alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷಾಂತರ ಗಳಿಕೆಯ ಉದ್ಯಮವಾಗ್ತಿದೆ ಬ್ರೇಕ್ ಅಪ್ ಮನಸ್ಸುಗಳನ್ನು ಸಂತೈಸುವ ಕೆಲಸ

ಸಂಬಂಧ ಮುರಿದು ಬಿದ್ದಾಗ ನೋವಾಗೋದು ಸಹಜ. ಬೆರಳೆಣಿಕೆಯಷ್ಟು ಜನರು ಮುರಿದು ಬಿದ್ದ ಸಂಬಂಧ ಮರೆತು ಮುಂದೆ ಸಾಗ್ತಾರೆ. ಆದ್ರೆ ಅನೇಕರು ಇದೇ ನೋವಿನಲ್ಲಿ ಊಟ, ಆಹಾರ ಬಿಟ್ಟು, ನಿದ್ರೆ ಕಳೆದುಕೊಂಡು ನೋವುಣ್ಣುತ್ತಾರೆ. ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಮುಂದಾಗುವವರ ಸಂಖ್ಯೆಯೂ ಕಡಿಮೆಯೇನಿಲ್ಲ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮರೆಯಲು ಪ್ರಯತ್ನಿಸುವ ವಿಷ್ಯವನ್ನು ಮತ್ತೆ ಮತ್ತೆ ನೆನಪು ಮಾಡುತ್ವೆ. ಸಂಗಾತಿಯ ಕಮೆಂಟ್, ಫೋಟೋ ಬ್ರೇಕ್ ಅಪ್ ನೋವಿನಲ್ಲಿರುವವರನ್ನು ಮತ್ತಷ್ಟು ನೋವಿಗೆ ತಳ್ಳುತ್ತದೆ. ಇಂಥ ನೋವಿಗೆ ಪರಿಹಾರ ನೀಡುವ ಅನೇಕ ಕೌನ್ಸಿಲ್ ಸೆಂಟರ್ ಗಳು ಈಗ ಹುಟ್ಟಿಕೊಂಡಿವೆ.

ಭಾರತದಲ್ಲಿ ಇದ್ರ ಪ್ರಮಾಣ ಕಡಿಮೆ ಇರಬಹುದು. ಆದ್ರೆ ವಿದೇಶಗಳಲ್ಲಿ ಬ್ರೇಕ್ ಅಪ್ ನಂತ್ರ ಬ್ರೇಕ್ ಅಪ್ ತಜ್ಞರ ಸಲಹೆ ಪಡೆಯುವವರ ಸಂಖ್ಯೆ ಹೆಚ್ಚಿದೆ. ಇದೊಂದು ಉತ್ತಮ ಉದ್ಯೋಗವೆಂದ್ರೆ ತಪ್ಪಾಗಲಾರದು. ತಜ್ಞರು ಸಲಹೆ ನೀಡುವುದೊಂದೇ ಅಲ್ಲ ಕೆಲ ವಿಶೇಷ ತರಬೇತಿಗಳನ್ನು ಆಫರ್ ಮಾಡ್ತಾರೆ.

ಆಕ್ಯುಪಂಕ್ಚರ್, ಕೋಪ ಶಾಂತಗೊಳಿಸಲು ವ್ಯಾಯಾಮ ಸೇರಿದಂತೆ ಧ್ಯಾನ, ಬೇರೆ ಜನರ ಜೊತೆ ಬೆರೆಯುವ ಅವಕಾಶ ನೀಡ್ತಾರೆ. ಪ್ರೇಮಿಗಳು ಪರಸ್ಪರ ನೀಡಿದ್ದ ವಸ್ತುಗಳನ್ನು ವಾಪಸ್ ನೀಡುವ ಕೆಲಸಕ್ಕೆ ಮಧ್ಯವರ್ತಿಗಳಾಗಿ ಕೆಲಸ ಮಾಡ್ತಾರೆ. ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ 24 ಗಂಟೆ ಸೇವೆಗೆ ಸಿದ್ಧರಾಗಿರುತ್ತಾರೆ. ಬ್ರೇಕ್ ಅಪ್ ಮಾಡಿಕೊಂಡವರು ಒಂಟಿಯಾಗಿರಬಾರದು ಎನ್ನುವ ಕಾರಣಕ್ಕೆ ಆ್ಯಪ್ ಮೂಲಕ ಅವರನ್ನು ಬ್ಯುಸಿ ಮಾಡ್ತಾರೆ.  ಆರು ತಿಂಗಳವರೆಗೆ 1.6 ಲಕ್ಷದವರೆಗೆ ಫೀ ಪಡೆಯುವ ಬ್ರೇಕ್ ಅಪ್ ತಜ್ಞರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...