alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯ ರೋಗಿಗಳೂ ಪಡೆಯಬಹುದು ‘ಸೆಕ್ಸ್’ ಸುಖ

ಸೆಕ್ಸ್ ಗೂ ಆರೋಗ್ಯಕ್ಕೂ ವಿಶೇಷ ಕನೆಕ್ಷನ್ ಇದೆ. ಸೆಕ್ಸ್ ಆರೋಗ್ಯ ವೃದ್ಧಿ ಮಾಡುತ್ತೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಸೆಕ್ಸ್ ಎಂಜಾಯ್ ಮಾಡಲು ಬಯಸುತ್ತಾನೆ. ಆದ್ರೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು ಹಾಗೂ ಪಾರ್ಶ್ವವಾಯುವಿಗೆ ತುತ್ತಾದವರು ಸೆಕ್ಸ್ ನಿಂದ ದೂರವಿರ್ತಾರೆ. ಆದ್ರೆ ಇಂಥವರಿಗೊಂದು ಖುಷಿ ಸುದ್ದಿ.

ಹಾರ್ಟ್ ಕೇರ್ ಫೌಂಡೇಶನ್ ವೈದ್ಯ ಡಾ ಕೆ.ಕೆ. ಅಗರ್ವಾಲ್ ಪ್ರಕಾರ, ಹೃದಯ ಖಾಯಿಲೆಯಿಂದ ಬಳಲುವವರಿಗೆ ಸೆಕ್ಸ್ ಗೆ ಸಿದ್ಧವಾಗಿದ್ದೇವೆ ಎನ್ನಿಸಿದ್ರೆ ಅವ್ರು ಸಂಬಂಧ ಬೆಳೆಸಬಹುದು ಎಂದಿದ್ದಾರೆ. ಹೃದಯ ಖಾಯಿಲೆ ಹಾಗೂ ಪಾರ್ಶ್ಚವಾಯು ಖಾಯಿಲೆಯಿಂದ ಬಳಲುವವರು ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗ್ತಾರೆ. ಇದು ಸಾಮಾನ್ಯವೆಂದು ವೈದ್ಯರು ಹೇಳಿದ್ದಾರೆ.

ಶೇಕಡಾ 85 ರಷ್ಟು ಪ್ರಕರಣಗಳಲ್ಲಿ ರೋಗಿಗಳು 3 ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗ್ತಾರೆ. ತೊಂದರೆಯಿಲ್ಲದೆ ಉಸಿರಾಡಲು ಸಾಧ್ಯವಾದ್ರೆ, ಎರಡು ಬಾರಿ ಮೆಟ್ಟಿಲು ಹತ್ತಿ ಇಳಿಯುವಂತಾದ್ರೆ, ಯಾವುದೇ ಅಪಾಯವಿಲ್ಲವೆಂದು ವೈದ್ಯರು ಸರ್ಟಿಫಿಕೇಟ್ ನೀಡಿದ್ರೆ ಆರಾಮವಾಗಿ ಸಂಬಂಧ ಬೆಳೆಸಬಹುದೆಂದು ವೈದ್ಯರು ಹೇಳಿದ್ದಾರೆ. ಯಾವುದೇ ಕೆಲಸಕ್ಕೆ ಕೈ ಹಾಕುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...