alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಯಲ್ಲಿ ಪಾಸ್ ಆಗಲು ಅಪ್ಪಿತಪ್ಪಿಯೂ ಅಕ್ರಮ ಮಾರ್ಗ ಅನುಸರಿಸಬೇಡಿ

ಸ್ಕೂಲ್ ನಲ್ಲಿದ್ದಾಗ ಎಕ್ಸಾಂ ಬಂತೆಂದ್ರೆ ಸಾಕು ಎಲ್ಲರಿಗೂ ಢವಢವ. ಕೆಲವರು ಓದಿಕೊಂಡು ತಯಾರಾಗಿದ್ರೆ ಇನ್ನು ಹಲವಾರು ವಿದ್ಯಾರ್ಥಿಗಳು ಹೇಗಪ್ಪಾ ಪಾಸ್ ಆಗೋದು ಅಂತಾ ಬೇರೆ ದಾರಿ ಹುಡುಕುತ್ತಿದ್ರು. ಹೇಗಾದ್ರೂ ಸರಿ ಪಾಸಾಗಲೇ ಬೇಕು ಅಂತಾ ಕಳ್ಳದಾರಿ ಕಂಡು ಹಿಡೀತಿದ್ರು. ಅದೆಲ್ಲಾ ದೊಡ್ಡವರಾದ ಮೇಲೆ ನೆನೆಸಿಕೊಳ್ಳೋದೇ ಒಂದು ಖುಷಿ. ಆದರೆ ಯಾವುದೇ ಕಾರಣಕ್ಕೂ ಪಾಸ್ ಆಗುವ ಸಲುವಾಗಿ ಅಕ್ರಮ ಮಾರ್ಗಕ್ಕೆ ಮುಂದಾಗಬೇಡಿ. ಆಗ ಅನುಸರಿಸುತ್ತಿದ್ದ ಕಳ್ಳ ಮಾರ್ಗಗಳು ಈಗ ನೆನೆಸಿಕೊಳ್ಳಲ್ಲಷ್ಟೇ ಚೆಂದ.

ಪೆನ್ಸಿಲ್ ಬಾಕ್ಸ್ ಒಳಗೆ ಪುಟ್ಟದಾದ  ಕಾಪಿ ಚೀಟಿ ಇಟ್ಟುಕೊಂಡು ಹೋಗೋದು ಬಹುತೇಕ ಮಕ್ಕಳ ಸರ್ವೇ ಸಾಧಾರಣ ಕಾಪಿ ವಿಧಾನ.

ಮಣಿಕಟ್ಟಿನ ಜಾಗದಲ್ಲಿ ಮಹತ್ವದ ಉತ್ತರಗಳನ್ನು ಬರೆದುಕೊಂಡು ಹೋಗೋದೂ ಕೂಡ ಖಾಯಂ ಚಾಲ್ತಿಯಲ್ಲಿದ್ದ ಕಾಪಿ ವಿಧಾನ.

ಇನ್ನೂ ಅನೇಕ ಹುಡುಗರು ಶೂ ಒಳಗೆ ಉತ್ತರದ ಚೀಟಿ ಇಟ್ಟುಕೊಂಡು ಬರ್ತಿದ್ದುದು ಬಹುತೇಕರಿಗೆ ನೆನಪಿರಲೇಬೇಕು.

ದೊಡ್ಡದಾದ ಎರೇಸರ್ ಮಧ್ಯಭಾಗದಲ್ಲಿ ಕಟ್ ಮಾಡಿ ಅದರೊಳಗೆ ಪುಟ್ಟ ಪುಟ್ಟ ಕಾಪಿ ಚೀಟಿ ಇಟ್ಟುಕೊಳ್ಳುತ್ತಿದ್ದದ್ದು ಒಂದು ಐಡಿಯಾ ಆಗಿತ್ತು.

ವಾಶ್ ರೂಂ ಗಳಲ್ಲಿ ಉತ್ತರದ ಹಾಳೆಗಳನ್ನಿರಿಸಿ ಜ್ಯೂನಿಯರ್ ವಿದ್ಯಾರ್ಥಿಗಳಿಂದ ತರಿಸಿಕೊಳ್ಳುತ್ತಿದ್ದುದು ಬಹುತೇಕ ಸ್ಕೂಲ್ ಗಳಲ್ಲಿ ನಡೆಯುತ್ತಿತ್ತು.

ಕೆಲವೊಮ್ಮೆ ಪುಸ್ತಕಗಳನ್ನೇ ವಾಶ್ ರೂಂ ಗಳಲ್ಲಿಟ್ಟು ನಂತರ ಅದನ್ನು ಹೇಗೋ ತರಿಸಿಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳೆಷ್ಟೊ.

ಉತ್ತರ ಪತ್ರಿಕೆಗಳಂತೆಯೇ ಇರುವ ಕಾಪಿ ನೋಟ್ ಗಳನ್ನ ನೋಡಿಕೊಂಡು ಬರೆಯುವುದು ಸಾಮಾನ್ಯವಾಗಿ ಬಹುತೇಕ ವಿದ್ಯಾರ್ಥಿಗಳು ಅನುಸರಿಸೋ ನಕಲು ವಿಧಾನ.

ನೀರಿನ ಬಾಟಲಿಯ ಲೇಬಲ್ ಹಿಂಭಾಗದಲ್ಲಿ ಉತ್ತರಗಳನ್ನು ಬರೆದುಕೊಂಡು ನಕಲು ಮಾಡುವುದು.

ಪೆನ್ನಿನ ರಿಫಿಲ್ ಒಳಗೆ ಕಾಪಿ ಚೀಟಿ ಸುತ್ತಿಡುವುದು.

ಕಾಣದಂತೆ ಬರೆಯುವ ಪೆನ್ ಗಳಿಂದ ಉತ್ತರ ಬರೆದಿಟ್ಟುಕೊಂಡಿರುವುದು.

ಆದರೆ ಈಗ ಪರೀಕ್ಷಾ ವಿಧಾನ ಬದಲಾಗಿದೆ. ಕಟ್ಟುನಿಟ್ಟಾಗಿ ಪರೀಕ್ಷೆಗಳು ನಡೆಯುತ್ತಿದ್ದು, ಅಪ್ಪಿತಪ್ಪಿಯೂ ಪಾಸ್ ಆಗಲು ಅಕ್ರಮ ದಾರಿ ಹಿಡಿಯಬೇಡಿ. ಇದರಿಂದ ನಿಮ್ಮ ಮುಂದಿನ ಭವಿಷ್ಯಕ್ಕೇ ಮಾರಕವಾಗುತ್ತದೆ. ಹೀಗಾಗಿ ಕಷ್ಟಪಟ್ಟು ಓದಿ ಯಶಸ್ಸು ಗಳಿಸಲು ಯತ್ನಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...