alex Certify
ಕನ್ನಡ ದುನಿಯಾ       Mobile App
       

Kannada Duniya

2018 ರಲ್ಲಿ ನೀವು ಬಿಡಲೆತ್ನಿಸಬೇಕಾದ ಸಂಗತಿಗಳು…!

2017 ಇನ್ನೇನು ಮುಗಿದೇ ಹೋಯ್ತು. 2017 ರಲ್ಲಿ ಕೆಲವೊಂದು ಕಹಿ ಘಟನೆಗಳು ನಡೆದಿರುತ್ತವೆ, ಆದ್ರೆ ಅವನ್ನೆಲ್ಲ ಬಿಟ್ಟು ಬಿಡೋದೇ ಒಳಿತು. ನೀವು ಮರೆಯಲೇಬೇಕಾದ ಕೆಲವೊಂದು ಕ್ರೇಝಿ ಸಂಗತಿಗಳು ಯಾವುದು ಅನ್ನೋದನ್ನು ನೋಡೋಣ.

 

ಯಾವ ಸಂಗತಿಗಳು, ವಸ್ತುಗಳು ನಿಮಗೆ ಖುಷಿ ಕೊಡುವುದಿಲ್ಲವೋ ಅವನ್ನೆಲ್ಲ ಬಿಟ್ಟು ಬಿಡಿ. ಫ್ರೆಶ್ ಆಗಿ 2018ನ್ನು ಆರಂಭಿಸಿ.

Fidget Spinner ಮನಸ್ಸಿನ ಉದ್ವೇಗ, ಆತಂಕ, ಒತ್ತಡವನ್ನು ಕಡಿಮೆ ಮಾಡುತ್ತದೆ ಅಂತಾ ಹೇಳಲಾಗುತ್ತದೆ. ಎಷ್ಟೋ ಜನಕ್ಕೆ ಇದೊಂದು ಚಟವಾಗಿಬಿಟ್ಟಿದೆ. ಹೊಸ ವರ್ಷದ ಆರಂಭದಲ್ಲೇ ಈ ಆಟಿಕೆಯ ಸಹವಾಸ ಬಿಟ್ಟುಬಿಡಿ.

ಡಾಗ್ ಫಿಲ್ಟರ್ ಕೂಡ ಈಗ ಟ್ರೆಂಡ್ ನಲ್ಲಿದೆ. ಆದ್ರೆ 2018 ರಲ್ಲಾದ್ರೂ ಇದನ್ನು ಬಿಟ್ಟುಬಿಡೋದು ಒಳ್ಳೆಯದು.

ಯಾವಾಗ್ಲೂ ಆರಾಮವನ್ನೇ ಬಯಸುವವರು ಹೊಸ ವರ್ಷದಲ್ಲಿ ಕೆಲವೊಂದು ಕುತೂಹಲಕಾರಿ ಸಂಗತಿಗಳ ಕಡೆಗೆ ಗಮನ ಕೊಡಿ. ಹೊಸತನವಿರುವಂಥ ಕೆಲಸವನ್ನು ಮಾಡಿ.

ಬಿಗ್ ಬಾಸ್ ಕ್ರೇಝ್ ಈಗ ಜಾಸ್ತಿಯಾಗಿದೆ. ಬಿಗ್ ಬಾಸ್ ಬಗ್ಗೆ ಅತಿಯಾದ ಆಸಕ್ತಿ ಯಾಕೆ? 2018ರಲ್ಲಿ ಈ ರಿಯಾಲಿಟಿ ಶೋ ಬಗೆಗಿನ ಹುಚ್ಚನ್ನು ಕಡಿಮೆ ಮಾಡಿಕೊಳ್ಳಿ.

ಬಾಡಿ ಶೇಮಿಂಗ್ ಈಗ ಕಾಮನ್ ಆಗಿಬಿಟ್ಟಿದೆ. ಸಾಮಾಜಿಕ ತಾಣಗಳಲ್ಲಂತೂ ಸೆಲೆಬ್ರಿಟಿಗಳು ಇದೇ ಕಾರಣಕ್ಕೆ ಟ್ರೋಲ್ ಗೆ ತುತ್ತಾಗ್ತಿದ್ದಾರೆ. 2018ರಲ್ಲಾದ್ರೂ ಈ ಕೆಟ್ಟ ಅಭ್ಯಾಸವನ್ನು ಬಿಡುವುದು ಒಳಿತು.

ಒಮ್ಮೆ ಮುರಿದು ಬಿದ್ದ ಸಂಬಂಧಕ್ಕೆ ಮತ್ತೆ ಜೋತು ಬೀಳುವುದು ಒಳ್ಳೆಯ ಐಡಿಯಾ ಅಲ್ಲ. ಭವಿಷ್ಯದಲ್ಲಿ ಇದು ನಿಮಗೆ ನೋವು ಕೊಡಬಹುದು.

ಜಾಲತಾಣಗಳಲ್ಲಿ ನಮ್ಮ ಪೋಸ್ಟ್ ಗೆ ಎಷ್ಟು ಲೈಕ್ಸ್, ಕಮೆಂಟ್ಸ್ ಬಂದಿದೆ ಅನ್ನೋ ಕುತೂಹಲ ಸಹಜ. ಆದ್ರೆ ಅದನ್ನೇ ಮನಸ್ಸಿಗೆ ಹಚ್ಚಿಕೊಳ್ಳಬೇಡಿ.

Gucci Gang ಹಾಡನ್ನು ಕೇಳಿದ್ದೀರಾ? ಅದನ್ನು 2018ರಲ್ಲಿ ಮತ್ತೆ ರಿಪೀಟ್ ಮಾಡಬೇಡಿ.

Thong Jeans ಅನ್ನು ಜೀನ್ಸ್ ಅಂತಾ ಕರೆಯೋದು ಕೂಡ ತಪ್ಪು. 2017ರಲ್ಲಿ ಸುದ್ದಿಯಾಗಿದ್ದ ಈ ಫ್ಯಾಷನ್ ಟ್ರೆಂಡ್ ಅತ್ಯಂತ ಕೆಟ್ಟದಾಗಿದೆ. ಹಾಗಾಗಿ ಮುಂದಿನ ವರ್ಷ ಇದನ್ನು ಫಾಲೋ ಮಾಡಬೇಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...