು ಮಾಡಿಬಿಡ್ತೇವೆ. ಪೈಪೋಟಿ ತೀರಾ ಜಾಸ್ತಿಯಾಗಿರೋದ್ರಿಂದ ಅವಸರ ಮಾಡಲೇಬೇಕಾದ ಅನಿವಾರ್ಯತೆ ಇದೆ. ಕೆಲಸದ ಮಧ್ಯೆ ನಾವು ಮಾಡ್ತಿರೋ ತಪ್ಪುಗಳು ಯಾವುದು ನೋಡೋಣ.

ಯಾವುದೇ ಕಾರಣಕ್ಕೂ ನಿಮ್ಮ ಮೇಲಾಧಿಕಾರಿ ಬಗ್ಗೆ ಪತ್ತೇದಾರಿ ಕೆಲಸ ಮಾಡಲು ಹೋಗಬೇಡಿ. ಸೂಪರ್ ವೈಸರ್ ಗಳನ್ನೇ ಅನುಮಾನಿಸೋದು ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ಉದ್ಯೋಗಿಗಳ ನಡುವಣ ಸಂಬಂಧವನ್ನೂ ಹದಗೆಡಿಸುತ್ತದೆ.

ನಿಮಗೆ ವಹಿಸಿರುವ ಕೆಲಸವನ್ನು ಮುಗಿಸಲು ನೀವೇ ಖುದ್ದು ಜವಾಬ್ಧಾರಿ ತೆಗೆದುಕೊಳ್ಳಿ. ಅವಧಿಗೂ ಮೊದಲೇ ಕೆಲಸ ಪೂರ್ಣಗೊಂಡ್ರೆ, ಬಾಸ್ ಇನ್ನೇನಾದ್ರೂ ಕೆಲಸ ಹೇಳುವವರೆಗೆ ಕಾಯುತ್ತಾ ಕೂರಬೇಡಿ. ನೀವೇ ಮುತುವರ್ಜಿ ವಹಿಸಿ ಕೆಲಸ ಮಾಡಿ, ಇದರಿಂದ ಮೇಲಾಧಿಕಾರಿಗಳ ದೃಷ್ಟಿಯಲ್ಲಿ ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಕೂಡ ಮೂಡುತ್ತದೆ.

ಚೆನ್ನಾಗಿ ಕೆಲಸ ಮಾಡಿದಾಗ ಯಾರಾದ್ರೂ ಹೊಗಳಿದ್ರೆ ಖುಷಿಯಾಗೋದು ಸಹಜ. ಅದೇ ರೀತಿ ತಪ್ಪಾದಾಗ ಅದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಕೂಡ ನಿಮ್ಮಲ್ಲಿರಲಿ. ಮನುಷ್ಯ ಅಂದ್ಮೇಲೆ ತಪ್ಪು ಮಾಡೋದು ಸಹಜ. ಅದನ್ನು ತಿದ್ದಿಕೊಳ್ಳಬೇಕು ಅಷ್ಟೆ.

ಸಾಮಾಜಿಕ ಜಾಲತಾಣಗಳು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಅತಿಯಾದ್ರೆ ಅದು ಕೂಡ ಅಪಾಯಕಾರಿಯೇ. ಕಚೇರಿ ಕೆಲಸದ ಸಮಯದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಬೇಡಿ. ವರ್ಕ್ ಬ್ರೇಕ್ ಗಳಲ್ಲಿ ಮಾತ್ರ ಬ್ರೌಸ್ ಮಾಡಿ.

ಪ್ರತಿ ಉದ್ಯೋಗಿಗಳಿಗೇ ಬೇರೆ ಬೇರೆ ವಿಭಾಗಗಳಲ್ಲಿ ಜವಾಬ್ಧಾರಿ ವಹಿಸಲಾಗಿರುತ್ತದೆ. ಅದರರ್ಥ ಬೇರೆ ಕೆಲಸವನ್ನು ನೀವು ಮಾಡಲೇಬಾರದು ಎಂದಲ್ಲ. ಹೊಸದೇನನ್ನಾದ್ರೂ ಹೇಳಿದ್ರೆ ಅದು ನನ್ನ ಕೆಲಸವಲ್ಲ ಎಂದು ಹೇಳಿ ಸುಮ್ಮನಾಗಬೇಡಿ.

ವೃತ್ತಿಪರ ಕ್ಷೇತ್ರದಲ್ಲಿ ಇಮೇಲ್ ಬರೆಯುವ ಪ್ರತಿಭೆ ನಿಮ್ಮಲ್ಲಿ ಇರಲೇಬೇಕು. ಪರ್ಫೆಕ್ಟ್ ಆಗಿ ಇಮೇಲ್ ಬರೆಯೋದು, ಬಂದಿರೋ ಇಮೇಲ್ ಗೆ ಸರಿಯಾಗಿ ರಿಪ್ಲೈ ಮಾಡುವುದು ನಿಮಗೆ ಗೊತ್ತಿರಲಿ. ಇಮೇಲ್ ಕಳಿಸಲು ಅಥವಾ ರಿಪ್ಲೈ ಮಾಡಲು ವಿಳಂಬ ಮಾಡಬೇಡಿ. ಇದನ್ನು ಅಸಭ್ಯ ಮತ್ತು ಅದಕ್ಷ ನಡವಳಿಕೆಯೆಂದು ಪರಿಗಣಿಸಲಾಗುತ್ತದೆ.

ಪ್ರೆಸೆಂಟೇಶನ್ ಗೆ ತಯಾರಿ ಸರಿಯಾಗಿ ಮಾಡಿಕೊಳ್ಳಿ. ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೇ ಯಾವುದೇ ಕಾರಣಕ್ಕೂ ಪ್ರೆಸೆಂಟೇಶನ್ ಕೊಡಬೇಡಿ. ಸರಿಯಾಗಿ ಪ್ರಿಪೇರ್ ಆಗಿದ್ರೆ ಕೊನೆ ಕ್ಷಣದಲ್ಲಿ ಗಾಬರಿ ಬೀಳೋದು ತಪ್ಪುತ್ತದೆ.

ಒಂದೇ ಬಾರಿಗೆ ಹತ್ತಾರು ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ. ಅಂತಿಮವಾಗಿ ಎಲ್ಲವೂ ಯಡವಟ್ಟಾಗಬಹುದು. ಸರಿಯಾಗಿ ಪ್ಲಾನ್ ಮಾಡಿಕೊಂಡು ಒಂದೊಂದೇ ಕೆಲಸಗಳನ್ನು ಪೂರ್ಣಗೊಳಿಸಿ.

ಕಚೇರಿಯಲ್ಲಿ ಗಾಸಿಪ್ ಗಳಿಗೇನೂ ಕೊರತೆಯಿಲ್ಲ. ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡೋದು ಸಾಮಾನ್ಯ. ಆದ್ರೆ ಇದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ಈ ರೀತಿ ಗಾಸಿಪ್ ಮಾಡುವ ಬದಲು ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...