alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಷ್ಯ ತಿಳಿದ್ರೆ ಪ್ರತಿ ದಿನ ಸಂಬಂಧ ಬೆಳೆಸ್ತಾರೆ ಪುರುಷರು

2017_7image_12_41_421872904physicalrelation-ll

ಪತಿ-ಪತ್ನಿ ಸಂಬಂಧ ಬಹಳ ಸೂಕ್ಷ್ಮವಾಗಿರುತ್ತದೆ. ಪ್ರೀತಿ ಹಾಗೂ ನಂಬಿಕೆ ಸಂಬಂಧವನ್ನು ಬಲ ಪಡಿಸುತ್ತದೆ. ಮದುವೆ ನಂತ್ರ ದಂಪತಿ ನಡುವೆ ಪ್ರೀತಿ ಜೊತೆಗೆ ಶಾರೀರಿಕ ಸಂಬಂಧ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆ ಮುಖ ಹಾಗೂ ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಹಾಗೆ ಪುರುಷರ ಶರೀರ ಹಾಗೂ ಆರೋಗ್ಯದ ಮೇಲೂ ಶಾರೀರಿಕ ಸಂಬಂಧ ಪ್ರಭಾವ ಬೀರುತ್ತದೆ.

ವೇಗವಾಗಿ ಓಡುತ್ತಿರುವ ಈ ಕಾಲದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಚಿಂತೆ ಕಾಡುತ್ತದೆ. ಇದ್ರಿಂದ ಒತ್ತಡ ಹೆಚ್ಚಾಗುತ್ತದ. ಈ ವೇಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ.

ಶಾರೀರಿಕ ಸಂಬಂಧ ಬೆಳೆಸುವುದರಿಂದ ಒತ್ತಡ ಕಡಿಮೆಯಾಗುವ ಜೊತೆಗೆ ತುಂಬಾ ಸಮಯ ಪುರುಷ ಫಿಟ್ ಆಗಿರ್ತಾನೆ. ಮನಸ್ಸು ಒತ್ತಡ ಮುಕ್ತವಾಗಿರುವುದೇ ಇದಕ್ಕೆ ಕಾರಣ.

ಸಂಶೋಧನೆಯೊಂದರ ಪ್ರಕಾರ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಪುರುಷ ಹಾಗೂ ಮಹಿಳೆ ಐಕ್ಯೂ ಮಟ್ಟ ಹೆಚ್ಚಾಗುತ್ತದೆಯಂತೆ.

ಶಾರೀರಿಕ ಸಂಬಂಧ ಬೆಳೆಸುವ ಪುರುಷನಿಗೆ ಹೃದಯಾಘಾತವಾಗುವ ಪ್ರಮಾಣ ಕಡಿಮೆ. ಶಾರೀರಿಕ ಸಂಬಂಧ ಬೆಳೆಸದ ವ್ಯಕ್ತಿಗಳಲ್ಲಿ ಹೃದಯಾಘಾತವಾಗುವ ಪ್ರಮಾಣ ಹೆಚ್ಚಿರುತ್ತದೆ.

ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮನಸ್ಸು ಉಲ್ಲಾಸಿತಗೊಂಡು ಒತ್ತಡ ಕಡಿಮೆಯಾಗುವುದರಿಂದ ಸುಖ ನಿದ್ರೆ ಬರುತ್ತದೆ.

ಕ್ಯಾಲೋರಿ ನಿಯಂತ್ರಣಕ್ಕೂ ಸೆಕ್ಸ್ ಬೆಸ್ಟ್. ಸೆಕ್ಸ್ ಕ್ಯಾಲೋರಿ ನಿಯಂತ್ರಿಸುವ ಜೊತೆಗೆ ಬೊಜ್ಜಿನ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...