alex Certify
ಕನ್ನಡ ದುನಿಯಾ       Mobile App
       

Kannada Duniya

ಶಹಬ್ಬಾಸ್: 3 ಕೋಟಿ ಮೌಲ್ಯದ ಮನೆಯಿದ್ರೂ ಪರೋಟಾ ಮಾರ್ತಾಳೆ ಮಹಿಳೆ

urvashi

ಈ ಮಹಿಳೆ ಬಳಿ ಗುರ್ಗಾಂವ್ ನಲ್ಲೊಂದು 3 ಕೋಟಿ ಮೌಲ್ಯದ ಮನೆ ಇದೆ. ದುಬಾರಿ ಬೆಲೆಯ ಎಸ್.ಯು.ವಿ. ಕಾರಿದೆ. ನೀವೂ ನಂಬ್ತಿರೋ ಬಿಡ್ತಿರೋ ಈ ಮಹಿಳೆ ಬೀದಿ ಬದಿಯಲ್ಲಿ ಪರೋಟಾ, ರಾಯ್ತಾ ಅಂತಾ ಬಗೆ ಬಗೆಯ ರುಚಿ ರುಚಿ ಆಹಾರವನ್ನು ಮಾರಾಟ ಮಾಡ್ತಾಳೆ.

ವರದಿ ಪ್ರಕಾರ, 34 ವರ್ಷದ ಈ ಮಹಿಳೆ ಹೆಸರು ಊರ್ವಶಿ ಯಾದವ್. ಹಿಂದೆ ಸ್ಕೂಲಿನಲ್ಲಿ ಪಾಠ ಹೇಳ್ತಿದ್ದಳಂತೆ ಊರ್ವಶಿ. 15 ದಿನಗಳ ಹಿಂದೆ ಊರ್ವಶಿ ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡಲು ಶುರುಮಾಡಿದ್ದಾರೆ. ಅವರ ಪತಿ ಹಾಸಿಗೆ ಹಿಡಿದಿರುವುದೇ ಇದಕ್ಕೆ ಕಾರಣ. ಕನ್ ಸ್ಟ್ರಕ್ಷನ್ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಊರ್ವಶಿ ಪತಿ ಅಮಿತ್ ಯಾದವ್ ಕೆಲಸ ಮಾಡ್ತಿದ್ದರು. ಊರ್ವಶಿ ಮಾವ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್.

ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಊರ್ವಶಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. 12 ವರ್ಷದ ಮಗಳು ಹಾಗೂ 7 ವರ್ಷದ ಮಗನ ಭವಿಷ್ಯಕ್ಕಾಗಿ ಇದು ಅನಿವಾರ್ಯ ಎನ್ನುತ್ತಾಳೆ ಊರ್ವಶಿ. ಅಂಗಡಿ ತೆಗೆದು 15 ದಿನಗಳಾಗಿದ್ದು, ಈಗಲೇ ಊರ್ವಶಿ, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಊರ್ವಶಿ ದಿನಕ್ಕೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ದುಡಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...