alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಸೆಕ್ಸ್ ಬೇಕಾ..? ಬೇಡ್ವಾ…?

ಮದುವೆಯ ಮೊದಲ ರಾತ್ರಿ ಬಗ್ಗೆ ಅನೇಕರಿಗೆ ಅನೇಕ ಗೊಂದಲಗಳು ಕಾಡೋದು ಸಹಜ. ಮೊದಲ ರಾತ್ರಿಯೇ ಸಂಬಂಧ ಬೆಳೆಸೋದು ಎಷ್ಟು ಸರಿ? ಈ ಪ್ರಶ್ನೆ ದಾಂಪತ್ಯ ಜೀವನಕ್ಕೆ ಕಾಲಿಡುವವರನ್ನು ಕಾಡುತ್ತದೆ. ಇದ್ರ ಅಂತಿಮ ನಿರ್ಧಾರ ದಂಪತಿಗೆ ಬಿಟ್ಟಿದ್ದು. ಆದ್ರೆ ಅರೆಂಜ್ ಮ್ಯಾರೇಜ್ ನಲ್ಲಿ ದಂಪತಿ ನರ್ವಸ್ ಆಗಿರುತ್ತಾರೆ. ಹಾಗಾಗಿ ತಜ್ಞರ ಅಭಿಪ್ರಾಯವನ್ನು ತಿಳಿದಿಟ್ಟುಕೊಳ್ಳುವುದು ಸೂಕ್ತವೆನಿಸುತ್ತದೆ.

ಮೊದಲ ರಾತ್ರಿ ಸಂಬಂಧ ಬೆಳೆಸುವ ಮೊದಲು ಮಾನಸಿಕವಾಗಿ ಇಬ್ಬರೂ ಸಿದ್ಧರಾಗಬೇಕಾಗುತ್ತದೆ. ವರ ತನ್ನ ಸಂಗಾತಿಯನ್ನು ಸ್ನೇಹಿತೆಯಂತೆ ನೋಡ್ತಾ ಇದ್ದಲ್ಲಿ ಆಕೆಗೆ ನೋವಾಗದಂತೆ ಈ ಬಗ್ಗೆ ನಿಧಾನವಾಗಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ.

ಪುರುಷರು ಈ ಬಗ್ಗೆ ಮಾತನಾಡಲು ಶುರುಮಾಡಿದಾಗ ವಧು ಕೂಡ ತನ್ನ ಅಭಿಪ್ರಾಯವನ್ನು ಪತಿ ಮುಂದಿಡಲು ಧೈರ್ಯ ಮಾಡುತ್ತಾಳೆ. ಆಗ ಸೆಕ್ಸ್ ಬಗ್ಗೆ ಇಬ್ಬರಲ್ಲಿ ಯಾವ ಅಭಿಪ್ರಾಯವಿದೆ ಎಂಬುದು ಹೊರ ಬರುತ್ತದೆ. ಹಾಗಾಗಿ ಮದುವೆಗೆ ಮೊದಲೇ ಅಥವಾ ಮದುವೆಯ ಮೊದಲ ರಾತ್ರಿ ಮಧುಚಂದ್ರದ ಬಗ್ಗೆ ನಿನ್ನ ಅಭಿಪ್ರಾಯವೇನು? ನೀನು ಏನನ್ನು ಬಯಸ್ತಿಯಾ ಎಂಬ ಪ್ರಶ್ನೆಯನ್ನು ಸಂಗಾತಿ ಮುಂದಿಟ್ಟು ಉತ್ತರ ಪಡೆಯಬಹುದಾಗಿದೆ.

ಮೊದಲ ರಾತ್ರಿ ಸೆಕ್ಸ್ ಬೇಕೋ ಬೇಡವೋ ಎಂಬುದನ್ನು ತಜ್ಞರು ಹೇಳಲು ಸಾಧ್ಯವಿಲ್ಲ. ಸಂಗಾತಿ ಒಪ್ಪಿದ್ರೆ ಸಂಬಂಧ ಬೆಳೆಸಿ ಮೊದಲ ರಾತ್ರಿಯನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳಬಹುದು. ಸಂಗಾತಿಗೆ ಆಸಕ್ತಿಯಿಲ್ಲವಾದ್ರೆ ನಿರಾಸೆ ಬೇಡ. ಮೊದಲು ನಂಬಿಕೆ, ವಿಶ್ವಾಸ, ಗೌರವಕ್ಕೆ ಮಹತ್ವ ನೀಡಿ. ನಂತ್ರ ಸಂಬಂಧದ ಬಗ್ಗೆ ಚಿಂತಿಸಿ. ಯಾವುದೇ ಕಾರಣಕ್ಕೂ ಆತುರ ಬೇಡ. ನಿಮ್ಮ ಆತುರ ಸಂಗಾತಿ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ವಿಶ್ವಾಸ, ಗೌರವಕ್ಕೆ ಧಕ್ಕೆಯಾಗುವ ಸಂಭವವಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...