alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಅಡ್ಮಿನ್ ಗಳಿಗೊಂದು ಖುಷಿ ಸುದ್ದಿ

whats appಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಅದರಲ್ಲಿ ಫೇಸ್ ಬುಕ್, ವಾಟ್ಸಾಪ್ ಬಳಕೆದಾರರಂತೂ ಸಿಕ್ಕಾಪಟ್ಟೆ ಜಾಸ್ತಿಯಾಗಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ 100 ಕ್ಕಿಂತ ಹೆಚ್ಚು ಸದಸ್ಯರನ್ನು ಸೇರಿಸಲು ಅವಕಾಶ ಇರಲಿಲ್ಲ.

100 ಕ್ಕಿಂತ ಹೆಚ್ಚು ಸದಸ್ಯರನ್ನು ಸೇರಿಸಲು ಸಾಧ್ಯವಾಗದೇ ಬೇರೆಯ ಗುಂಪು ಮಾಡಬೇಕಿತ್ತು. ಅ್ಮಡಿನ್ ಗಳು ಕೇವಲ 100 ಮಂದಿಯನ್ನು ಮಾತ್ರ ಒಂದು ಗುಂಪಿಗೆ ಸೇರಿಸಲು ಅವಕಾಶ ಇದ್ದ ಕಾರಣ ಕೆಲವೊಮ್ಮೆ ಮಾಹಿತಿ ಹಂಚಿಕೆಗೆ ಸಮಸ್ಯೆಯಾಗುತ್ತಿತ್ತು. ಇದೀಗ ಅಂತಹ ಸಮಸ್ಯೆಗೆ ಮುಕ್ತಿ ಕಾಣಬಹುದಾಗಿದೆ. ಇನ್ನುಮುಂದೆ ಅಡ್ಮಿನ್ ಗಳು ಒಂದು ಗ್ರೂಪ್ ಗೆ 100 ಸಂಖ್ಯೆಯನ್ನು ಮೀರಿ ಅಂದರೆ 256 ಮಂದಿಯನ್ನು ವಾಟ್ಸಾಪ್ ಗ್ರೂಪ್ ಗೆ ಸೇರಿಸಬಹುದಾಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ ವಾಟ್ಸಾಪ್ ಬಳಕೆದಾರರ ಸಂಖ್ಯೆ 100 ಕೋಟಿಯನ್ನೂ ಮೀರಿದ್ದು, ಗ್ರೂಪ್ ಗೆ ಹೆಚ್ಚು ಸದಸ್ಯರನ್ನು ಸೇರಿಸಲು ಅನುಕೂಲ ಕಲ್ಪಿಸಲಾಗಿದೆ. ಆಂಡ್ರಾಯಿಡ್ ಹೊಸ ವರ್ಷನ್ ನಲ್ಲಿ ಮಾತ್ರ ಇದ್ದ ಈ ಸೌಲಭ್ಯವನ್ನು www.whatsapp.com ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...