alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ಋಷಿ: ರೆಕಾರ್ಡ್ ಗಾಗಿ ಎಲ್ಲ ಹಲ್ಲುಗಳನ್ನೇ ಕಿತ್ತುಕೊಂಡ- ಮೈಮೇಲೆ 500 ಹಚ್ಚೆ..!

rishi2

ಗಿನ್ನಿಸ್ ರೆಕಾರ್ಡ್ ಸೇರಲು ಅನೇಕರು ಪ್ರಯತ್ನ ಮಾಡ್ತಾರೆ. ಒಂದು ಕ್ಷೇತ್ರದಲ್ಲಿ ಸತತ ಪ್ರಯತ್ನದ ನಂತ್ರ ದಾಖಲೆ ಬರೆಯಲು ಯಶಸ್ವಿಯಾಗ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಗಿನ್ನಿಸ್ ರೆಕಾರ್ಡ್ ಮಾಡುವುದೇ ಜೀವನವಾಗಿಬಿಟ್ಟಿದೆ. ಒಂದಲ್ಲ ಒಂದರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡ್ತಿದ್ದಾನೆ. ಈ ವ್ಯಕ್ತಿ ಸ್ವತಃ ತನ್ನನ್ನು ಗಿನ್ನಿಸ್ ಋಷಿ ಎಂದು ಕರೆದುಕೊಂಡಿದ್ದಾನೆ.

ಉರಿಯುತ್ತಿರುವ 50 ಮೇಣದ ಬತ್ತಿಯನ್ನು ಬಾಯಿಯಲ್ಲಿಟ್ಟುಕೊಳ್ಳುವುದರಿಂದ ಹಿಡಿದು 366 ಟ್ಯಾಟೂಗಳನ್ನು ಮೈಮೇಲೆ ಹಾಕಿಸಿಕೊಳ್ಳುವವರೆಗೂ ಸುಮಾರು 20 ರೆಕಾರ್ಡ್ ಬರೆದಿದ್ದಾನೆ ಈತ. ಇನ್ನೊಂದು ರೆಕಾರ್ಡ್ ಗಾಗಿ ಈತ ತನ್ನೆಲ್ಲ ಹಲ್ಲುಗಳನ್ನೇ ಕಿತ್ತುಕೊಂಡಿದ್ದಾನೆ. 1942ರಲ್ಲಿ ನವದೆಹಲಿಯ ಸಿನಿಮಾ ಹಾಲೊಂದರಲ್ಲಿ ಜನಿಸಿದ ಹರ್ ಪ್ರಕಾಶ್, ಸ್ನೇಹಿತರ ಜೊತೆ 1001 ಗಂಟೆ ಬೈಕ್ ಓಡಿಸಿ ಮೊದಲ ರೆಕಾರ್ಡ್ ಬರೆದಿದ್ದ.

ರೆಕಾರ್ಡ್ ಬುಕ್ ಸೇರಲು ಈತ ಚಿತ್ರವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದಾನೆ. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ಫಿಜ್ಜಾ ನೀಡಿ ಬಂದಿದ್ದಾನೆ. ಇಷ್ಟೇ ಅಲ್ಲ ನಾಲ್ಕು ನಿಮಿಷದೊಳಗೆ ಒಂದು ಬಾಟಲ್ ಟೊಮೊಟೋ ಕೆಚಪ್ ಸೇವಿಸಿದ್ದಾನೆ ಹರ್ ಪ್ರಕಾಶ್. ತಾನೊಂದೇ ಅಲ್ಲ ತನ್ನ ಕುಟುಂಬವನ್ನು ರೆಕಾರ್ಡ್ ಮಾಡಲು ಪ್ರೇರೇಪಿಸುತ್ತಾನೆ. 1991ರಲ್ಲಿ ಪತ್ನಿ ಬಿಮಲಾ ರೆಕಾರ್ಡ್ ಬುಕ್ ಸೇರಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...