alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷದ ಶುಭಾಶಯ ಕೋರಲು ಇಲ್ಲಿದೆ ಟಿಪ್ಸ್

2017ಕ್ಕೆ ಗುಡ್ ಬೈ ಹೇಳೋ ಸಮಯ ಬಂದೇ ಬಿಟ್ಟಿದೆ. 2018ನ್ನು ವೆಲ್ಕಮ್ ಮಾಡಲು ಇನ್ನೊಂದೇ ದಿನ ಬಾಕಿ. ಹೊಸ ವರ್ಷ ಅಂದ್ರೆ ಹೊಸ ನಿರೀಕ್ಷೆ, ಹೊಸ ಭರವಸೆ, ಹೊಸ ಕನಸು, ಹೊಸ ನಿರ್ಣಯಗಳ ಆಗರ.

ಸ್ನೇಹಿತರು, ಕುಟುಂಬಸ್ಥರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಸುಸಮಯ ಇದು. ನಿಮ್ಮ ಪ್ರೀತಿಪಾತ್ರರಿಗೆ ಕೃತಜ್ಞತೆಗಳನ್ನು ಅರ್ಪಿಸಿ. ಅವರು ನಿಮ್ಮ ಬದುಕಿನಲ್ಲಿ ಎಷ್ಟು ಮಹತ್ವ ಪಡೆದಿದ್ದಾರೆ ಅನ್ನೋದನ್ನು ವ್ಯಕ್ತಪಡಿಸಿ.

ಕಷ್ಟದ ಸಮಯದಲ್ಲಿ, ತುರ್ತು ಪರಿಸ್ಥಿತಿಗಳನ್ನು ನೆರವಾದವರನ್ನು ಕೂಡ ಈ ಸಮಯದಲ್ಲಿ ನೆನೆಯಲೇಬೇಕು. ನೀವು ಕೊಟ್ಟಿರೋ ಭರವಸೆಗಳನ್ನು ಈಡೇರಿಸುವತ್ತ ಮುಂದಡಿ ಇಡಲು ಹೊಸ ವರ್ಷಕ್ಕಿಂತ ಬೆಸ್ಟ್ ಟೈಮ್ ಇನ್ಯಾವುದೂ ಇಲ್ಲ.

ಯಾರಾದ್ರೂ ನಿಮಗೆ ನೋವುಂಟು ಮಾಡಿದ್ರೆ ಅದನ್ನು ಮರೆತುಬಿಡಿ, ಅವರನ್ನು ಕ್ಷಮಿಸಿ. ಹೊಸತನದೊಂದಿಗೆ ಹೊಸವರ್ಷವನ್ನು ಸ್ವಾಗತಿಸಿ. ಹೊಸ ವರ್ಷದ ದಿನ ಸಂಭ್ರಮಾಚರಣೆ ಎಲ್ರೂ ಮಾಡ್ತಾರೆ. ಅದರ ಜೊತೆಗೆ ಒಂದಷ್ಟು ಒಳ್ಳೆಯ ನಿರ್ಣಯಗಳನ್ನೂ ತೆಗೆದುಕೊಂಡರೆ ಚೆನ್ನ.

ನಿಮ್ಮ ಪ್ರೀತಿಪಾತ್ರರಿಗೆಲ್ಲ ಹೊಸವರ್ಷದ ಶುಭಾಶಯ ಹೇಳಿ. ಸುಂದರವಾದ ಗ್ರೀಟಿಂಗ್ ಕಾರ್ಡ್ ಕಳಿಸಿ. ಅಥವಾ ಅವರೊಂದಿಗೆ ಕಾಲಕಳೆಯಿರಿ. ಇಲ್ಲವಾದಲ್ಲಿ ಫೋನ್ ಕರೆ ಮಾಡಿಯೂ ಶುಭಾಶಯ ಹೇಳಬಹುದು.

ದೂರದಲ್ಲಿದ್ರೆ ಸುಂದರ ಮೆಸೇಜ್ ಕಳಿಸಬಹುದು. ನ್ಯೂ ಇಯರ್ ಗಾಗಿಯೇ ವಿಶೇಷ ಶುಭಾಶಯವಿರೋ ಗ್ರೀಟಿಂಗ್ಸ್ ಕಳಿಸಿ. ಎಸ್ ಎಂ ಎಸ್ ಅಥವಾ ಇಮೇಜ್ ಗಳನ್ನು ಕೂಡ ಕಳಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...